ಯಮಕನಮರಡಿ ವೈ.ವಿ.ಎಸ್ ಶಾಲಾ ಆವರಣದಲ್ಲಿ ಯ.ವಿ ಸಂಘದ ಪೂರ್ವ-ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ನಡೆದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಅವರು ಅತ್ಯಂತ ಗೌರವದಿಂದ ಮಾಡಿದ ಸನ್ಮಾನವನ್ನು ಪ್ರೀತಿಯಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಬಿ. ಹಂಜಿ, ಉಪಾಧ್ಯಕ್ಷರಾದ ಶ್ರೀ ರಾಮಗೊಂಡಾ ಮುಲಾಜೆ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ .ರಾಜೇಶ ನೇರ್ಲಿ, ಶ್ರೀ ಶ್ರೀಶೈಲ ಯಮಕನಮರಡಿ, ಶ್ರೀ ರವಿ ಹಿರೇಮಠ, ಶ್ರೀ ಮಾರುತಿ ಅಷ್ಟಗಿ, ಶ್ರೀ ಶಿವ ನಾಯಿಕ, ಶ್ರೀ ಮಹೇಶ್ ಬಾತೆ, ಶ್ರೀ ಮಹಾವೀರ ನಾಶಿಪುಡಿ, ಶ್ರೀ ಶಿವನಂದ ಪಡಗುರೆ, ಶ್ರೀ ಶೇಖರಗೌಡ ಮೊದಗೆ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಅನೇಕ ಗಣ್ಯರು, ಶಿಕ್ಷಕ, ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.