Home / ಜಿಲ್ಲೆ / ಬೆಳಗಾವಿ / ಕಿತ್ತೂರು / ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ, ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ

ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ, ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ

Spread the love

ಬೆಳಗಾವಿ: ಕಿತ್ತೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಹಬೀಬ್ ಶೀಲ್ಲೆದಾರ ನೇತೃತ್ವದಲ್ಲಿ ಸೋಮವಾರ ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

ದೇವರಶೀಗಿಹಳ್ಳಿ, ಮಾಗ೯ನಕೊಪ್ಪ , ದಾಸ್ತಿಕೊಪ್ಪ , ಹೊಸಕಾದರವಳ್ಳಿ , ತುರಮರಿ , ಕಲಬಾಂವಿ, ಹಿರೇನಂದಿಹಳ್ಳಿ ,ಚಿಕ್ಕನಂದಿಹಳ್ಳಿ , ಎತ್ತಿನಕೇರಿ , ಮಲ್ಲಾಪೂರ , ಅವರಾದಿ , ನಿಚ್ಚಣಕಿ , ಡೊಂಬರಕೊಪ್ಪ, ಗ್ರಾಮಗಳಲ್ಲಿನ ಬಡಕುಟುಂಬಗಳಿಗೆ ಆಹಾರ ಕಿಟ್ ನೀಡಿದರು. ಆಹಾರ ಕಿಟ್ ನಲ್ಲಿ ಸಕ್ಕರೆ 1 kg, ಅವಲಕ್ಕಿ 1kg, ರವಾ 1kg , ಆಲೂಗಡ್ಡಿ 1 kg , ಜೋಳ 1kg , ಉಳ್ಳೇಗಡ್ಡಿ 1kg , ಬದನೆಕಾಯಿ 1kg , ಹಸಿಮೇಣಸಿನಕಾಯಿ 1kg. ಡೆಟಾಲ ಸೂಪ್ 1, ವ್ಹಿಲ ಸೂಪ್ 4 , ಗುಡ್ ಡೇ ಬಿಸ್ಕಿಟ 2 ಗಳನ್ನು ವಿತರಿಸಿದರು.

ಕೊರೊನಾದಿಂದ ಸರ್ಕಾರ ಏ.30ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ. ಸುಮಾರು ಎರಡು ತಿಂಗಳು ಬಡಕುಟುಂಬರು ಕೆಲಸವಿಲ್ಲದೆ ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಬಡವರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದೆವೆ. ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಕಿತ್ತೂರು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಜನರಿಗೆ ಕಿಟ್ ವಿತರಿಸಲಾಗಿದೆ ಎಂದು ಹಬೀಬ್ ಶೀಲ್ಲೆದಾರ ತಿಳಿಸಿದರು.

ವಿಜಯಕುಮಾರ ಶಿಂಧೆ , ಮಡಿವಾಳಯ್ಯ ಗುರುವೈನವರಮಠ , ವೀರಬದ್ರಯ್ಯ ಹಿರೇಮಠ , ವಿಜಯಕುಮಾರ ಪಟೇದ, ಅಬ್ದುಲ ಮುಲ್ಲಾ, ಸಂತೋಷಕುಮಾರ ಲಕ್ಕುಂಡಿ , ಸಾವಂತಪ್ಪ ಸಂಗ್ರೇಸಕೊಪ್ಪ , ರವಿ ಎಮ್ಮಿ , ಸಿದ್ದು ಇದ್ದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ