ಗೋಕಾಕ : ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆಯ ಪ್ರೇರಣೆಯ ಹಿನ್ನೆಲೆಯಲ್ಲಿ ಜಾನಪದ ಕಲೆಯ ಸೊಬಗನ್ನು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜೀವಂತವಾಗಿ ಇಟ್ಟು ಶಾಸಕ ಸತೀಶ ಜಾರಕಿಹೊಳಿ ಅವರ ದೂರದೃಷ್ಟಿ ನಾಯಕತ್ವ ವಿದ್ಯಾರ್ಥಿಗಳ ಪಾಲಿಗೆ ವರದಾನ ವಾಗಿದೆ. ಕೇವಲ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರದಂದು ಆರಂಭಗೊಂಡ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ 19 ನೇ ಸತೀಶ ಶುಗರ್ಸ್ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕೃತಿಕ ಸ್ಪರ್ಧೆಗಳ 2 ದಿನಗಳ ಈ ಭವ್ಯ ಕಾರ್ಯಕ್ರಮವನ್ನು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಗುರುತಿಸುವ ಏಕೈಕ ಉದ್ದೇಶದಿಂದ ಕಳೆದ 19 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸತೀಶ ಶುಗರ್ಸ್ ಅವಾಡ್ರ್ಸ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮವು ಇಡಿ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ಆಗಿದ್ದು ಈ ಭವ್ಯ ವೇದಿಕೆಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಶಾಸಕ ಸತೀಶ ಜಾರಕಿಹೊಳಿಯವರು ವೃತ್ತಿಯಿಂದ ಒಬ್ಬ ರಾಜಕಾರಣಿ ಆಗಿದ್ದರು ಕೂಡ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಔಧ್ಯೋಗೀಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುವುದರ ಜೊತೆಗೆ ಇಡಿ ವಿದ್ಯಾರ್ಥಿ ಸಮುದಾಯದ ಸಂಜೀವಿನಿ ಆಗಿದ್ದಾರೆಂದು ಶ್ಲಾಘಿಸಿದರು.
ಈ ವೇದಿಕೆಯಿಂದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ ಯಾವುದೇ ಕಾರ್ಯಕ್ರಮಗಳು ಪೂಜ್ಯರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರಿಂದ ಉದ್ಘಾಟನೆಗೊಳ್ಳುತ್ತವೆ ಆದರೆ ವಿದ್ಯಾರ್ಥಿಗಳಿಂದ ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ಸಾಂಸ್ಕøತಿಕ ಕಾರ್ಯಕ್ರಮದ ರೂವಾರಿಗಳು ಹಾಗು ಶಾಸಕ ಸತೀಶ ಜಾರಕಿಹೊಳಿ ಅವರಲ್ಲಿರುವ ವಿದ್ಯಾರ್ಥಿಗಳ ಮೇಲಿರುವ ಪ್ರೇಮವೇ ಕಾರಣವೆಂದು ಹೇಳಿದರು.
ಇಂದಿನಿಂದ ಎರಡು ದಿನಗಳ ವರೆಗೆ ನಡೆಯುವ 19 ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿರುವ ಬೃಹತ್ ಆಕಾರದ ಬೆಂಗಳೂರಿನ ಅರಮನೆ ಮಾದರಿಯ ವರ್ಣರಂಜಿತ ವಿದ್ಯುತ್ತ ಅಲಂಕಾರಿತ ಭವ್ಯವಾದ ವೇದಿಕೆ ನೆರೆದ ಜನರ ಮನ ಸೆಳೆಯುತ್ತಾ ನಗರದಲ್ಲಿ ಸಾಂಸ್ಕೃತಿಕ ಹಬ್ಬದ ವಾತಾವರಣ ನಿರ್ಮಿಸಿದೆ.
ಕಳೆದ ಸಾಲಿನ ಸತೀಶ ಶುಗರ್ಸ್ ಅವಾಡ್ರ್ಸ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಶಾಲಾ ವಿಭಾಗದ ಕು. ಸಂಜನಾ ಗಾನೂರ ಸಮಾರಂಭವನ್ನು ಉದ್ಘಾಟಿಸಿದರು.
ವೇದಿಕೆಯ ಮೇಲೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಎ.ಎಸ್.ಜೋಡಗೇರಿ, ಎನ್.ಎಸ್.ಎಪ್. ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ, ಕಳೆದ ಸಾಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಕ್ಷಿತಾ ಮಿರ್ಜಿ, ಪವಿತ್ರಾ ಹತ್ತರವಾಟ, ಆರತಿ ಐದುಡ್ಡಿ, ಸುಜಾನ ನದಾಫ, ಗೋಪಾಲ ದರೂರ, ನಿರಂಜನ ಕನಮಡ್ಡಿ, ಮನೋಜ ಗಂಡವ್ವಗೋಳ ಇದ್ದರು.
ಈ ಭವ್ಯ ವೇದಿಕೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಜಾನಪದ ಗಾಯನ, ಗಾಯನ, ಸೋಲೋ ಡ್ಯಾನ್ಸ್, ಸಮೂಹ ನೃತ್ಯ ಜರುಗಿದವು.
ಎ.ಜಿ.ಕೋಳಿ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಟಿ.ಬಿ.ಬಿಲ್ಲ ವಂದಿಸಿದರು.