Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನದಿಂದ ಸಂತೋಷ ಜಾರಕಿಹೊಳಿ ದಂಪತಿಗಳ ವತಿಯಿಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ‌…!!

ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನದಿಂದ ಸಂತೋಷ ಜಾರಕಿಹೊಳಿ ದಂಪತಿಗಳ ವತಿಯಿಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ‌…!!

Spread the love

ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನದಿಂದ ಸಂತೋಷ ಜಾರಕಿಹೊಳಿ ದಂಪತಿಗಳ ವತಿಯಿಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ‌…!!

ನೂತನ ಸಚಿವರು ಹಾಗೂ ಗೋಕಾಕ ಮತಕ್ಷೇತ್ರದ ಶಾಸಕರು ಆದ ರಮೇಶ ಜಾರಕಿಹೊಳಿ ಅವರ ಹಿರಿಯ ಸುಪುತ್ರ ಯುವಕರ ಕಣ್ಮಣಿ ಸಂತೋಷ ಜಾರಕಿಹೊಳಿ ಅವರು ಇತ್ತೀಚಿಗೆ ಗಂಡು ಮಗುವಿಗೆ ತಂದೆ ಆಗಿದ್ದರು.ತಮ್ಮ ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನದಿಂದ ಅವರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು.ಗಂಡು ಮಗುವಿಗೆ ಜನ್ಮ ನೀಡಿದ ಸಂತೋಷ ಜಾರಕಿಹೊಳಿ ಅವರ ಪತ್ನಿ ಅಂಭಿಕಾ ಸಂತೋಷ ಜಾರಕಿಹೊಳಿ ಅವರು ತಮ್ಮ ಮುದ್ದು ಮಗುಗಾಗಿ ಇಂದು ಅರಭಾಂವಿಯಲ್ಲಿರುವ ಹಣಮಂತ ದೇವಸ್ಥಾನದಲ್ಲಿರುವ ದೇವರಿಗೆ ವಿಶೇಷ ಪೂಜೆ ಹಾಗೂ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಇಂದು ಶವಿವಾರ ಆಗಿದ್ದರಿಂದ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಿಸುವ ವ್ಯವಸ್ಥೆ ಸಂತೋಷ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಮಾಡಿತ್ತು.ಸಂತೋಷ ಜಾರಕಿಹೊಳಿ ದಂಪತಿಯ ಹರಕೆ ಇಡೆರಿದಕ್ಕಾಗಿ ಇದೇ ರೀತಿ ದೇವರ ಕೃಪೆ ಸಂತೋಷ ಜಾರಕಿಹೊಳಿ ಕುಟುಂಬದ ಮೇಲಿರಲಿ ಹಾಗೂ ಅವರಿಗೆ ಸುಖ,ಶಾಂತಿ,ನೆಮ್ಮದಿ, ಆರೋಗ್ಯ, ಹಾಗೂ ದೀರ್ಘಾಯುಷ್ಯ ನೀಡುವಂತೆ ಸಂತೋಷ ಅಣ್ಣಾ ಜಾರಕಿಹೊಳಿ ಅಭಿಮಾನಿಗಳು
ದೇವರಲ್ಲಿ ಪ್ರಾರ್ಥಿಸಿದರು.ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಪ್ರಸಾದ ವಿತರಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದ ಮುಖ್ಯಸ್ಥರು ಜಾರಕಿಹೊಳಿ ಕುಟುಂಬ ಅನೇಕ ಜನಪರ ಕಾರ್ಯಗಳಿಂದ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಹೊಂದಿದೆ.ತನ್ನ ತಂದೆ ಸಚಿವರಿದ್ದರೂ ಕೂಡ ಎಲ್ಲರೊಂದಿಗೆ ಬೆರೆತು ಕಷ್ಟ ಸುಖಗಳಲ್ಲಿ ಭಾಗಿಯಾಗುವಂತ ಹೃದಯ ಶ್ರೀಮಂತಿಕೆ ಹೊಂದಿದ ಉದ್ಯೋಗಪತಿ ಸಂತೋಷ ಜಾರಕಿಹೊಳಿ ಅವರು ತಮ್ಮ ಕುಟುಂಬದ ಹೆಸರು ಮತ್ತಷ್ಟು ಎತ್ತರಕ್ಕೆ ಕೊಂಡೊಯುತ್ತಿದ್ದಾರೆ.ಹಾಗೂ ಜನರ ಸೇವೆ ಮೂಲಕ ಯುವ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.

ಇತ್ತೀಚಿಗೆ ಅವರು ಗಂಡು ಮಗುವಿಗೆ ತಂದೆಯಾದ ಸುದ್ದಿ ಅವರ ಅಭಿಮಾನಿಗಳ ಮನದಲ್ಲಿ ಸಂತೋಷ ಉಂಟು ಮಾಡಿತ್ತು.ಆದ್ದರಿಂದ ಇಂದು ಸಂತೋಷ ಜಾರಕಿಹೊಳಿ ಅವರ ಪತ್ನಿಯವರಾದ ಶ್ರೀಮತಿ ಅಂಭಿಕಾ ಸಂತೋಷ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಹಣಮಂತ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗುತ್ತಿದೆ ಎಂದರು.ಹಾಗೂ ಇದೆ ರೀತಿ ಬೇರೆ ಬೇರೆ ದೇವಸ್ಥಾನಗಳಲ್ಲಿ ಕೂಡ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಆಯೋಜಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂತೋಷ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದ ಪದಾಧಿಕಾರಿಗಳಾದ ಪ್ರಶಾಂತ ಜೋರಾಪೂರ,ಶೇಷಾಚಲ ಹೊನ್ನತ್ತಿ,ಸಚಿನ ಕಲಾಲ,ಸಿದ್ದು ಕಂಕಣವಾಡಿ,ಮಹಾನಿಂಗ್ ಕೆಂಚೆನ್ನವರ, ಶಿವಾನಂದ ಯರಗಟ್ಟಿ,ಸೇರಿದಂತೆ ಸಕ್ಕರೆ ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕರಂಜಾಳ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು

Spread the loveಖಾನಾಪುರ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಮತ್ತು ನದಿ ಮತ್ತಿತರ ಜಲಮೂಲಗಳಲ್ಲಿ ನೀರಿನ ಹರಿವು ಮತ್ತು ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ