Breaking News
Home / ಜಿಲ್ಲೆ / ಮತ್ತೆ  1 ವಾರ ಜನತೆಗೆ ಉಚಿತ ಹಾಲು ನೀಡಲು ಕೆಎಂಎಫ್ ನಿರ್ಧಾರ:  ಶಾಸಕ ಬಾಲಚಂದ್ರ ಜಾರಕಿಹೊಳಿ  ಸ್ಪಷ್ಟನೆ

ಮತ್ತೆ  1 ವಾರ ಜನತೆಗೆ ಉಚಿತ ಹಾಲು ನೀಡಲು ಕೆಎಂಎಫ್ ನಿರ್ಧಾರ:  ಶಾಸಕ ಬಾಲಚಂದ್ರ ಜಾರಕಿಹೊಳಿ  ಸ್ಪಷ್ಟನೆ

Spread the love

ಮತ್ತೆ  1 ವಾರ ಜನತೆಗೆ ಉಚಿತ ಹಾಲು ನೀಡಲು ಕೆಎಂಎಫ್ ನಿರ್ಧಾರ:  ಶಾಸಕ ಬಾಲಚಂದ್ರ ಜಾರಕಿಹೊಳಿ  ಸ್ಪಷ್ಟನೆ

ಬೆಂಗಳೂರು: ಕೊರೊನಾ ವೈರಸ್ಸಿನಿಂದ ಲಾಕ್‍ಡೌನ್ ಸಂದರ್ಭದಲ್ಲಿ ಕೆಎಂಎಫ್‍ನಿಂದ ಏ-3ರಿಂದ 14ರ ವರೆಗೆ ಪ್ರತಿದಿನ 7.50 ಲಕ್ಷ ಲೀಟರ್ ಹಾಲನ್ನು ಸರ್ಕಾರ ಖರೀದಿಸಿಕೊಂಡಿದ್ದು, ಮತ್ತೇ ಬಡಜನರ ಹಿತಕ್ಕಾಗಿ ಒಂದು ವಾರಕಾಲ ಇದನ್ನು ವಿಸ್ತರಿಸಲಾಗಿದೆ.

ಸೋಮವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್‍ಡೌನ್ ಮತ್ತೇ ವಿಸ್ತರಣೆಯಾಗುವ ಸಂಭವವಿರುವುದರಿಂದ ತಾವೇ ಸ್ವತ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೈನೋದ್ಯಮವನ್ನೇ ನಂಬಿರುವ ರೈತರ ಬಾಳಿಗೆ ಬೆಳಕಾಗಲು ನಂದಿನಿ ಹಾಲನ್ನು ಖರೀದಿಸಿ ರಾಜ್ಯದ ಬಡವರಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿರುವದಾಗಿ ಅವರು ಹೇಳಿದರು.

ಏ-3ರಿಂದ 14ರ ವರೆಗೆ ಒಟ್ಟು 12 ದಿನಗಳಲ್ಲಿ ನಂದಿನಿ ಹಾಲನ್ನು ರಾಜ್ಯ ಸರ್ಕಾರ ನಮ್ಮಿಂದ ಖರೀದಿಸಿಕೊಂಡು ಕೊರೊನಾ ಹಿನ್ನಲೆಯಲ್ಲಿ ಬಡವರಿಗೆ ಪ್ರತಿದಿನ ಉಚಿತವಾಗಿ ನೀಡುತ್ತಿದೆ. ಇದಕ್ಕಾಗಿ ಸುಮಾರು 39ಕೋಟಿ ರೂಗಳನ್ನು ಕೆಎಂಎಫ್‍ಗೆ ಸರ್ಕಾರ ಪಾವತಿಸಿದೆ. ಮತ್ತೇ ಒಂದು ವಾರಕಾಲ ಪ್ರತಿದಿನ 7.50 ಲಕ್ಷ ಲೀಟರ್ ಹಾಲನ್ನು ಖರೀದಿಸಲು ಮುಂದಾಗಿರುವ ಸರ್ಕಾರ ಇದಕ್ಕಾಗಿ 17.50 ಕೋಟಿ ರೂಗಳನ್ನು ನೀಡಬೇಕಾಗಿದೆ. ಈ ಹಣವನ್ನು ಪಾವತಿ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆಂದು ಅವರು ಹೇಳಿದರು.

ರೈತಪರ ಹೋರಾಟಗಾರರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಾಲು ಖರೀದಿಯಿಂದ ರಾಜ್ಯದಲ್ಲಿರುವ 13ಲಕ್ಷ ರೈತ ಕುಟುಂಬಗಳಿಗೆ ಯಾವುದೇ ತೊಂದರೆಯಾಗದಂತೆ ಆಸರೆಯಾಗಿ ನಿಂತಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರತಿನಿತ್ಯ ಉಳಿಯುತ್ತಿರುವ ಹಾಲನ್ನು ಖರೀದಿಸಿ ಕೆಎಂಎಫ್‍ಗೆ ನೆರವಾಗಿರುವ ಸಿಎಂ ಯಡಿಯೂರಪ್ಪ ಅವರನ್ನು ರಾಜ್ಯದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳು, ರೈತರು, ಬಡಜನತೆ ಹಾಗೂ ಗ್ರಾಹಕರ ಪರವಾಗಿ ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಸಿಎಮ್ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ, ಮಾಜಿ ಶಾಸಕ ಎಮ್.ಯು.ನಾಗರಾಜ ಅವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸುವರ್ಣಸೌಧದ ಹಾಲ್‌ನಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಮನವಿ

Spread the loveಬೆಳಗಾವಿ: ಸಾವರ್ಕರ್ ಫೋಟೋ ತೆರವಿನ ಕೂಗಿನ‌ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ