Breaking News
Home / ಜಿಲ್ಲೆ / ರಾತ್ರಿ ಸರಿಯಾಗಿ ನಿದ್ದೇ ಇಲ್ಲ ಹಗಲು ಸಣ್ಣ ಮಕ್ಕಳು ಹೊರಗಡೆ ಬರೋ ಹಾಗಿಲ್ಲ ಪ್ರತಿ ದಿನದ ನರಕ ಯಾತನೆ :……

ರಾತ್ರಿ ಸರಿಯಾಗಿ ನಿದ್ದೇ ಇಲ್ಲ ಹಗಲು ಸಣ್ಣ ಮಕ್ಕಳು ಹೊರಗಡೆ ಬರೋ ಹಾಗಿಲ್ಲ ಪ್ರತಿ ದಿನದ ನರಕ ಯಾತನೆ :……

Spread the love

ಕಲ್ಲು ಗಣಿಕಾರಿಕೆಯಿಂದ ಪ್ರತಿನಿತ್ಯ ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರುಹಳ್ಳಿಯ ವಾತಾವರಣ ಎಂದರೆ ಶಬ್ದ ಮಾಲಿನ್ಯ,ವಾಯು ಮಾಲಿನ್ಯ,ಜೊತೆಗೆ ಟ್ರಾಫಿಕ್ ಕಿರಿಕಿರಿ, ಇದು ಯಾವುದೇ ಇಲ್ಲದೆ ಆರಾಮ ಆಗಿ ಇರುವಂತ ಪ್ರದೇಶಕ್ಕೆ ಹಳ್ಳಿ ಅಂತಾರೆ,,ಆದ್ರೆ ಇಲ್ಲೊಂದು ಹಳ್ಳಿಯಲ್ಲಿ ಮಾತ್ರ ರಾತ್ರಿ ಸರಿಯಾಗಿ ನಿದ್ದೇ ಇಲ್ಲ ಹಗಲು ಸಣ್ಣ ಮಕ್ಕಳು ಹೊರಗಡೆ ಬರೋ ಹಾಗಿಲ್ಲ ಇನ್ನು ರಸ್ತೆಯ ಮೇಲೆ ನಡೆದಾಡಲು ಕೂಡಾ ಆಗದ ಪರಿಸ್ಥಿತಿ,ಇನ್ನು ಶಾಲಾ ಶಿಕ್ಷಕರು ನೆಮ್ಮದಿಯಾಗಿ ಪಾಠ ಮಾಡಂಗಿಲ್ಲ ಮಕ್ಕಳು ಕೇಳಗಿಲ್ಲ , ಇದೊಂದು ಹಳ್ಳಿಯ ಪ್ರತಿ ದಿನದ ನರಕ ಯಾತನೆ ಅಂದ್ರೆ ನೀವು ಕೇಳಲೇಬೇಕು..

.ಹೌದು ಹೀಗೆ ಪ್ರತಿನಿತ್ಯ ತಮ್ಮ ಹಳ್ಳಿಯ ವಾತಾವರಣ ಹಾಳಾಗುತ್ತಿರುವ ಬಗ್ಗೆ ಇಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಎಮ್ಮೆಟ್ಟಿ ಗ್ರಾಮದ ಜನರು ರೊಚ್ಚಿಗೆದ್ದಿದ್ದರು.ಇಲ್ಲಿ ದಿನವೆಲ್ಲ ಕಲ್ಲು ಗಣಿಗಾರಿಕೆಯನ್ನು ನಡೆಸುವ ಲಾರಿಗಳನ್ನು ನಿಲ್ಲಿಸಿ ತಮ್ಮ ಆಕ್ರೋಶವನ್ನು ಹೊರಹಾಕುತಿದ್ದರು ಕಳೆದ 15 ವರ್ಷಗಳಿಂದ ಕಲ್ಲು ಗಣಿಗಾರಿಕೆಯಿಂದ ಕಂಗಾಲಾಗಿ ಹೋಗಿದ್ರು…ದಿನನಿತ್ಯ ಮಕ್ಕಳು ಶಾಲೆಯಲ್ಲಿ ಪಾಠ ಕಲಿಯಲು ಆಗಲ್ಲ ಇನ್ನು ರಸ್ತೆಯಲ್ಲಿ ಸರಿಯಾಗಿ ನಡೆಯಲು ಕೂಡಾ ಆಗಲ್ಲ ಹೀಗಾಗಿ ಹಳ್ಳಿಯಲ್ಲಿ ಜೀವನ ಮಾಡೋದಾದ್ರು ಹೇಗೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

…ಇನ್ನು ಇಲ್ಲಿ ಪ್ರತಿನಿತ್ಯ ಸಾವಿರಾರು ಲಾರಿಗಳು ಅಡ್ಡಾಡುವುದರಿಂದ ತುಂಬಾ ತೊಂದ್ರೆ ಆಗ್ತಿದ್ದು ಹೊಲದಲ್ಲಿ ಬೆಳೆದ ಬೆಳೆಗಳ ಮೇಲೆ ದೂಳು ಕೂರುವುದರಿಂದ ಬೆಳೆಗಳ ನಾಶ ಆಗ್ತಿದೆ ,ಇನ್ನು ಗ್ರಾಮದ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ಮನೆಗಳಲ್ಲೂ ಕೂಡಾ ದೂಳು,ಇನ್ನು ರಸ್ತೆಯಲ್ಲಿ ಕಡಿಯನ್ನು ಬಿಳಿಸಿಕೊಂಡು ಹೋಗುವುದರಿಂದ ನಡೆದಾಡಲು ಕೂಡಾ ತೊಂದ್ರೆ ಇದು ಬೆಳ್ಳಿಗ್ಗೆ ಹೊತ್ತಿನ ಸುದ್ದಿಯಾದ್ರೆ ರಾತ್ರಿ ಸಮಯದಲ್ಲಿ ಬಂಡೆಗಳನ್ನು ಒಡೆಯುವ ಸಲುವಾಗಿ ಮದ್ದು ಹಾಗೂ ಜಿಲೇಟಿನ್ ಹಾಕಿ ಬ್ಲಾಸ್ಟ್ ಮಾಡುವುದರಿಂದ ರಾತ್ರಿ ಹಗಲು ಸಪ್ಪಳ ಇನ್ನು ಈ ಸ್ಫೋಟದ ತೀವ್ರತೆಗೆ ಮನೆ ಗೋಡೆಗಳು ಕೂಡಾ ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರ ಆಕ್ರೋಶ…ಇದರ ಬಗ್ಗೆ ಸಂಬಂದ ಪಟ್ಟ ಹಾಗೆ ಕ್ರಷರ್ ಮಾಲೀಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ರು ಕೂಡಾ ನೋ ಯೂಸ್ ಅಂತಾರೆ ಗ್ರಾಮಸ್ಥರು..

 

..ಇನ್ನು ಈ ಗ್ರಾಮದಲ್ಲಿ ಅಧಿಕಾರಿಗಳ ಹಾಗೂ ಕ್ರಷರ ಮಾಲೀಕರ ಜೊತೆ ಹೊಂದಾಣಿಕೆ ಇದ್ದು ಹೀಗಾಗಿ ರಾಜಾರೋಷವಾಗಿ ಇಲ್ಲಿ ಈ ದಂದೇ ನಡೆಸಲಾಗುತ್ತಿದೆ ಅಂತಾರೆ ಇಲ್ಲಿನ ಗ್ರಾಮಸ್ಥರು ಇನ್ನು ನಾವು ಮನೆ ಕಟ್ಟಲು ಇಲ್ಲಿನ ಮಣ್ಣು ಹಾಗೂ ಕಲ್ಲನ್ನು ಬಳಕೆ ಮಾಡಿಕೊಳ್ಳಲು ಹೋದ್ರೆ ತಹಶೀಲ್ದಾರ ಬಂದು ಗಾಡಿಯನ್ನು ಸೀಜ್ ಮಾಡ್ತಾರೆ ಆದ್ರೆ ಇಲ್ಲಿ ರಾಜಾರೋಷವಾಗಿ ಸಾವಿರಾರು ಲಾರಿಗಳು ಓವರ್ ಲೋಡ್ ಮಾಡಿಕೊಂಡು ಕಣ್ಣ ಮುಂದೆ ಹೋದ್ರು ಕೂಡಾ ಇವುಗಳ ಮೇಲೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವುದಿಲ್ಲ ಜೊತೆಗೆ ನಾವು ಸಾಕಷ್ಟು ಬಾರಿ ಮನವಿಯನ್ನು ಮಾಡಿಕೊಂಡರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ…

 

ಒಟ್ಟಿನಲ್ಲಿ ಈ ಒಂದು ಕಲ್ಲು ಗಣಿಗಾರಿಕೆ ಜೊತೆ ಇಲ್ಲಿನ ತಾಲೂಕು ಆಡಳಿತ ಕೈ ಜೋಡಿಸಿರೋದಂತೂ ಸುಳ್ಳಲ್ಲ ಇನ್ನು ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತಪ್ಪಿತಸ್ಥರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳ ಬೇಕಿದೆ…


Spread the love

About Laxminews 24x7

Check Also

ಕರ್ನಾಟಕ ವಿಧಾನಸಭಾ ಚುನಾವಣೆ : ಮೇ. 10 ರಂದು ಎಲ್ಲಾ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

Spread the love ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ( Karnataka Assembly Election 2023 ) ದಿನಾಂಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ