ಬೆಂಗಳೂರು : ರಂಜಾನ್ ತಿಂಗಳ ಈ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ, ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಈ 6 ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ರಂಜಾನ್ ದಿನವಾದ ಏಪ್ರಿಲ್ 24ರಿಂದ 25, 2020ರ ವರಗೆ ಎಲ್ಲಾ ಮುಸ್ಲೀಂ ಬಾಂಧವರು ಪಾಲಿಸುವಂತೆ ಸೂಚಿಸಿದೆ. ಅಲ್ಲದೇ ಈ ಮಾರ್ಗ ಸೂಚಿಯ ಅನುಸಾರವೇ ನಡೆದುಕೊಳ್ಳುವಂತೆ ತಿಳಿಸಿದೆ.
ಈ ಕುರಿತಂತೆ ಮಾರ್ಗ ಸೂಚಿ ಬಿಡುಗಡೆ ಮಾಡಿರುವ ರಾಜ್ಯ ಅಲ್ಪ ಸಂಖ್ಯಾತ ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷ, ಮೊಹಮ್ಮದ್ ಯೂಸುಫ್, ಈ 6 ಮಾರ್ಗ ಸೂಚಿಗಳ ಅನುಸಾರವೇ ಈ ಬಾರಿಯ ಕೊರೊನಾ ಸೋಂಕಿನ ಭೀತಿಯ ಸಂದರ್ಭದಲ್ಲಿ ರಂಜಾನ್ ಆಚರಿಸುವಂತೆ ಮುಸ್ಲೀಂ ಬಾಂಧವರಿಗೆ ಮನವಿ ಮಾಡಿದ್ದಾರೆ.
ಇನ್ನೂ ಇದಲ್ಲದೇ, ರಂಜಾನ್ ನಮಾಜ್ ಹೆಸರಿನಲ್ಲಿ ಗುಂಪು ಬೇಡ. ಇಫ್ತಿಯಾರ್ ಕೂಟ ನಡೆಸಬೇಡಿ. 4-5 ಜನ ಅಂತರದಿಂದ ನಮಾಜ್ ಮಾಡಿ. ಹೊರಗೆ ಓಡಾಡುವಾಗ ಮಾಸ್ಕ್ ಧರಿಸಿ. ಬಡವರಿಗೆ ಸಹಾಯ ಹೆಸರಲ್ಲಿ ಗುಂಪು ಬೇಡ. ಮುಸ್ಲೀಮರ ಜೊತೆಗೆ ಇತರರಿಗೂ ಸಹಾಯ ಮಾಡಿ. ನಿಮ್ಮ ಮನೆಯಲ್ಲೇ ರಂಜಾನ್ ಆಚರಿಸಿ.
ದರ್ಗಾ ಮತ್ತು ಮಸೀದಿಗೆ ಹೋಗಬೇಡಿ. ಕೇಂದ್ರ, ರಾಜ್ಯ ಸರ್ಕಾರದ ಸೂಚನೆ ಪಾಲಿಸಿ. ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಿ. ಈ ಮಾರ್ಗಸೂಚಿಗಳು 03-05-2020ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂಬುದಾಗಿಯೂ ರಾಜ್ಯ ವಕ್ಫ್ ಬೋರ್ಡ್ ನ ಅಧಕ್ಷರಾದ ಮೊಹಮ್ಮದ್ ಯೂಸುಫ್ ಮುಸ್ಲೀಂ ಬಾಂಧವರಿಗೆ ಮನವಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಆ 6 ಮಾರ್ಗ ಸೂಚಿಗಳು ಈ ಕೆಳಗಿನಂತಿವೆ. ರಂಜಾನ್ ಮಾಸಾಚರಣೆ ವೇಳೆಯಲ್ಲಿ ಮಸೀದಿ ಮತ್ತು ದರ್ಗಾಗಳಲ್ಲಿ ಸಾಮೂಹಿಕ ಪ್ರರ್ಥಾನೆ ಮಾಡುವಂತಿಲ್ಲ ಧ್ವನಿವರ್ಧಕಗಳ ಮೂಲಕ, ಪ್ರಾರ್ಥನೆಯ ಕುರಿತು ಸಾರ್ವಜನಿಕ ಮಾಹಿತಿ ನೀಡುವಂತಿಲ್ಲ ಧ್ವನಿ ವರ್ಧಕಗಳ ಮೂಲಕ ಅಜಾನ್ ಕೂಗುವುದು ಮತ್ತು ಉಪವಾಸ ವ್ರತ ಅಂತ್ಯ ಕುರಿತಂತೆ ಜೋರಾದ ಶಬ್ದದೊಂದಿಗೆ ಮಾಹಿತಿ ನೀಡುವಂತಿಲ್ಲ
ಹಾಗೆಯೇ ಸಾಮೂಹಿಕ ಪ್ರಾರ್ಥನೆಯ ವೇಳೆ, ಧ್ವನಿ ವರ್ಧಕ ಬಳಸಿ, ಪ್ರವಚನ ನೀಡುವಂತಿಲ್ಲ ಇಫ್ತಾರ್ ಕೂಟಗಳು ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ವಿತರಸಿವಂತಿಲ್ಲ ಮಸೀದಿ ಮತ್ತು ದರ್ಗಾಗಳ ಸುತ್ತಾಮುತ್ತಾ ಯಾವುದೇ ಉಪಹಾರ ಅಂಗಡಿಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.