Home / Uncategorized / 138 ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ಧಾರಿ.ನಮ್ಮ ಪ್ರಧಾನಿ ಮೇಲೆ ಹಾಗೇ 7ಕೋಟಿ ಜನರ ಜವಾಬ್ದಾರಿ ನಮ್ಮ ಮುಖ್ಯ ಮಂತ್ರಿ ಮೇಲೆ ಇದೆ

138 ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ಧಾರಿ.ನಮ್ಮ ಪ್ರಧಾನಿ ಮೇಲೆ ಹಾಗೇ 7ಕೋಟಿ ಜನರ ಜವಾಬ್ದಾರಿ ನಮ್ಮ ಮುಖ್ಯ ಮಂತ್ರಿ ಮೇಲೆ ಇದೆ

Spread the love

ಪ್ರಧಾನಿಯ ವಯಸ್ಸು 69 ವರ್ಷ, ಆತನ ಮೇಲೆ ಇರೋದು 138 ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ಧಾರಿ…

ನಮ್ಮ ಮುಖ್ಯಮಂತ್ರಿಯವರ ವಯಸ್ಸು 77 ವರ್ಷ, ಅವರ ಮೇಲೆ ಇರೋದು ಹತ್ ಹತ್ರ ಏಳು ಕೋಟಿ ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿ…

ಒಮ್ಮೆ ಯೋಚಿಸಿ ನೋಡಿ ಅವರಿಬ್ಬರು ಈ ವಯಸ್ಸಿನಲ್ಲೂ ಶ್ರಮ ಪಡ್ತಿರೋದು ಯಾರಿಗೋಸ್ಕರ? ತಿಂಗಳುಗಳೇ ಕಳೆದು ಹೋಗಿವೆ ಪ್ರಧಾನಿಗಳು ಸರಿಯಾಗಿ ನಿದ್ದೆ ಮಾಡಿ, ಇಲ್ಲಿ ಅಷ್ಟೊಂದು ವಯಸ್ಸಾಗಿದ್ರು ಯಡ್ಯೂರಪ್ಪನವರು ಹೊತ್ತಿಲ್ಲದ ಹೊತ್ತಿನಲ್ಲಿ ತಮ್ಮ ಆರೋಗ್ಯದ ಕಡೆಯೂ ಗಮನ ಕೊಡದೆ ನಿರಂತರ ಸಭೆಗಳನ್ನ ನಡೆಸಿ ಜನರನ್ನ ಈ ಮಹಾ ಮಾರಿಯಿಂದ ಕಾಪಾಡೋದು ಹೇಗೆ ಅಂತ ತಲೆಕೆಡಿಸಿಕೊಂಡು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದ್ದಾರೆ, ಆದ್ರೆ ನಾವೇನ್ ಮಾಡ್ತಿದಿವಿ?

ಮೋದಿ ಹೇಳಿದ್ದು ಸಂಜೆ ಸ್ವಲ್ಪ ಹೊತ್ತು ಚಪ್ಪಾಳೆ ಹೊಡೆದು ನಮಗಾಗಿ ಶ್ರಮಿಸುತ್ತಿರುವ ಆ ನಿಸ್ವಾರ್ಥ ಜೀವಗಳಿಗೆ ಗೌರವ ಕೊಡಿ ಅಂತ, ಆದ್ರೆ ನಾವು ಮಾಡಿದ್ದು ಮತ್ತೆ ಬೀದಿಗಿಳಿದು ಏನೋ ಸಾಧಿಸಿದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿ ಆ ಜನತಾ ಕರ್ಫ್ಯೂನ ಮೂಲ ಉದ್ದೇಶವನ್ನೇ ಹಾಳು ಮಾಡಿದ್ವಿ, ಇನ್ನು ಯಾರೂ ಅನವಶ್ಯಕವಾಗಿ ಹೊರಗಡೆ ಬರ್ಬೇಡಿ ಅಂತ ನಮ್ಮ ಮುಖ್ಯಮಂತ್ರಿಯವರು ಅಷ್ಟೊಂದು ಕೇಳಿಕೊಂಡ್ರು ಸಹ ಜನರು ಮಾತ್ರ ಏನೂ ಆಗಿಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾರೆ…

ಸೂಕ್ಷ್ಮವಾಗಿ ಗಮನಿಸಿ ನೋಡಿ ಕಳೆದ ಒಂದು ತಿಂಗಳಿಂದ ದೇಶಾದ್ಯಂತ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ, ತೆರಿಗೆ ಸಂಗ್ರಹವೇ ನಿಂತು ಹೋಗಿದೆ, ಇಂತಹ ಸಂದರ್ಭಗಳಲ್ಲಿ ಜನರ ಆರೋಗ್ಯದ ಕಡೆ ಗಮನ ಹರಿಸಬೇಕು, ಅತ್ತ ಕಡೆ ಮೋದಿ ಇತ್ತ ಕಡೆ ಯಡ್ಯೂರಪ್ಪ ಅದೆಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತಿದೆ, ನಾವ್ ಮಾತ್ರ ಬೀದಿಯಲ್ಲಿ ಕ್ರಿಕೆಟ್ ಆಡೋದು, ಗುಂಪು ಕಟ್ಟಿಕೊಂಡು ಚರ್ಚೆ ಮಾಡ್ಕೊಂಡ್ ರೋಗ ಹರಡುವ ಎಲ್ಲಾ ಮಾರ್ಗಗಳಿಗೂ ಗ್ರೀನ್ ಸಿಗ್ನಲ್ ಕೊಡ್ತಿದಿವಿ…

ಅಲ್ಲ ಕಣ್ರೀ ಆಧುನಿಕ ತಂತ್ರಜ್ಞಾನದ ಮುಖಾಂತರ ಜಗತ್ತನ್ನೇ ತಮ್ಮ ಕಿರು ಬೆರಳಿನಲ್ಲೇ ಆಡಿಸುತ್ತಿದ್ದ ಚೈನಾ ಜಪಾನ್ ಅಮೆರಿಕದಂತಹ ದೈತ್ಯ ರಾಷ್ಟ್ರಗಳೇ ಕೊರೊನ ವಿರುದ್ಧ ಹೋರಾಡಲು ಸಾಧ್ಯವಾಗದೆ ದಿನನಿತ್ಯ ಸಾವು ನೋವು ಅನುಭವಿಸುತ್ತಿವೆ, ಅಂತದ್ರಲ್ಲಿ ನಮ್ಮ ಭಾರತ ಎಷ್ಟೋ ವಿಷಯಗಳಲ್ಲಿ ಆ ದೇಶಗಳಿಗಿಂತ ಹಿಂದೆ ಉಳಿದಿದೆ ಅಕಸ್ಮಾತ್ ಆ ವೈರಸ್ ವ್ಯಾಪಕವಾಗಿ ಹರಡಿದರೆ ಅದನ್ನ ನಿಯಂತ್ರಿಸುವ ಶಕ್ತಿ ಭಾರತದ ಬಳಿ ಇಲ್ಲ, ಇದೇ ಕಾರಣಕ್ಕೆ ಕಷ್ಟಾನೋ ನಷ್ಟಾನೋ ಜನರಿಗೆ ಅದು ಹರಡದಂತೆ ತಡೆದರೆ ಸಾಕು ಅಂತ ಸರ್ಕಾರಗಳು ಹಗಲು ರಾತ್ರಿ ಶ್ರಮಿಸುತ್ತಿರುವಾಗ ನಾವು ಮಾತ್ರ ಉಡಾಫೆಯಿಂದಲೇ ವರ್ತಿಸಿದರೆ ನಮ್ಮನ್ನ ಜವಾಬ್ದಾರಿಯುತ ನಾಗರಿಕರು ಅಂತ ಅನ್ನೋಕಾಗುತ್ತ, ನಾಚಿಕೆ ಆಗ್ಬೇಕು ನಮಗೆಲ್ಲ…

ತುಂಬಾ ಕಷ್ಟ ಇದೆ ಪರಿಸ್ಥಿತಿ, ದೇವರ ದಯೆಯಿಂದ ವೈರಸ್ ನಮ್ಮ ದೇಶದಲ್ಲಿ ಆಮೆಗತಿಯಲ್ಲಿ ಹರಡುತ್ತಿದೆ ಅದನ್ನ ಮೊಲದ ವೇಗಕ್ಕೆ ತಂದುಕೊಂಡ್ರೆ ಭಾರತ ಸ್ಮಶಾನ ಆಗುತ್ತೆ, ಈಗಾಗಲೇ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ, ಕೊನೆ ಪಕ್ಷ ಜನರು ಒಬ್ಬೊರಿಗೊಬ್ಬರು ಸಂಪರ್ಕಿಸುವುದನ್ನೇ ತಡೆದರೆ ರೋಗ ಹರಡುವ ಪ್ರಮಾಣ ಕಡಿಮೆ ಆಗುತ್ತೆ ಅಷ್ಟರೊಳಗೆ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಕೊಟ್ಟು ಗುಣಪಡಿಸಿದರೆ ಸಂಪೂರ್ಣವಾಗಿ ಕೊರೊನವನ್ನ ಭಾರತದಿಂದ ಮುಕ್ತ ಮಾಡ್ಬೋದು ಅನ್ನೋದೆ ಸರ್ಕಾರಗಳ ಆಶಯ, ಅದಕ್ಕೆ ಮಕ್ಕಳಿಗೆ ಹೇಳಿದ ಹಾಗೆ ಹೇಳಿದ್ರು ಜನ ಕೇಳಲಿಲ್ಲ ಅದಕ್ಕೆ ಈಗ ಕಠಿಣ ಕ್ರಮಗಳಿಗೆ ಸರ್ಕಾರಗಳು ಮುಂದಾಗಿವೆ, ಇನ್ನು ಬೇಜವಾಬ್ದಾರಿಯಿಂದ ವರ್ತಿಸಿದರೆ ಸರ್ಕಾರ ಸರ್ವಾಧಿಕಾರಿ ಧೋರಣೆ ಹಂತಕ್ಕೆ ಹೋಗ್ಬೇಕಾಗುತ್ತೆ, ಯಾಕಂದ್ರೆ ಸರ್ಕಾರಕ್ಕೆ ಜನರ ಜೀವ ಅತ್ಯಮೂಲ್ಯ…

ಮೋದಿ ಮತ್ತು ಯಡ್ಯೂರಪ್ಪ ನಮ್ಮಿಂದ ಏನು ಬಯಸಿದ್ದಾರೆ ಹೇಳಿ? ಮನೆಯಿಂದ ಆಚೆ ಬರಬೇಡಿ ಗುಂಪು ಕಟ್ಟಿಕೊಂಡು ಮಾತಾಡ್ಬೇಡಿ, ಶುಚಿತ್ವಕ್ಕೆ ಹೆಚ್ಚು ಆದ್ಯತೆ ಕೊಡಿ ಇಷ್ಟೇ ತಾನೆ ಕೇಳಿರೋದು, ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಇದೆಲ್ಲಾ ಆಗಲ್ವ ನಮ್ ಕೈಯಲ್ಲಿ, ನಮಗಾದರೂ ಮನೇಲೆ ಇರುವ ಅವಕಾಶ ಇದೆ ಕಣ್ರೀ ಆದ್ರೆ ತಿಂಗಳುಗಳಿಂದ ಅದೆಷ್ಟೋ ವೈದ್ಯರು ಮನೇಗೆ ಹೋಗಿಲ್ಲ, ಸಾವಿನ ಬಳಿ ನಿಂತು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸೊಂಕಿತರ ಸಂಖ್ಯೆ ಹೆಚ್ಚಾದಷ್ಟು ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತೆ, ಇನ್ನು ಸಂಪೂರ್ಣವಾಗಿ ಗುಣಪಡಿಸೊ ಮೆಡಿಸನ್ ಕೂಡ ಬಂದಿಲ್ಲ, ರೋಗ ಬಂದ್ಮೇಲೆ ಕಷ್ಟ ಪಡುವ ಬದಲು ರೋಗ ಬರದಂತೆ ತಡೆದರೆ ಉತ್ತಮ ಅಲ್ಲವೇ? ಇದನ್ನೇ ಸರ್ಕಾರಗಳು ಒತ್ತಿ ಒತ್ತಿ ಹೇಳ್ತಿರೋದು…

ನಮಗೋಸ್ಕರ ಅಲ್ಲದಿದ್ರೂ ನಮ್ಮ ಮುಂದಿನ ಪೀಳಿಗೆಗೋಸ್ಕರನಾದ್ರು ನಾವು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳೊಣ, ಮಾಡಬೇಕಾಗಿರುವುದು ಇಷ್ಟೇ ಸರ್ಕಾರಗಳ ನಿರ್ದೇಶನಗಳನ್ನ ಚಾಚೂ ತಪ್ಪದೆ ಪಾಲಿಸೋದು…

ಕೊನೆಯದಾಗಿ ಮೋದಿ ಮತ್ತು ಯಡ್ಯೂರಪ್ಪನವರಿಗೆ ಅನಂತ ಅನಂತ ಧನ್ಯವಾದಗಳು, ನಿಮ್ಮ ಜವಾಬ್ದಾರಿಯುತ ನಡೆಗಳು ಇವತ್ತು ನಮ್ಮ ಜೀವವನ್ನ ಕಾಪಾಡುತ್ತಿವೆ, ಬನ್ನಿ ನಮ್ಮ ನಾಯಕರ ನಿರ್ಧಾರಗಳಿಗೆ ಬೆಂಬಲ ಸೂಚಿಸಿ ಕೊರೊನ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ…


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ