Daily Archives: ಜನವರಿ 2, 2021

ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದ್ದು, ನಾನೇ ಕಟ್ಟಿ ಬೆಳೆಸಿದ ಕ್ಷೇತ್ರ,ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ :ರಮೇಶ್ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದ್ದು, ನಾನೇ ಕಟ್ಟಿ ಬೆಳೆಸಿದ ಕ್ಷೇತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಆಗಿನ ಮುಖನೇ ಬೇರೆ ಈಗೀನ ಮುಖನೇ ಬೇರೆ. ನಾನು ಮುಂದಿನ ಬಾರಿ ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಟಾಂಗ್​ ಕೊಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಆಕೆಯ ಗಾಡ್ ಫಾದರ್ ಇಬ್ಬರೂ ಪ್ರಚಾರ ಪ್ರೀಯರು. ನಾವು ಪ್ರಚಾರ …

Read More »

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ.:

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹೀಗಾಗಿ ಅದರ ಬಗ್ಗೆ ಚರ್ಚೆ ಬೇಡ. ಅವಧಿ ಮುಗಿಯುವವರೆಗೂ ಬಿ.ಎಸ್.‌ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಅವರು ಕೇಂದ್ರದ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಆ ಕುರಿತು ಅವರೇ ಅಂತಿಮ ನಿರ್ಧಾರ ಕೈಗೊಳ್ಳುವರು ಎಂದರು.   ಶಿವಮೊಗ್ಗದಲ್ಲಿ ನಡೆಯಲಿರುವ ಕೋರ್ ಕಮೀಟಿಗೆ ಹಾಜರಾಗಲಿದ್ದೇನೆ. ಪ್ರತಿ …

Read More »

ಉತ್ತಮ ನಟ, ನಟಿ ಯಾರು? ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ

ನವದೆಹಲಿ: ಹೊಸ ವರ್ಷದ ಸಂಭ್ರಮದ ನಡುವೆ 2020ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ದಕ್ಷಿಣ (ಸೌತ್) ಪ್ರಶಸ್ತಿ ಶನಿವಾರ(ಜನವರಿ 02) ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣಗೆ ಈ ಪ್ರಶಸ್ತಿ ಲಭಿಸಿದೆ. ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಸೇರಿದಂತೆ ನಾಲ್ಕು ಚಿತ್ರರಂಗದಲ್ಲಿನ ಪ್ರತಿಭಾವಂತ ನಟರನ್ನು ಗುರುತಿಸಿ ಈ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಈ ಬಾರಿ …

Read More »

ಅರುಣ್ ಸಿಂಗ್ ಅವರನ್ನು ಶನಿವಾರ ಭೇಟಿಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ತ್ವರಿತವಾಗಿ ಅನುಮತಿ ನೀಡುವಂತೆ ಮನವಿ

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಶನಿವಾರ ಭೇಟಿಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ತ್ವರಿತವಾಗಿ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಡೆಯುವ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಸಭೆ ಮತ್ತು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಅರುಣ್ ಸಿಂಗ್ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಭೇಟಿಮಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮತ್ತು …

Read More »

ಬೆಂಗಳೂರು: ವರ್ಗಾವಣೆ ಆಗುವುದು ನನಗೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ. ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಈ ಕುರಿತಂತೆ ಮಾತನಾಡಿದ ಡಿ. ರೂಪಾ ಅವ್ರು, ‘ನಾಳೆಯಿಂದ ಹೊಸ ಹುದ್ದೆ ನಿಭಾಯಿಸಲಿದ್ದೇನೆ. ವರ್ಗಾವಣೆ ಆಗಿರೋದಕ್ಕೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ. ನನ್ನ ವೃತ್ತಿ ಜೀವನದ ವರ್ಷಗಳಿಗಿಂತ ಹೆಚ್ಚು ಬಾರಿ ನಾನು ವರ್ಗಾವಣೆಯಾಗಿದ್ದೇನೆ. ತಪ್ಪು ತೋರಿಸುವುದು, ಸತ್ಯಾಂಶ ಎತ್ತಿ ಹಿಡಿಯುವುದು ಯಾವಾಗಲೂ ಅಪಾಯದಿಂದ ಕೂಡಿರುತ್ತೆ ಅನ್ನೋದು ಗೊತ್ತಿದೆ. ಆದ್ರೆ, ರಾಜಿಯಾಗದೆ ನನ್ನ ಕೆಲಸ ನಾನು ಮುಂದುವರಿಸುತ್ತೇನೆ’ ಎಂದರು.

ಬೆಂಗಳೂರು: ವರ್ಗಾವಣೆ ಆಗುವುದು ನನಗೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ. ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಈ ಕುರಿತಂತೆ ಮಾತನಾಡಿದ ಡಿ. ರೂಪಾ ಅವ್ರು, …

Read More »

ಏಷ್ಯಾ ಖಂಡದಲ್ಲೇ ಗದಗ ಜಿಲ್ಲೆಯ ಮೆಣಸಿನಕಾಯಿಗೆ ಹೆಚ್ಚಿದ ಬೇಡಿಕೆ! ಚಿನ್ನದ ಬೆಲೆ ಬಂದಿದ್ದೆ ತಡ ಆರಂಭವಾದ ಕಳ್ಳರ ಕಾಟ!

ಗದಗ: ಇಡೀ ಏಷ್ಯಾ ಖಂಡದಲ್ಲೇ ಗದಗ ಜಿಲ್ಲೆಯ ಮೆಣಸಿನಕಾಯಿಗೆ ಎಲ್ಲೆಲ್ಲದ ಬೇಡಿಕೆ. ಹೌದು ಈ ಭಾರಿ ಅನಾವೃಷ್ಟಿ ನಡುವೆ ಅದ್ಭುತವಾಗಿ ಮೆಣಸಿನಕಾಯಿ ಫಸಲು ಬಂದಿದೆ. ಹೀಗಾಗಿ ಮೆಣಸಿನಕಾಯಿ ಬೆಳೆದ ರೈತರು ಬಂಪರ್‌ ಮೇಲೆ ಬಂಪರ್ ಹೊಡೆಯುತ್ತಿದ್ದಾರೆ. ಆದರೆ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದ್ದೆ ತಡ, ಅನ್ನದಾತರಿಗೆ ಹೊಸ ಟೆನ್ಶನ್ ಶುರುವಾಗಿದೆ. ಗದಗ ಜಿಲ್ಲೆಯ ಮೆಣಸಿನಕಾಯಿ ಅಂದ್ರೆ ಸಾಕು ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಈ ಭಾರಿ ಅತಿ ಹೆಚ್ಚು ಬೆಲೆಗೆ …

Read More »

ಸೌರವ್ ಗಂಗೂಲಿಗೆ ಲಘು ಹೃದಯಾಘಾತ..!

ನವದೆಹಲಿ,ಜ.2- ಮಾಜಿ ಕ್ರಿಕೆಟ್ ಆಟಗಾರ ಹಾಗೂ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ವುಡ್‍ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.  48 ವರ್ಷದ ಗಂಗೂಲಿ ಅವರಿಗೆ ಲಘು ಹೃದಯಾಘಾತ ವಾಗಿದೆ. ಅದೃಷ್ಟವಶಾತ್ ತೊಂದರೆಯೇನಿಲ್ಲ. ಈಗ ಅವರು ಅರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ತಮ್ಮ ಮನೆಯ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಆಯಾಸಗೊಂಡಿದ್ದರು. ಕುಸಿದು ಬಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ. ಪರೀಕ್ಷೆ …

Read More »

ರೈತರ ಆದಾಯ ದ್ವಿಗುಣಕ್ಕೆ ಮೋದಿ ಸರ್ಕಾರದಿಂದ ಸಹಕಾರ : B.S.Y.

ಬೆಂಗಳೂರು, ಜ.2- ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಿಳಿಸಿದರು. ಇಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ತೋಟಗಾರಿಕಾ ಮೇಳವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಿಎಫ್‍ಟಿಆರ್‍ಐ ಹಾಗೂ ಭಾರತೀಯ ತೋಟಗಾರಿಕಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ,  ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್ ಗಳ …

Read More »

ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ 2.50 ಕೆ.ಜಿ. ಚಿನ್ನ ವಶ

ಬೆಂಗಳೂರು, ಜ.2- ಮಂಗಳೂರು ಮತ್ತು ಬೆಂಗಳೂರು ಅಂತಾತ್ಟರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಎರಡು ಕಡೆಯಿಂದ ಕಳ್ಳಸಾಗಾಣಿಕೆಯಾಗುತ್ತಿದ್ದ ಒಟ್ಟು 2.50 ಕೆ.ಜಿ. ಚಿನ್ನ ಪತ್ತೆಯಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯು ಗುಪ್ತಚರ ಅಧಿಕಾರಿಗಳು 1024 ಗ್ರಾಮ್ ತೂಕದ ಒಟ್ಟು 52,89,984 ರೂ. ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಚಿನ್ನವನ್ನು ಪೆಸ್ಟ್ ರೂಪದಲ್ಲಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಆರೋಪಿ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು …

Read More »

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2,443 ಹುದ್ದೆಗಳ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿ

ಹಾವೇರಿ : ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2,443 ಹುದ್ದೆಗಳ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಅನುಸೂಚಿತ ಜಾತಿ, ಬುಡಕಟ್ಟು, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಹಿಂದುಳಿದ ವರ್ಗಗಳು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ರಾಜ್ಯದ ಯಾವುದೇ ಮುಖ್ಯ ಅಂಚೆ ಕಛೇರಿಯಲ್ಲಿ ಅಥವಾ ಆಯ್ದ …

Read More »