ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಗಾಂಧಿನಗರದಲ್ಲಿರುವ ಬಡ ಕುಟುಂಬದವರಿಗೆ ಹಾಗೂ ಅಗತ್ಯವಿರುವ ಜನತೆಗೆ ದಾನಿಯೊಬ್ಬರು ಕೊಡಮಾಡಿದ ದಿನಸಿ ಸಾಮಗ್ರಿಗಳನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಗುರುವಾರ(ಏ.೧೬) ವಿತರಿಸಿದರು.
ಇಡೀ ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಲಾಕ್ ಡೌನ್ ಘೋಷಿಸಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಕಡ್ಡಾಯವಾಗಿ ಲಾಕ್ ಡೌನ್ ಪಾಲಿಸುವ ಮೂಲಕ ಕರೊನಾ ನಿರ್ಮೂಲನೆಗೆ ಸಹಕರಿಸಬೇಕು ಎಂದು ಸಚಿವ ಸುರೇಶ್ ಅಂಗಡಿ ಅವರು ಮನವಿ ಮಾಡಿಕೊಂಡರು.
ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈತೊಳೆದುಕೊಳ್ಳಬೇಕು ಮತ್ತು ಸಾಮಾಜಿ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ದಿನಸಿ ಸಾಮಗ್ರಿಗಳನ್ನು ಕೊಡ ಮಾಡಿದ ದಾನಿ ಕನ್ನುಭಾಯಿ ಠಕ್ಕರ್, ಅತುಲ್ ಪುರೋಹಿತ, ಸುರೇಶ್ ಗುಂಡೆಪ್ಪನವರ, ಧನಂಜಯ ಜಾಧವ ಮತ್ತಿತರರು ಉಪಸ್ಥಿತರಿದ್ದರು.