ಲಾಕ್ ಡೌನ್ ನಿಯಮ ಮೀರಿ ರಸ್ತೆಗಿಳಿದ ಜನರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಬೇಡಿ: ಸಂತೋಷ ಜಾರಕಿಹೊಳಿ

Spread the love

ಲಾಕ್ ಡೌನ್ ನಿಯಮ ಮೀರಿ ರಸ್ತೆಗಿಳಿದ ಜನರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಬೇಡಿ: ಸಂತೋಷ ಜಾರಕಿಹೊಳಿ

 ಅಗತ್ಯ ವಸ್ತುಗಳನ್ನು ತರಲು ಹೋದವರ ಮೇಲೆ ಲಾಠಿ ಚಾರ್ಜ್ ಮಾಡಬೇಡಿ/ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಮಹಾಮಾರಿ ಕೊರೊನಾ ವೈರಸ್ ರೋಗವನ್ನು ನಿಯಂತ್ರಿಸಲು ಸಾಧ್ಯ/ಪೋಲಿಸರಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ ಸಂತೋಷ ಜಾರಕಿಹೊಳಿ

ಸರ್ಕಾರ ದಿಢೀರನೆ ಲಾಕ್ ಡೌನ್ ನಿರ್ಧಾರ ಘೋಷಣೆ ಮಾಡಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಮೊದಲ ಬಾರಿ ಇಂಥದೊಂದು ಬಿಕ್ಕಟ್ಟು ಎದುರಿಸುವ ಸಂಧರ್ಭ ಎದುರಾದರೂ ಕೂಡ ನಮ್ಮ ಜನ ಲಾಕ್ ಡೌನ್ ಅನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಕೆಲವು ಲೋಪದೋಷಗಳು ಇರಬಹುದು,ಹಾಗಂತ ಅಗತ್ಯ ವಸ್ತುಗಳನ್ನು ತರಲು ಹೋದವರು,ಹಾಗೂ ತರಕಾರಿ,ಸೊಪ್ಪು ಮಾರಾಟಗಾರರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಬಾರದು ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ಅವರು ಪೋಲಿಸ್ ಇಲಾಖೆಗೆ ಮನವಿ ಮಾಡಿದರು.

ಇನ್ನು ಸಾರ್ವಜನಿಕರಿಗೂ ಕೂಡ ಮನವಿ ಮಾಡಿದ ಸಂತೋಷ ಜಾರಕಿಹೊಳಿ ಅವರು ದಯಮಾಡಿ ಯಾರು ಸಹ ಅನಾವಶ್ಯಕವಾಗಿ ರಸ್ತೆಗೆ ಬರಬೇಡಿ, ಒಂದು ವೇಳೆ ಬಂದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ,ನಿಮ್ಮ ಮನೆಯವರ ಸುರಕ್ಷತೆಗಾಗಿ ಮನೆಯಲ್ಲಿ ಇರಿ, ನಿಮ್ಮ ಕುಟುಂಬದವರ ರಕ್ಷಣೆಗೆ ಒತ್ತು ನೀಡಿ, ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ, ನಿಮ್ಮ ಮಕ್ಕಳ ಭವಿಷ್ಯದ ಕಡೆ ಯೋಚಿಸಿ.ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಗೆ ಅಧಿಕಾರಿಗಳು ನಿರಂತರವಾಗಿ ಕೊರೊನಾ ವೈರಸ್ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.ಇದರಿಂದ ಜನರನ್ನು ರಕ್ಷಿಸುವ ಸಲುವಾಗಿ ಭಾರತವನ್ನು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜನರು ಇದಕ್ಕೆ ಸಹಕರಿಸಬೇಕು ಎಂದು ಗೋಕಾಕ ನಗರದ ಸಮಸ್ತ ಜನರಿಗೆ ಮನವಿ ಮಾಡಿಕೊಂಡರು.ಅಲ್ಲದೆ ಮಹಾಮಾರಿ ಕೊರೊನಾ ವೈರಸ್ ತೊಲಗಿಸಲು ವೈದ್ಯರು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಮಹಾಮಾರಿ ಕೊರೊನಾ ವೈರಸ್ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ. ಒಂದಿಷ್ಟು ದಿನಗಳ ಕಾಲ ಮನೆಯಲ್ಲಿ ಇರಿ, ಮಹಾಮಾರಿ ಕೊರೊನಾ ತೊಲಗಿಸಿ ನೆಮ್ಮದಿ ಜೀವನ ನಡೆಸಿ ಎನ್ನುವ ಸಂದೇಶವನ್ನು ಜನತೆಗೆ ನೀಡಿದರು.

 

ಅದೆ ರೀತಿ ಕೊರೊನಾ ವೈರಸ್ ಭೀತಿಯಿಂದ ಕಟ್ಟುನಿಟ್ಟಿನ ಬಂದ್ ನಿಂದಾಗಿ ಬಡವರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಸಂಕಷ್ಟದ ಈ ಸಮಯದಲ್ಲಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಹಾಗೂ ಬಡವರಿಗೆ ಮಾನವೀಯತೆ ದೃಷ್ಟಿಯಿಂದ ದವಸ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲು ಮುಂದಾಗಬೇಕೆಂದು ಸಂತೋಷ ಜಾರಕಿಹೊಳಿ ಅವರು ದಾನಿಗಳಲ್ಲಿ ಮನವಿ ಮಾಡಿಕೊಂಡರು.


Spread the love

About Laxminews 24x7

Check Also

17 ಪಿಎಸ್‌ಐಗಳ ವರ್ಗಾವಣೆ

Spread the loveಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳನ್ನು (ಪಿಎಸ್‌ಐ) ನಗರದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ