ಅಥಣಿ: ರಾಷ್ಟ್ರೀಕೃತ, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕುಗಳ ಎಲ್ಲಾ ಸಾಲಗಳ ಇಎಂಐ ಮೂರು ತಿಂಗಳು ವಿನಾಯ್ತಿ ನೀಡಿ ಆರ್ ಬಿಐ ಸೂಚನೆ ನೀಡಿದೆ. ಆದ್ರೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸ್ವಕ್ಷೇತ್ರದಲ್ಲಿಯೇ ಫೈನಾನ್ಸ್ ಸಿಬ್ಬಂದಿ ರೈತರ ಸಾಲ ಪಾವತಿಸುವಂತೆ ಮನೆಗೆ ಹೋಗಿ ಕಿರುಕುಳ ನೀಡುತ್ತಿರುವ ಪ್ರಕರಣ ಪ್ರಕರಣ ಬೆಳಕಿಗೆ ಬಂದಿದೆ.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತ ಮಾಹವೀರ ವೀರಗೌಡ ಎಂಬುವವರು ವಿಸ್ತಾರ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಸದ್ಯ ಲಾಕ್ ಡೌನ್ ಹಿನ್ನೆಲೆ ದೇಶದ ಅರ್ಥಿಕ ಸ್ಥಿತಿ ಕುಗ್ಗಿರುವ ಹಿನ್ನೆಲೆಯಲ್ಲಿ ನಿನ್ನೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಹತ್ವದ ಆದೇಶ ನೀಡಿದ್ದಾರೆ. ಫೈನಾನ್ಸ್ ಸಿಬ್ಬಂದಿ ಆರಬಿಐ ಆದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ರೈತ ಮಹಾವೀರ ಮಾತನಾಡಿ, ಕೃಷಿ ಚಟುವಟಿಕೆ ವಿಸ್ತಾರ ಫೈನಾನ್ಸ್ ನಿಂದ ನಾಲ್ಕು ಲಕ್ಷ ಸಾಲ ಪಡೆದಿದ್ದೇನೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲ ಹಾಗೂ ಹೈನುಗಾರಿಕೆಗೆ ನಷ್ಟ ದಿಂದ ಈ ತಿಂಗಳು ಕಂತು ಕಟ್ಟಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ವಿಸ್ತಾರ್ ಫೈನಾನ್ಸ್ ಸಿಬ್ಬಂದಿ ಅರಿಹಂತ ‘ಉದಯನಾಡು’ ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ರೈತರೆ ನಮ್ಮನು ಕರೆಸಿಕೊಂಡಿದ್ದಾರೆ ನಾವು ಮರುಪಾವತಿಗೆ ಮುಂದಾಗಿದ್ದೇವೆ. ಇದುವರೆಗೆ ಆರ್ ಬಿಐ ನಿಂದ ಹಣ ಮರುಪಾವತಿ ಮುಂದುಡಿ ಎಂಬ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಜಾರಿಕೊಂಡರು.
ಅಥಣಿ ತಾಲೂಕಿನ ಕೆಲವು ಫೈನಾನ್ಸ್ ವಸುಲಿಗೆ ಮುಂದಾಗಿದ್ದಾರೆ, ಸನ್ನಿಧಿ ಪರಿಸ್ಥಿತಿಯಲ್ಲಿ ಹಣ ಮರುಪಾವತಿ ಸಾಧ್ಯವಿಲ್ಲ ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸಬೇಕಾಗಿದೆ.