Breaking News
Home / Uncategorized / ನ್ಯಾಯಾಧೀಶರ ಮುಂದೆಯೇ ರೇವಣ್ಣ ಕಣ್ಣೀರು! ನಾನು ತಪ್ಪೇ ಮಾಡಿಲ್ಲ ಎಂದ ಮಾಜಿ ಸಚಿವ

ನ್ಯಾಯಾಧೀಶರ ಮುಂದೆಯೇ ರೇವಣ್ಣ ಕಣ್ಣೀರು! ನಾನು ತಪ್ಪೇ ಮಾಡಿಲ್ಲ ಎಂದ ಮಾಜಿ ಸಚಿವ

Spread the love

ಬೆಂಗಳೂರು: ಪ್ರಜ್ವಲ್ ರೇವಣ್ಣ ಕೇಸ್‌ನ ಸಂತ್ರಸ್ತ ಮಹಿಳೆಯೊಬ್ಬರ ಕಿಡ್ನಾಪ್ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ. ನಿನ್ನೆ ಎಸ್‌ಐಟಿ ಅಧಿಕಾರಿಗಳು ಎಚ್‌ಡಿ ರೇವಣ್ಣ ಅವರನ್ನು ಬಂಧಿಸಿದ್ದರು. ಇಂದು 17ನೇ ಎಸಿಎಂಎಂ ನ್ಯಾಯಾಧೀಶರ ನಿವಾಸಕ್ಕೆ ಕರೆಯೊಯ್ದಿದ್ದರು.ಈ ವೇಳೆ ನ್ಯಾಯಾಧೀಶರ ಮುಂದೆಯೇ ರೇವಣ್ಣ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ನಾನು ತಪ್ಪು ಮಾಡಿಲ್ಲ, ನಾನು ಕಿಡ್ನಾಪ್ ಮಾಡಿಲ್ಲ.. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ನ್ಯಾಯಾಧೀಶರೆದುರೇ ರೇವಣ್ಣ ಕಣ್ಣೀರು ಸುರಿಸಿದ್ದಾರಂತೆ!

ನ್ಯಾಯಾಧೀಶರ ಎದುರೇ ಕಣ್ಣೀರು ಹಾಕಿದ ರೇವಣ್ಣ

ನ್ಯಾಯಾಧೀಶರ ಮನೆಗೆ ಹೋಗ್ತಿದ್ದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಕಾರಿಂದ ಇಳಿಯುವಾಗಲೂ ಭಾವುಕರಾಗಿದ್ದ ರೇವಣ್ಣ, ಜಡ್ಜ್ ಮುಂದೆ ಕೈ ಮುಗಿದುಕೊಂದು ಗಳಗಳನೆ ಕಣ್ಣೀರು ಸುರಿಸಿದ್ರು ಅಂತ ಹೇಳಲಾಗುತ್ತಿದೆ.

 

 

ನಾನು ತಪ್ಪು ಮಾಡಿಲ್ಲ, ಕಿಡ್ನಾಪ್ ಮಾಡಿಲ್ಲ

ನಾನು ಯಾವುದೇ ಕಿಡ್ನಾಪ್ ಮಾಡಿಲ್ಲ‌, ನಾನು ಯಾವ ತಪ್ಪೂ ಮಾಡಿಲ್ಲ ಅಂತ ರೇವಣ್ಣ ಕಣ್ಣೀರಿಟ್ಟಿದ್ದಾರೆ. ರಾಜಕೀಯ ಷಡ್ಯಂತ್ರ ನಡೆಸಿ ನನ್ನ ಬಂಧನವಾಗಿದೆ. ನಮ್ಮ ತಂದೆ ದೇವೇಗೌಡರ ಮನೆಯಲ್ಲಿದ್ದೆ. ಬೆಂಗಳೂರಿನಲ್ಲೇ ಇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಧೀಶರ ಬಳಿ ಹೇಳಿ ರೇವಣ್ಣ ಭಾವುಕರಾಗಿದ್ದಾರೆ.

ದಾಖಲೆಗೆ ಸಹಿ ಹಾಕಲು ಒಪ್ಪದ ರೇವಣ್ಣ!

ಇನ್ನು ಎಸ್‌ಐಟಿಯಿಂದ ಕರೆದೊಯ್ಯುವಾಗ ದಾಖಲೆಗಳಿಗೆ ಸಹಿ ಹಾಕಲು ಸೂಚಿಸಿದ್ದ ಅಧಿಕಾರಿಗಳು ಸೂಚಿಸಿದ್ರು. ಆದ್ರೆ ಎಚ್‌ಡಿ ರೇವಣ್ಣ ನಿರಾಕರಿಸಿದ್ರು ಎನ್ನಲಾಗಿದೆ. ಆಗ ಅವರದ್ದೇ ಹೇಳಿಕೆ ಬಗ್ಗೆ ಉಲ್ಲೇಖಿಸಿರೋ ರಿಪೋರ್ಟ್ ತೋರಿಸಿ ಅಧಿಕಾರಿ ದ್ರು. ಆ ಬಳಿಕವಷ್ಟೇ ದಾಖಲೆಗಳಿಗೆ ರೇವಣ್ಣ ಸಹಿ ಹಾಕಿದ್ರು.

ನಾಳೆ ರೇವಣ್ಣ ಕರೆದೊಯ್ದು ಸ್ಥಳ ಮಹಜರು?

ನಾಳೆ ಹನ್ನೊಂದು ಗಂಟೆ ಬಳಿಕ ಹಾಸನ ಅಥವಾ ಕೆಆರ್‌ ನಗರಕ್ಕೆ ಎಸ್‌ಐಟಿ ಅಧಿಕಾರಿಗಳು ರೇವಣ್ಣನನ್ನು ಕರೆದೊಯ್ಯುವ ಸಾಧ್ಯತೆ ಇದೆ. ಈಗಾಗಲೇ ಮಹಜರು ಪ್ರಕ್ರಿಯೆಗೆ ಕೆಆರ್ ನಗರಕ್ಕೆ ಕರೆದೊಯ್ಯಬೇಕಾಗಿದೆ ಅಂತ ನ್ಯಾಯಾಧೀಶರೆದುರು ಎಸ್‌ಐಟಿ ಮನವಿ ಮಾಡಿತ್ತು. ಹೀಗಾಗಿ ನಾಳೆ ಸಂತ್ರಸ್ತ ಮಹಿಳೆಯನ್ನು ಪಿಕ್ ಮಾಡಿದ ಸ್ಥಳ ಹಾಗೂ ಕೂಡಿಟ್ಟ ಸ್ಥಳದಲ್ಲಿ ಮಹಜರು ನಡೆಯೋ ಸಾಧ್ಯತೆ ಇದೆ.

ಗೌಪ್ಯ ಸ್ಥಳದ ಬಗ್ಗೆಯೂ ಪರಿಶೀಲನೆ

ಇನ್ಮು ಮಹಿಳೆಯನ್ನು ಕರೆತಂದ ಸತೀಶ್ ಬಾಬು ರೇವಣ್ಣನನ್ನ ಭೇಟಿ ಮಾಡಿಸಿರೋ ಆರೋಪ ಇದ್ದು, ಆ ಸ್ಥಳ ಗೌಪ್ಯವಾಗಿದ್ದು, ಎಸ್ ಐಟಿ ತನಿಖೆ ನಡೆಸಲಿದೆ. ಸದ್ಯ ಕಿಡ್ನಾಪ್ ವಿಚಾರದಲ್ಲಿ ನನ್ನ ತಪ್ಪಿಲ್ಲ ಅಂತ ರೇವಣ್ಣ ಹೇಳಿದ್ದಾರೆ.

ರೇವಣ್ಣ ವಕೀಲರ ಭೇಟಿಗೆ ಅವಕಾಶ

ಇನ್ನು ಎಸ್‌ಐಟಿ ಕಸ್ಟಡಿ ವೇಳೆ ಪ್ರತಿದಿನ ಒಂದು ಗಂಟೆ ವಕೀಲರ ಭೇಟಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 9.30ರಿಂದ 10.30ರ ಸಮಯದಲ್ಲಿ ಭೇಟಿಗೆ ಅವಕಾಶ ನೀಡಲಾಗಿದೆ. ವಕೀಲರ ಭೇಟಿಗೆ ಅವಕಾಶ ನೀಡಿ ನ್ಯಾಯಾಧೀಶರು ಆದೇಶಿಸಿದ್ರು.

ರೇವಣ್ಣಎಸ್‌ಐಟಿಕಸ್ಟಡಿಗೆನೀಡಿದಕೋರ್ಟ್

ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿಯಿಂದ ಅರೆಸ್ಟ್ ಆಗಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಮೇ 8ರವವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ರವೀಂದ್ರಕುಮಾರ್ ಬಿ. ಕಟ್ಟಿಮನಿ ಆದೇಶಿಸಿದ್ದರು.

ಸಂತ್ರಸ್ತೆಯರನೆರವಿಗಾಗಿಎಸ್‌ಐಟಿಹೆಲ್ಪ್‌ಲೈನ್

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್‌ ಕೇಸ್‌ನಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಎಸ್‌ಐಟಿ ವಿಶೇಷ ಸಹಾಯವಾಣಿಯನ್ನು ರಚನೆ ಮಾಡಿದೆ. ಸಂತ್ರಸ್ತರು ಹಾಗೂ ಬಾತ್ಮೀದಾರರ ನೇರವಿಗಾಗಿ 6360938947 ನಂಬರಿನ ಹೆಲ್ಪ್ ಲೈನ್ ತೆರೆದಿರುವ ಬಗ್ಗೆ ಎಸ್‌ಐಟಿ ಮಾಹಿತಿ ನೀಡಿದೆ.


Spread the love

About Laxminews 24x7

Check Also

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ