Breaking News
Home / ಜಿಲ್ಲೆ / ಏನು ಮಾಡ್ತೀರೋ ಗೊತ್ತಿಲ್ಲ…. ಒಂದೇ ಒಂದು ಕಾಲು ಹೊರಗೆ ಕಾಣಬಾರದು….” :ಡಿಸಿಪಿ ಸೀಮಾ ಲಾಟ್ಕರ್

ಏನು ಮಾಡ್ತೀರೋ ಗೊತ್ತಿಲ್ಲ…. ಒಂದೇ ಒಂದು ಕಾಲು ಹೊರಗೆ ಕಾಣಬಾರದು….” :ಡಿಸಿಪಿ ಸೀಮಾ ಲಾಟ್ಕರ್

Spread the love

ಲಾಕ್ ಡೌನ್ ಘೋಷಣೆಯಾದರೂ ಬೆಳಗಾವಿಯಲ್ಲಿ ಜನರು ರಸ್ತೆ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತಲೆ ಕೆಡಿಸಿಕೊಂಡಿದ್ದಾರೆ.

“ನಾವು ಕೆಲಸ ಮಾಡಿದರೂ ಹೇಳಿಸಿಕೊಳ್ಳಬೇಕಾಗಿದೆ… ಏನು ಮಾಡ್ತೀರೋ ಗೊತ್ತಿಲ್ಲ…. ನಾಳೆಯಿಂದ ಒಂದೇ ಒಂದು ಕಾಲು ಹೊರಗೆ ಕಾಣಬಾರದು….” ಎಂದು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಸರಿಯಾಗಿ ಲಾಕ್ ಡೌನ್ ಆಗುತ್ತಿಲ್ಲ ಎಂದು ಯಡಿಯೂರಪ್ಪ ಗುರುವಾರ ಸಂಜೆ ವೀಡಿಯೋ ಕಾನ್ಫರೆನ್ಸ್ ವೇಳೆ ಅಪ್ ಸೆಟ್ ಆಗಿದ್ದರಂತೆ. ಇದರಿಂದ ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ಬಿಸಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಖಾಕಿ ಪೊಲೀಸರಿಗೆ ಲೆಫ್ಟ್ ರೈಟ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಳೆ ಬೆಳಗ್ಗೆ 6.30ರಿಂದ 1 ಗಂಟೆ, ಸಂಜೆ 4ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ರಸ್ತೆಯ ಮೇಲೆ ಒಂದೇ ಒಂದು ಕಾಲು ಕಾಣಬಾರದು ಎಂದಿದ್ದಾರೆ. ಆಸ್ಪತ್ರೆಗೆ ಹೋಗುವವರು ಮತ್ತು ಪಾಸ್ ಹೊಂದಿರುವವರನ್ನು ಹೊರತುಪಡಿಸಿದರೆ ಯಾವುದೇ ನೆಪ ಹೇಳಿ ಹೊರಗೆ ಬಂದರೆ ಬಿಡಬೇಡಿ…. ಲಾಠಿ ಹಿಡಿದುಕೊಂಡೇ ಹೋಗಿ… 4 -5 ಕಾನ್ ಸ್ಟೆಬಲ್ ಗಳು ಗುಂಪಾಗಿ ಇದ್ದು ಕೆಲಸ ಮಾಡಿ ಎಂದು ಸೂಚಿಸಿದ್ದಾರೆ.

ಎಲ್ಲೆಲ್ಲಿ ಜನದಟ್ಟಣೆ ಇರುತ್ತದೆ ಅದನ್ನು ಮೊದಲು ಗುರುತಿಸಿ. ನಿಮ್ಮ ಸೇಫ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಎಪಿಎಂಸಿಯಲ್ಲಿ ಯಾರೂ ಕುಳಿತುಕೊಂಡು ಮಾರಾಟ ಮಾಡುವುದಕ್ಕೆ ಅವಕಾಶ ನೀಡಬೇಡಿ. ತಲೆಯ ಮೇಲೆ ಇಲ್ಲವೇ ತಳ್ಳುವ ಗಾಡಿಯಲ್ಲಿ ಮಾತ್ರ ಮಾರಾಟ ಮಾಡುವುದಕ್ಕೆ ಅವಕಾಶ ನೀಡಿ ಎಂದು ತಿಳಿಸಿದ್ದಾರೆ.

ಸಂಚಾರಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಖಾಕಿ ಪೊಲೀಸರಿಂದ ಸರಿಯಾಗಿ ಕೆಲಸವಾಗುತ್ತಿಲ್ಲ. ನಾಳೆಯಿಂದ ಇದಾಗಬಾರದು. ಜನರು ವಾಕಿಂಗ್ ಕೂಡ ಹೋಗಲು ಅವಕಶ ನೀಡಬೇಡಿ ಎಂದು ಎಚ್ಚರಿಸಿದ್ದಾರೆ.

ಕಠಿಣ ಕ್ರಮ ಆಗಲೇಬೇಕು

ಡಿಸಿಪಿ ಸೀಮಾ ಲಾಟ್ಕರ್ ಹೇಳಿರುವಂತೆ ಬೆಳಗಾವಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ಕ್ರಮ ಆಗಲೇ ಬೇಕು. ಜನರು ಯಾವುದೇ ಜವಾಬ್ದಾರಿ ಇಲ್ಲದೆ ರಸ್ತೆಯ ಮೇಲೆಯೇ ಅಡ್ಡಾಡುತ್ತಿದ್ದಾರೆ. ಕಾರಣವಿಲ್ಲದಿದ್ದರೂ ನಗರ ಸುತ್ತಾಡುತ್ತಿದ್ದಾರೆ. ಮಹಿಳೆಯರೂ ಇದಕ್ಕೆ ಹೊರತಾಗಿಲ್ಲ. ಸಂಜೆ, ಬೆಳಗ್ಗೆ ವಾಕಿಂಗ್ ಕೂಡ ಹೋಗುತ್ತಿದ್ದಾರೆ.

ಕಿರಾಣಿ ಅಂಗಡಿ, ಸುಪರ್ ಮಾರ್ಕೆಟ್ ಗಳಲ್ಲಿ ಅನಗತ್ಯವಾಗಿ ಜನರು ಗುಂಪುಗುಂಪಾಗಿ ಸೇರುತ್ತಿದ್ದಾರೆ. ಹರಟೆ ಹೊಡೆಯುತ್ತ ನಿಲ್ಲುತ್ತಿದ್ದಾರೆ. ಕೊರೋನಾ, ಲಾಕ್ ಡೌನ್ ಇದರ ಅರ್ಥವೇ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಜನರಿಗೆ ಪೊಲೀಸರು ತಕ್ ಪಾಠ ಕಲಿಸಲೇಬೇಕಾಗಿದೆ.

ಕೊರೋನಾ ಒಮ್ಮೆ ನಿಯಂತ್ರಣ ತಪ್ಪಿದರೆ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ನಿಮ್ಮ ಹೆಣವನ್ನು ಪಡೆಯುವುದಕ್ಕೂ ಕುಟುಂಬಸ್ಥರು ಬರುವುದಿಲ್ಲ. ಹೆಣ ಹೂಳುವುದಕ್ಕೂ ಜಾಗಸಿಗದಿರಬಹುದು. ಕೊಲ್ಕತ್ತಾದಲ್ಲಿ ಮೃತನಾದ ವ್ಯಕ್ತಿಯ ಬಾಡಿ ಪಡೆಯುವುದಕ್ಕೂ ಕುಟುಂಬದವರ್ಯಾರೂ ಬರಲೆ ಇಲ್ಲ. ನಂತರ ಸರಕಾರದಿಂದಲೇ ಅಂತ್ಯ ಸಂಸ್ಕಾರ ಮಾಡಲಾಗಿದೆ.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ