Breaking News
Home / ಜಿಲ್ಲೆ / ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿ ಉದ್ಘಾಟಿಸಿದರು

ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿ ಉದ್ಘಾಟಿಸಿದರು

Spread the love

 

ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಪ್ರೌಢ ಶಾಲೆ ರಬಕವಿಯಲ್ಲಿ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ಜರುಗಿತು.

ಈ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿಯವರು ರಿಬ್ಬನ್ ಕಟ್ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಶಾಸಕರಾದ ಸಿದ್ದು ಸವರಿಯವರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನ್ಯಾಮಗೌಡ ಸರ್‌ ಅವರಿಗೆ, ಶಿಕ್ಷಣ ಸಂಯೋಜಕರಾದ ಶ್ರೀಶೈಲ ಬುರ್ಲಿಯವರಿಗೆ ಸನ್ಮಾನ ಮಾಡುವುದರ ಮೂಲಕ ಗೌರವ ಸಮರ್ಪಣೆ ಅರ್ಪಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಶಾಸಕರು ಉತ್ತಮವಾದ ಪರಿಸರದಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆಯಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆದುಕೊಳ್ಳವುದರೊಂದಿಗೆ ಕಲಿಸಿದ ಗುರುಗಳಿಗೆ, ತಂದೆ-ತಾಯಿಗೆ, ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು. ಈ ಶಾಲೆಗೆ ಇನ್ನೂ ಎರಡು ಕೊಠಡಿಗಳನ್ನು ನಿರ್ಮಿಸುವುದರ ಜೊತೆಗೆ ಕಾಲೇಜು ಶಿಕ್ಷಣವನ್ನು ಆರಂಭಿಸಲು ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನ್ಯಾಮಗೌಡ ಸರ್ ಮಾತನಾಡಿ ದೇಶದ ಉಜ್ವಲ ಭವಿಷ್ಯ ಕಟ್ಟಲು ನೆರವಾಗುವ ಪ್ರತಿಯೊಬ್ಬ ವೈದ್ಯ, ಎಂಜಿನಿಯರ್, ವಿಜ್ಞಾನಿ ಹಿಂದೆ ಒಬ್ಬ ಶಿಕ್ಷಕ ಇರುತ್ತಾನೆ. ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರು ತಾಯಿಯಷ್ಟೇ ಮಹತ್ವದ ಪಾತ್ರ ವಹಿಸುತ್ತಾರೆ ಅದೇ ರೀತಿ ವಿದ್ಯಾರ್ಥಿಗಳು ಕೂಡಾ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ.ಡಿ.ಬಳಗಾನೂರ ಶಿಕ್ಷಕರು ಮಾತನಾಡಿ “ಉತ್ತಮ ಸಮಾಜದಲ್ಲಿ ಶಿಕ್ಷಕರ ಸ್ಥಾನವೂ ಉನ್ನತ ಮಟ್ಟದಲ್ಲಿರುತ್ತದೆ. ಕಾರಣ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ನೈಜ ದೇವರು’’ ಎಲ್ಲ ವಿದ್ಯಾರ್ಥಿಗಳು ನೂತನವಾಗಿ ರಚನೆಯಾದ ನೂತನ ಕೊಠಡಿಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಅಭ್ಯಾಸ ಮಾಡಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಪಾರುಖ ಲೇಂಗ್ರೆ ಹಾಗೂ ಎಸ್.ಡಿ.ಎಂ.ಸಿ ಸರ್ವ ಸದಸ್ಯರು, ಶಿಕ್ಷಣ ಪ್ರೇಮಿಗಳಾದ ಯಾಶಿನ ಕಾರಬಾರಿ, ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಂ.ಡಿ.ಬಳಗಾನೂರ, ಸಿಬ್ಬಂದಿಗಳಾದ ಶ್ರೀಮತಿ ಎಂ.ಎನ್.ತಿಕೋಟಿಕರ್ ಎನ್.ಎ.ದೊಡ್ಡಮನಿ, ಶ್ರೀ ರಮೇಶ ಪೂಜಾರಿ, ಶ್ರೀಮತಿ ಎ.ಡಿ.ಮುಲ್ಲಾ, ಶ್ರೀಮತಿ ಗೀತಾ ಕಟ್ಟಿಮನಿ, ಚೇತನ ಗನಾಚಾರಿ, ಶ್ರೀ ಎಂ.ಬಿ‌.ಪಾಗೆ, ಸುಜಾತಾ ಹತ್ತೆನ್ನವರ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಶ್ರೀ ಎಂ.ಎನ್.ಲಕ್ಕಪ್ಪಗೋಳ ನಿರೂಪಿಸಿದರು, ವಿದ್ಯಾರ್ಥಗಳು ಪ್ರಾರ್ಥಿಸಿದರು. ಚೇತನ ಗನಾಚಾರಿ ವಂದಿಸಿದರು.


Spread the love

About Laxminews 24x7

Check Also

ಜಾತಿಗಣತಿ ವೇಳೆ ಉಪಜಾತಿ ಬರೆಸಬೇಡಿ ಎಂಬ ನಿರ್ಣಯಕ್ಕೆ ಪಂಚಮಸಾಲಿ ಶ್ರೀ ವಿರೋಧ

Spread the love ಬಾಗಲಕೋಟೆ, ): ಉಪಜಾತಿ ಬರೆಸಬೇಡಿ ಎಂದು ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ