ನವದೆಹಲಿ: “ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್ಸನ್ನು ಎದುರಿಸುವಲ್ಲಿ ನಮ್ಮ ದೇಶದ ವೈದ್ಯರು, ಶುಶ್ರೂಷಕರು, ಆರೋಗ್ಯ ಇಲಾಖೆಗಳ ಸಿಬ್ಬಂದಿ ದೊಡ್ಡ ಮಟ್ಟದಲ್ಲಿ ಪರಿಶ್ರಮ ಪಡುತ್ತಿದ್ದು, ಅವರ ಈ ಸೇವೆಯನ್ನು ಭಾರತ ಯಾವತ್ತೂ ನೆನಪಿನಲ್ಲಿಟ್ಟುಕೊಂಡಿರುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟ್ವೀಟರ್‌ನಲ್ಲಿ #IndiaFightsCorona ಎಂಬ ಹ್ಯಾಶ್‌ಟ್ಯಾಗ್‌ನಡಿ, ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕೊರೊನಾ ತಂದಿರುವ ಬಿಕ್ಕಟ್ಟು ಹಾಗೂ ಭೀತಿಯ ಸನ್ನಿವೇಶವನ್ನು ಭಾರತ ಎದುರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“”ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದರ ಬಗ್ಗೆ ನಮ್ಮ ದೇಶದ ಜನತೆ ತಮ್ಮಲ್ಲಿ ತಾವೇ ಅರಿವು ಮೂಡಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇದು ಈ ಸೋಂಕಿನ ವಿರುದ್ಧ ಸಮರ ಸಾರಿರುವ ನಮ್ಮ ದೇಶದ ಲಕ್ಷಾಂತರ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಇಲಾಖೆಗಳ ಸಿಬ್ಬಂದಿ, ವಿಮಾನ ನಿಲ್ದಾಣಗಳ ಸಿಬ್ಬಂದಿ ಹಾಗೂ ಇನ್ನಿತರ ವಿಭಾಗಗಳ ಸಿಬ್ಬಂದಿಯ ಮನೋಸ್ಥೈರ್ಯವನ್ನು ಹೆಚ್ಚಿಸಿದೆ” ಎಂದು ಅವರು ದೇಶದ ಪ್ರಜ್ಞಾವಂತ ಜನರನ್ನು ಶ್ಲಾಘಿಸಿದ್ದಾರೆ.
“ಯಾವುದೇ ಪ್ರಯತ್ನ ವ್ಯರ್ಥವಾಗದು’
“”ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಸಂಘ-ಸಂಸ್ಥೆಗಳು ವೈರಸ್ ಹರಡದಂತೆ ಅಗಾಧ ಕ್ರಮಗಳನ್ನು ಕಾರ್ಯಗತಗೊಳಿಸಿದ್ದಾರೆ. ಇಂಥ ಯಾವುದೇ ಪ್ರಯತ್ನವೂ ವಿಫಲವಾಗದಂತೆ ನೋಡಿಕೊಳ್ಳಲಾಗುತ್ತದೆ” ಎಂದು ಜನತೆಗೆ ಮೋದಿ ಆಶ್ವಾಸನೆ ನೀಡಿದ್ದಾರೆ.