Breaking News
Home / ಜಿಲ್ಲೆ / ಕೊರೊನಾ ವಾರಿಯರ್ಸ್‍ಗಾಗಿ 8 ಐಶಾರಾಮಿ ಹೋಟೆಲ್‍ಗಳನ್ನೇ ಬಿಟ್ಟುಕೊಟ್ಟ ರೋಹಿತ್ ಶೆಟ್ಟಿ

ಕೊರೊನಾ ವಾರಿಯರ್ಸ್‍ಗಾಗಿ 8 ಐಶಾರಾಮಿ ಹೋಟೆಲ್‍ಗಳನ್ನೇ ಬಿಟ್ಟುಕೊಟ್ಟ ರೋಹಿತ್ ಶೆಟ್ಟಿ

Spread the love

ಮುಂಬೈ: ಕೊರೊನಾ ವೈರಸ್ ಹಾವಳಿಗೆ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಲಾಕ್‍ಡೌನ್ ಅಂತ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಮಂದಿ ಮಾತ್ರ ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಸೆಲೆಬ್ರಿಟಿಗಳು ಆರೋಗ್ಯ ಯೋಧರ ಸಹಾಯಕ್ಕೆ ದೇಣಿಗೆ ನೀಡಿದ್ದಾರೆ. ಹೀಗೆ ಕೊರೊನಾ ಯೋಧರಿಗೆ ನೆರವಿಗೆ ಮುಂದೆ ಬಂದವರ ಪಟ್ಟಿಗೆ ಬಾಲಿವುಡ್‍ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಈಗ ಸೇರಿಕೊಂಡಿದ್ದಾರೆ.

ಹೌದು. ವೈದ್ಯರು, ಸ್ವಚ್ಛತಾ ಕಾರ್ಮಿಕರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಈ ಮಹಾಮಾರಿ ಹರಡಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಜೀವವನ್ನು ಪಣಕ್ಕಿಟ್ಟು ದೇಶ ಸೇವೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಇಂತಹ ಕಷ್ಟದ ಸಮಯದಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಪೊಲೀಸರ ಸಹಾಯಕ್ಕೆ ರೋಹಿತ್ ಶೆಟ್ಟಿ ಧಾವಿಸಿದ್ದಾರೆ. ಪೊಲೀಸರಿಗಾಗಿ ತಮ್ಮ 8 ಐಶಾರಾಮಿ ಹೋಟೆಲ್ ಅನ್ನೇ ರೋಹಿತ್ ಬಿಟ್ಟುಕೊಟ್ಟಿದ್ದಾರೆ. ಹೆಚ್ಚಾಗಿ ರೋಹಿತ್ ಶೆಟ್ಟಿ ಪೊಲೀಸರ ಶೌರ್ಯ, ಸಾಹಸಭರಿತ ಕತೆಗಳನ್ನೇ ಸಿನಿಮಾ ಮಾಡುತ್ತಾರೆ. ಪೊಲೀಸರ ಮೇಲಿರುವ ವಿಶೇಷ ಪ್ರೀತಿ, ಗೌರವದಿಂದ ಇಂದು ಪೊಲೀಸರ ಸಹಾಯಕ್ಕೆ ಧಾವಿಸಿದ್ದಾರೆ.

ಮುಂಬೈನಲ್ಲಿನ ತಮ್ಮ 8 ಹೋಟೆಲ್‍ಗಳನ್ನು ಪೊಲೀಸರಿಗಾಗಿ ಉಚಿತವಾಗಿ ರೋಹಿತ್ ಬಿಟ್ಟುಕೊಟ್ಟಿದ್ದಾರೆ. ಪೊಲೀಸರಿಗಾಗಿ ಈ ಹೋಟೆಲ್‍ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೇ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ರೋಹಿತ್ ಶೆಟ್ಟಿ ನೆರವಿಗೆ ಧನ್ಯವಾದ ಹೇಳಿದ್ದಾರೆ.

ಈ ಹಿಂದೆ ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ಪಂಚತಾರಾ ಹೋಟೆಲ್ ಅನ್ನು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ಬಿಟ್ಟುಕೊಟ್ಟಿದ್ದರು. ಹಾಗೆಯೇ ಬಿಟೌನ್ ಕಿಂಗ್‍ಖಾನ್ ಶಾರುಖ್ ಖಾನ್ ತಮ್ಮ ನಾಲ್ಕು ಅಂತಸ್ತಿನ ಕಚೇರಿಯನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಟ್ಟಿದ್ದರು. ಈಗ ರೋಹಿತ್ ಶೆಟ್ಟಿ ಅವರು ಪೊಲೀಸರಿಗಾಗಿ 8 ಹೋಟೆಲ್‍ಗಳನ್ನು ಬಿಟ್ಟುಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಹಾಮಾರಿ ವಿರುದ್ಧದ ಹೋರಾಟಕ್ಕೆ ದೇಶದ ಕೊರೊನಾ ವಾರಿಯರ್ಸ್ ಜೊತೆ ಕೈಜೋಡಿಸಿದ್ದಾರೆ.


Spread the love

About Laxminews 24x7

Check Also

ಭ್ರೂಣ ಹತ್ಯೆ ತಡೆಯುವಲ್ಲಿ ಕರ್ತವ್ಯ ಲೋಪ; ಇಬ್ಬರು ಅಧಿಕಾರಿಗಳ ಅಮಾನತು

Spread the love ನಗರದ ಮಾತಾ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ (Female foeticide) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ