ಶಾ ಕಾರ್ಯಕ್ರಮದ ಸಂದರ್ಭ ತೇಜಸ್ವಿಸೂರ್ಯ ವಾಟ್ಸಪ್ ಅಕೌಂಟ್ ಡಿಲೀ
ಬೆಂಗಳೂರು, ಜ.19: ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್‌ನಿಂದ ಎಕ್ಸಿಟ್ ಆಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿಸೂರ್ಯ, ಇದೀಗ ತಮ್ಮ ವಾಟ್ಸಪ್ ಖಾತೆಯನ್ನೇ ಅಳಿಸಿ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಜಯನಗರದಲ್ಲಿ ತಮ್ಮ ಕಚೇರಿ ಉದ್ಘಾಟನೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ, ಕೊನೆ ಕ್ಷಣದಲ್ಲಿ ಭದ್ರತಾ ನೆಪ ಹೇಳಿ ಮಾಧ್ಯಮಗಳಿಗೆ ನಿಷೇಧ ಹೇರಿದ್ದರು. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಚೇರಿ ಉದ್ಘಾಟನೆ ಮಾಡಿದ್ದರು.
ಸಂಸದ ತೇಜಸ್ವಿಸೂರ್ಯ ತಮ್ಮ ವಾಟ್ಸಪ್ ಖಾತೆಯನ್ನು ಅಳಿಸಿ ಹಾಕಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್‌ನಿಂದ ಸಂಸದ ತೇಜಸ್ವಿಸೂರ್ಯ ಎಕ್ಸಿಟ್ ಆಗಿದ್ದರು. ಮಾಧ್ಯಮಗಳ ಮೇಲಿನ ಅಸಮಾಧಾನದಿಂದ ಎಕ್ಸಿಟ್ ಆಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಸಂಸದ ತೇಜಸ್ವಿಸೂರ್ಯ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದ ಆಹ್ವಾನಕ್ಕೆ ಸಂಬಂಧಿಸಿದ ಗೊಂದಲ.
ಬೆಂಗಳೂರು ದಕ್ಷಿಣ ಸಂಸದರ ಕಚೇರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟನೆ ಮಾಡಿದ್ದರು. ಇದಕ್ಕೂ ಮೊದಲು ಕಾರ್ಯಕ್ರಮದ ವರದಿಗೆ ಮಾಧ್ಯಮಗಳಿಗೆ ಮೊದಲು ಆಹ್ವಾನಿಸಿ, ನಂತರ ನಿರಾಕರಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯುವ ಸಂಸದ ತೇಜಸ್ವಿಸೂರ್ಯ ಅವರು ತಮ್ಮ ವಾಟ್ಸಪ್ ಖಾತೆಯನ್ನೇ ಅಳಿಸುವ ನಿರ್ಧಾರ ತೆಗೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ. ತಮ್ಮ ರಾಜಕೀಯ ವಿರೋಧಿಗಳ ಮೇಲೆ ಸಾಕಷ್ಟು ಆರೋಪ ಆಡುವ ಯುವ ಸಂಸದ ತೇಜಸ್ವಿಸೂರ್ಯ ಅವರು ಮಾಧ್ಯಮಗಳ ಮೇಲೆ ತಾಳ್ಮೆ ಕೆಳೆದುಕೊಂಡಿರುವುದು ಇದರಿಂದ ತಿಳಿದು ಬಂದಿದೆ.
ಸಂಸದರು ತಮ್ಮ ವಾಟ್ಸಪ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ! ಆಶ್ಚರ್ಯ ಎಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಕುರಿತು ಬಹುದೊಡ್ಡ ಕನಸು, ಗುರಿ ಹೊಂದಿದ್ದಾರೆ. ಆದರೆ ಅವರದ್ದೆ ಪಕ್ಷದ ಯುವ ಸಂಸದರು ಸಾರ್ವಜನಿಕರ ಸಂಪರ್ಕಕ್ಕೆ ಇರುವ ತಮ್ಮ ಖಾತೆಯನ್ನೇ ಅಳಿಸಿ ಹಾಕಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಜನಪ್ರತಿನಿಧಿಗಳ ವರ್ತನೆಯನ್ನು ಜನಸಾಮಾನ್ಯರು ಯಾವಾಗಲೂ ಗಮನಿಸುತ್ತ ಇರುತ್ತಾರೆ. ಅದೇನೆ ಇರಲಿ, ಯುವ ಸಂಸದ ತೇಜಸ್ವಿಸೂರ್ಯ ಅವರು ದಿಢೀರ್ ಅಂತಾ ತಮ್ಮ ವಾಟ್ಸಪ್ ಖಾತೆಯನ್ನು ಅಳಿಸಿಹಾಕಿರುವುದು ಅವರ ಅಭಿಮಾನಿಗಳಲ್ಲಿಯೂ ನಿರಾಸೆಯನ್ನುಂಟು ಮಾಡಿದೆ.