Breaking News
Home / ಜಿಲ್ಲೆ / ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ.: ಸಿದ್ಧರಾಮಯ್

ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ.: ಸಿದ್ಧರಾಮಯ್

Spread the love

ಬೆಂಗಳೂರು: ಕೊರೊನಾ ಸೋಂಕಿನ‌ ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ. ಈ ಪ್ಯಾಕೇಜ್  ‘Too little, Too Late’ ಎನ್ನುವ ಹಾಗಾಗಿದೆ ಎಂದು ವಿರೋಧ ಪಕ್ಷದ ‌ನಾಯಕ‌ ಸಿದ್ಧರಾಮಯ್ಯ ಮಾದ್ಯಮ ಪ್ರಕಟಣೆ ಬಿಡುಗಡೆಗೊಳಿಸಿ ಹೇಳಿದ್ದಾರೆ.:
ದೇಶದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದುದ್ದು ಜನವರಿ ಕೊನೆ ವಾರದಲ್ಲಿ. ಕೊರೊನಾದಿಂದ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ, ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿಯವರು ಫೆಬ್ರವರಿ 12 ರಂದು ಎಚ್ಚರಿಸಿದ್ದರು. ಕೇಂದ್ರ ಸರ್ಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದೇ ಈಗಿನ ಸ್ಥಿತಿಗೆ ಕಾರಣ. ಈಗಾಗಲೇ ವಿಳಂಬವಾಗಿರುವುದರಿಂದ ಸರ್ಕಾರ ಪ್ರಕಟಿಸಿರುವ ಈ ಯೋಜನೆಗಳು ತಕ್ಷಣದಿಂದ ಜಾರಿಗೆ ತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಅವರು ಆಗ್ರಹಿಸಿದರು.
ಬಹಳ ಮುಖ್ಯವಾಗಿ ಸಣ್ಣ ವ್ಯಾಪಾರಿಗಳು, ಅಟೋ, ಟ್ಯಾಕ್ಸಿ ಚಾಲಕರು ವಾಹನ ಖರೀದಿಗೆ ಬ್ಯಾಂಕುಗಳಿಂದ ಸಾಲ‌ ಪಡೆದಿದ್ದಾರೆ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ, ಕನಿಷ್ಠ 3 ತಿಂಗಳ EMI ಪಾವತಿಯನ್ನು ಮುಂದೂಡಬೇಕು.
ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ತುರ್ತಾಗಿ ಗಮನ ನೀಡಬೇಕು. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ‌ ಹಾಗೂ ಹೊಟೇಲ್, ಮಾಲ್, ಚಿತ್ರಮಂದಿರಗಳ ಸಿಬ್ಬಂದಿ, ಡೆಲಿವರಿ ಬಾಯ್‌ಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳೂ ಸೇರಿದಂತೆ ಸಣ್ಣ ಕೈಗಾರಿಕೆಗಳು ಮುಚ್ಚಿವೆ. ಇವರೆಲ್ಲರಿಗೂ ಸಂಬಳ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ನಿಗಾ ವಹಿಸಬೇಕು ಎಂದರು.
ಮಹಿಳೆಯರ ಜನಧನ ಖಾತೆಗೆ ಮಾತ್ರ ತಲಾ ರೂ.500ರ ಕಂತುಗಳಲ್ಲಿ 1500 ರೂಪಾಯಿ ಜಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವರು  ಹೇಳಿದ್ದಾರೆ. ಈ ಸೌಲಭ್ಯವನ್ನು ಪುರುಷರಿಗೂ ವಿಸ್ತರಿಸಬೇಕು ಮತ್ತು ನೆರವಿನ ಮೊತ್ತವನ್ನು ಕನಿಷ್ಠ ರೂ.3000 ಕ್ಕೆ  ಹೆಚ್ಚಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹೆಚ್ಚಿಸಬೇಕೆಂದು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೆ. ಹಣಕಾಸು ಸಚಿವರು ಒಟ್ಟು ವಾರ್ಷಿಕ ರೂ.6000 ದಲ್ಲಿ ರೂ.2000 ದ ಒಂದು ಕಂತನ್ನು ಮುಂಗಡವಾಗಿ ಪಾವತಿಸುವುದಾಗಿ ಹೇಳಿದ್ದಾರೆ. ಇದು ಏನೇನೂ ಸಾಲದು. ಒಟ್ಟು ಮೊತ್ತವನ್ನು ಈಗಿನ ರೂ.6000 ದಿಂದ ರೂ.12,000 ಕ್ಕೆ ಏರಿಸಬೇಕು ಎಂದಿದ್ದಾರೆ.
ಆಹಾರ ಮತ್ತಿತರ ಅವಶ್ಯಕ ಸಾಮಗ್ರಿಗಳ ಮೇಲಿನ GST ಯನ್ನು ಮುಂದಿನ 3 ತಿಂಗಳ ಕಾಲ‌ ಕನಿಷ್ಠ 5% ಕಡಿತಗೊಳಿಸಬೇಕು. ಸಾಕಷ್ಟು ಮಂದಿ ಲಾಕ್ ಡೌನ್‌ಗಿಂತ ಮೊದಲುಊರಿಗೆ ಹೋಗಲಾಗದೆ ಅನಿವಾರ್ಯವಾಗಿ ಬೆಂಗಳೂರು ನಗರ ಮತ್ತು ಜಿಲ್ಲಾ‌ ಕೇಂದ್ರಗಳಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗಾಗಿ ಆಶ್ರಯತಾಣ ನಿರ್ಮಿಸಿ, ಊಟ ವಸತಿ ಕಲ್ಪಿಸಬೇಕು. ಜೀವನಾವಶ್ಯಕ ವಸ್ತುಗಳ ಮಾರಾಟಕ್ಕೆ ನೀಡಬೇಕಾದ ಪಾಸ್‌ಗಳ ಕುರಿತು ಜಿಲ್ಲೆಗಳಲ್ಲಿ‌ ಸ್ಪಷ್ಟತೆ ಇಲ್ಲ. ಬೆಂಗಳೂರಿನಲ್ಲೇ DCP ಕಛೇರಿಯಲ್ಲಿ ಪಾಸ್ ವಿತರಿಸುವ ವ್ಯವಸ್ಥೆ ಇದೆ. ಅಲ್ಲಿಯವರೆಗೆ ಬಡವ್ಯಾಪಾರಿಯೊಬ್ಬ ಹೋಗಲಾಗುವುದೆ? ಕನಿಷ್ಠ ACP ಗೆ ಈ ಅಧಿಕಾರ ವರ್ಗಾಯಿಸಿ. 
ಸರ್ಕಾರದ ಆದೇಶಕ್ಕಾಗಿ ಕಾಯದೆ ಸ್ವಯಂಪ್ರೇರಿತರಾಗಿ ಸ್ವಯಂದಿಗ್ಭಂಧನಕ್ಕೆ ಒಳಪಡಿಸಿಕೊಳ್ಳುವುದು ಇನ್ನು ಕೆಲವು ದಿನ‌ ಜನತೆಯ ದಿನಚರಿಯಾಗಲಿ. ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು ನಮ್ಮ ಜೀವನ ವಿಧಾನವಾಗಲಿ. ಎಂದು ಜನರಲ್ಲಿ‌ ಮನವಿ ಮಾಡಿಕೊಂಡಿದ್ದಾರೆ.

Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ