Breaking News
Home / ಅಂತರಾಷ್ಟ್ರೀಯ / ಆಸ್ಪತ್ರೆಯಲ್ಲಿ ಶವಗಳ ರಾಶಿ, ವಿಧಿಯಾಟ ಇದೇ ಅಲ್ಲವೇ..? ವಿಶ್ವದ ದೊಡ್ಡಣ್ಣನಿಗೆ ಕೊರೊನಾ ವಕ್ಕಿರಿಸಿ ತಲೆತಿರುಗಿಸಿದೆ

ಆಸ್ಪತ್ರೆಯಲ್ಲಿ ಶವಗಳ ರಾಶಿ, ವಿಧಿಯಾಟ ಇದೇ ಅಲ್ಲವೇ..? ವಿಶ್ವದ ದೊಡ್ಡಣ್ಣನಿಗೆ ಕೊರೊನಾ ವಕ್ಕಿರಿಸಿ ತಲೆತಿರುಗಿಸಿದೆ

Spread the love

ನ್ಯೂಯಾರ್ಕ್,- ಸಾವು ಹೇಗೆ ಬರುತ್ತದೋ ಗೊತ್ತಾಗದೇ ಇಲ್ಲ. ಆದರೆ ಶವ ಸಂಸ್ಕಾರ ಮಾಡಲು ಆಗದಂತಹ ದಿನಗಳೂ ಬರುತ್ತದೆ ಎಂಬುದನ್ನು ಕೊರೊನಾ ತೋರಿಸುತ್ತಿದೆ. ಶ್ರೀಮಂತ-ಬಡವ ಎಂಬುದಿಲ್ಲ ಎಂಬುದಕ್ಕೆ ಉದಾಹರಣೆ ನ್ಯೂಯಾರ್ಕ್‍ನಲ್ಲಿ ವರದಿಯಾಗಿದೆ.

ವಿಶ್ವದ ಶ್ರೀಮಂತ, ಶಕ್ತಿಯುತ ರಾಷ್ಟ್ರವಾಗಿರುವ ಅಮೆರಿಕ ಕೊರೊನಾ ಹೊಡೆತಕ್ಕೆ ತತ್ತರಿಸಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಿದೆ. ಸೋಂಕಿತರು ಲಕ್ಷಗಟ್ಟಲೇ ಏರುತ್ತಿದ್ದಾರೆ. ಉತ್ತಮ ಆರೋಗ್ಯ ಸೇವೆನಗರ ನ್ಯೂಜರ್ಸಿ ರಾಜ್ಯದ ಸಣ್ಣನಗರ ಸೂಸೆಕ್ಸ್ ಎಂಬಲ್ಲಿ ಆಸ್ಪತ್ರೆಯೇ ಶವಾಗಾರವಾಗಿದೆ…!

ಇದನ್ನು ಊಹಿಸಿದರೆ ಬೇಸರ ಕಾಡುತ್ತದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಹಾರೈಕೆ ಮಾಡುತ್ತಿದ್ದವರೇ ಕೊರೊನಾಗೆ ಬಲಿಯಾಗಿದ್ದಾರೆ. ಆದರೆ ಇದು ಯಾರಿಗೂ ತಿಳಿದಿಲ್ಲ. ಆಂಬುಲೆನ್ಸ್‍ನಲ್ಲಿ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ತಂದಿದ್ದ ಆರೋಗ್ಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಯಾರು ಇಲ್ಲದಿರುವುದನ್ನು ಕಂಡು ಅಚ್ಚರಿಗೊಂಡಿದ್ದಾನೆ.

ನಂತರ ಸೋಂಕಿತ ವ್ಯಕ್ತಿಯನ್ನು ವಾರ್ಡ್‍ಗೆ ಶಿಫ್ಟ್ ಮಾಡಿದ ಸಿಬ್ಬಂದಿ ಅಧಿಕಾರಿಗಳಿಗೆ ಕರೆ ಮಾಡಿದಾಗ ಆಸ್ಪತ್ರೆಯಲ್ಲಿ ಎಲ್ಲ ಸಾಧನ ಚಾಲನೆಯಲ್ಲಿದೆ. ಆದರೆ ಸಿಬ್ಬಂದಿಗಳೇ ಇಲ್ಲವಲ್ಲ ಎಂದಿದ್ದಾರೆ ವೈದ್ಯರು.ಅಲ್ಲಿಗೆ ಬಂದ ಪೊಲೀಸರು, ಅಧಿಕಾರಿಗಳು ತನಿಖೆ ಕೈಗೊಂಡಾಗ ಆಸ್ಪತ್ರೆ ಶವಾಗಾರದಲ್ಲಿ ಶವಗಳ ರಾಶಿ ಕಾಣಿಸಿದೆ.

ಶವಗಳನ್ನು ಕೆಡದಂತೆ ಸಂಗ್ರಹಿಸುವ ಕೋಲ್ಡ್ ಸ್ಟೋರೇಜ್‍ನಲ್ಲಿ ಸುಮಾರು 17 ಜನರ ಶವಗಳು ಕಂಡುಬಂದಿವೆ. ವಿಚಿತ್ರವೆಂದರೆ ಈ ಬಾಕ್ಸ್‍ನಲ್ಲಿ ಕೇವಲ 4 ಶವಗಳನ್ನು ಇರಸಬಹುದಷ್ಟೇ. ಆದರೆ ಈ ರೀತಿ ಶವಗಳನ್ನು ಒಂದೇ ಬಾಕ್ಸ್‍ನಲ್ಲಿ ತುರುಕಿರುವುದನ್ನು ನೋಡಿ ಮರುಗಿದ್ದಾರೆ.

ಶಂಕಿತರು ಇದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್‍ಗಳು, ಮೇಲ್ವಿಚಾರಕರು, ಕೆಲ ರೋಗಿಗಳು ಇದ್ದರೆಂದು ಪರಿಶೀಲನೆ ವೇಳೆ ಗೊತ್ತಾಗಿದೆ. ವಿಧಿಯಾಟ ಇದೇ ಅಲ್ಲವೇ..? ವಿಶ್ವದ ದೊಡ್ಡಣ್ಣನಿಗೆ ಕೊರೊನಾ ವಕ್ಕಿರಿಸಿ ತಲೆತಿರುಗಿಸಿದೆ


Spread the love

About Laxminews 24x7

Check Also

ಕವಟಗಿಮಠ, ವಿಶ್ವನಾಥ ಪಾಟೀಲ್ ಗೆ ಕೊರೋನಾ: ಸಭೆಯಲ್ಲಿದ್ದ ಬಿಜೆಪಿ ಮುಖಂಡರಿಗೆಲ್ಲ ಆತಂಕ

Spread the loveಬೆಳಗಾವಿ – ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಮಾಜಿ ಶಾಸಕ, ಕಾಡಾ ಅಧ್ಯಕ್ಷ ವಿಶ್ವನಾಥ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ