Breaking News

ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ ಸಿಂಪಡನೆ

Spread the love

ಗೋಕಾಕ:ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ ಸಿಂಪಡನೆ ಕೊರೋನಾ ವೈರಸ್ ತಡೆಗಟ್ಟುಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ (ರೋಗ ನಿರೋಧಕ)ಔಷಧಿಯನ್ನು ಸೋಮವಾರದಂದು ಸಿಂಪಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ ಹೊಳೆಪ್ಪಗೋಳ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಜನತೆ ಒಂದೆಡೆ ಸೇರದೇ ಮನೆಯಲ್ಲಿ ಇರಬೇಕು. ಅವಶ್ಯಕತೆ ಇದ್ದರೆ ಮಾತ್ರ ಹೊರಬರಬೇಕು. ಹೊರದೇಶಗಳಿಂದ ಬಂದಂತಹ ಜನರನ್ನು ಆರೋಗ್ಯ ತಪಾಸಣೆಯನ್ನು ನಡೆಸಲಾಗಿದ್ದು ಅವರಲ್ಲಿ ಅಂತಹ ಯಾವ ಲಕ್ಷಣಗಳು ಬಂದಿರುವದಿಲ್ಲ, ಸಾರ್ವಜನಿಕರು ಯಾವುದೇ ಊಹಾಪೋಹಗಳನ್ನು ನಂಬದೇ ಸರ್ಕಾರ ನೀಡಿದ ನಿರ್ದೇಶನಗಳನ್ನು ಪಾಲಿಸಿ ಕೊರೋನಾ ವೈರಸ್ ನಿಯಂತ್ರಿಸಲು ಸಹಕರಿಸುವಂತೆ ಕೋರಿದರು.
ನಗರ ಸಭೆ ಸದಸ್ಯ ಎಸ್.ಎ.ಕೋತವಾಲ ಮಾತನಾಡುತ್ತಾ, ಮುಸ್ಲಿಂ ಬಾಂಧವರು ಸಾಮೂಹಿಕ ಪಾಲ್ಗೊಳ್ಳದೇ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆಯನ್ನು ಸಲ್ಲಿಸುವಂತೆ ಮನವಿ ಮಾಡಿದರು.
ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಮಾತನಾಡಿ, ಗೋಕಾಕ ನಗರದ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದ್ದು, ಕ್ರೀಮಿನಾಶಕ ಔಷಧಗಳ ಸಿಂಪಡೆಯನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಜಾಗೃತರಾಗಿ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೂ ಹೆಚ್ಚಿನ ಮಹತ್ವ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ: ರವೀಂದ್ರ ಆಂಟಿನ್, ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ. ರೋಟರಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಮಗದುಮ್ಮ, ನಗರಸಭೆ ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.


Spread the love

About Laxminews 24x7

Check Also

ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ:ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ

Spread the loveಅನ್ಯಾಯವಾದ ರೈತರಿಗೆ ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರು ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ