ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಕಳೆದ ಸುಮಾರು ಒಂದು ತಿಂಗಳಿನಿಂದ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ಅವರು ನಿಧನರಾದರು.
ಭಾನುವಾರವಷ್ಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು.
ಬಾರದ ಲೋಕಕ್ಕೆ ಮರಳಿದ ಪಾಪು…..
ಬೆಳಗಾವಿ-ಪತ್ರಿಕಾ ಲೋಕದ ಉಜ್ವಲ ತಾರೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗಷ್ಟೇ ಕೊನೆಯುಸಿರೆಳೆದರು.
ಕರ್ನಾಟಕ ಏಕೀಕರಣದ ಭೀಷ್ಮ ,ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ,ಗಡಿನಾಡ ಗುಡಿಯ ಭಗವಂತ,ಅಪ್ರತಿಮ ಕನ್ನಡ ಹೋರಾಟಗಾರ ರಾಗಿದ್ದ ಪಾಟೀಲ ಪುಟ್ಟಪ್ಪ ಅವರು ಬಾರದ ಲೋಕಕ್ಕೆ ಮರಳಿದ್ದು ಈ ನಾಡಿಗೆ ತುಂಬುಲಾರದ ನಷ್ಟ