ಮೂರೇ ದಿನಕ್ಕೆ ಅಧಿವೇಶನ ಮುಗಿಸಲು ಸರ್ಕಾರ ತೀರ್ಮಾನ

ಬೆಂಗಳೂರು, – ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲಾಪವನ್ನು ಮೂರೇ ದಿನಕ್ಕೆ ಮೊಟಕಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಮೊದಲು ತಿಂಗಳ ಅಂತ್ಯದವರೆಗೆ ಮಳೆಗಾಲದ ಅಧಿವೇಶನ ನಡೆಸಲು ಉದ್ದೇಶಿಸಲಾಗಿತ್ತು. ಅದರೆ ಜನ ಪ್ರತಿನಿಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೇವಲ ಮೂರನೇ ದಿನಕ್ಕೆ (ಬುಧವಾರ) ಕ್ಕೆ ಮುಕ್ತಾಯಗೊಳಿಸಲು ಸರ್ಕಾರ ಮುಂದಾಗಿದೆ. ಭಾರೀ ವಿವಾದಕ್ಕೆ ಕಾರಣವಾಗಿರುವ ಭೂ- ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸದೇ, …

Read More »

‘ಬೆಂಗಳೂರು ಅಭಿವೃದ್ಧಿ ಕುರಿತು ಮೋದಿಗಿರುವ ಕಲ್ಪನೆ ಅದ್ಭುತ’

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರು ವ್ಯಕ್ತಿಯಲ್ಲ, ದೇವಮಾನವ. ಅವರನ್ನು ನಾನು ರಾಜರ್ಷಿ ಎಂದು ಕರೆಯುತ್ತೇನೆ. ಬೆಂಗಳೂರು ಅಭಿವೃದ್ಧಿ ಕುರಿತು ಅವರ ಕಲ್ಪನೆ, ಅವರಿಗಿರುವ ಮಾಹಿತಿ ನನ್ನನ್ನು ಅಚ್ಚರಿಗೊಳಿಸಿದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಭಾನುವಾರ ಹುಬ್ಬಳ್ಳಿ ಹಾಗೂ ಬೆಂಗಳೂರು ನಡುವಿನ ವರ್ಚುವಲ್‌ ರಾರ‍ಯಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅವರ ಜನ್ಮದಿನದ ನಿಮಿತ್ತ ದೆಹಲಿಗೆ ತೆರಳಿ ಭೇಟಿಯಾಗಿ 40 ನಿಮಿಷ ಅವರೊಡನೆ ಮಾತನಾಡಿದ್ದೆ. …

Read More »

ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್​ ಫಿದಾ!

ಬೆಳಗಾವಿ: ಮದುವೆಗೆ ತೆರಳುವ ಬದಲು ಮನೆಯೊಂದರಲ್ಲಿ ಸಿಲುಕಿದ್ದ ನಾಗರಹಾವನ್ನು ಉರಗ ತಜ್ಞೆ ನಿರ್ಜರಾ ಚಿಟ್ಟಿ ಬರಿಗೈಯಲ್ಲೇ ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಿರ್ಜರಾ ಹಾಗೂ ಆಕೆಯ ಪತಿ ಆನಂದ್​ ಮೂಲತಃ ವನ್ಯಜೀವಿ ತಜ್ಞರು. ಬೆಳಗಾವಿ ನಿವಾಸಿಗಳಾದ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಿನ್ನೆ ಸಜ್ಜಾಗುತ್ತಿದ್ದರಂತೆ. ಈ ನಡುವೆ ದಂಪತಿಗೆ ನಮ್ಮ ಮನೆಯಲ್ಲಿ ನಾಗರಹಾವು ಒಂದು ಸಿಲುಕಿಕೊಂಡಿದೆ. ದಯವಿಟ್ಟು ಬಂದು ಅದನ್ನು ಅಲ್ಲಿಂದ ಹೊರೆತೆಗೆಯಿರಿ ಅಂತಾ ನಗರದ …

Read More »

ಉದಾಸೀನ ಬೇಡ, ಕೈ ಮುಗಿದು ಕೇಳ್ಕೋತೀನಿ ಕೊರೊನಾ ಬಗ್ಗೆ ಎಚ್ಚರವಿರಲಿ -CM ಮನವಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಯಾವುದೇ ಉದಾಸೀನ ಮಾಡಬಾರದು ಎಂದು ಸಿಎಂ BS ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ. ಎಲ್ಲರೂ ದೈಹಿಕ ಅಂತರ ಕಾಪಾಡುವಂತೆ ಹಾಗೂ ಮಾಸ್ಕ್​ನ ಕಡ್ಡಾಯವಾಗಿ ಬಳಸುವಂತೆ ಮನವಿ ಸಹ ಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲದವರೂ ಸಹ ಕೊರೊನಾ ಸಮಸ್ಯೆಗೆ ಒಳಗಾಗಿರೋ ಪ್ರಕರಣ ಪತ್ತೆಯಾಗ್ತಿದೆ. ನಾಡಿನ ಜನರು ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ, ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಕೈ ಮುಗಿದು ಕೇಳಿಕೊಳ್ತೀನಿ ಅಂತಾ …

Read More »

ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಧುಮ್ಮಿಕ್ಕುತ್ತಿದೆ ಮಳೆ ನೀರು.

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಮಳೆ ನೀರು ಧುಮ್ಮಿಕ್ಕುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಹೊರವಲಯದಲ್ಲಿರುವ ಎಣ್ಣೆ ಹೊಂಡದಲ್ಲಿ ಮಳೆ ನಿರು ಧುಮ್ಮಿಕ್ಕುತ್ತಿದೆ. ಆದರೆ ಯಲ್ಲಮ್ಮ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿಲ್ಲ. ಗುಡ್ಡದ ಮೇಲಿಂದ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಎಣ್ಣೆ ಹೊಂಡದ ಮೂಲಕ ಕಾಲುವೆಯತ್ತ ಹರಿಯುತ್ತಿದೆ.

Read More »

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಗೂ ಸರ್ಕಾರದ ಕೆಲ ನೀತಿಗಳನ್ನ ವಿರೋಧಿಸಿ ಇಂದು ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಗೂ ಸರ್ಕಾರದ ಕೆಲ ನೀತಿಗಳನ್ನ ವಿರೋಧಿಸಿ ಇಂದು ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ 11ಕ್ಕೆ ಪ್ರಾರಂಭವಾಗುವ ಪ್ರತಿಭಟನಾ ಮೆರವಣಿಗೆ ಫ್ರೀಡಂ ಪಾರ್ಕ್​ವರೆಗೂ ನಡೆಯಲಿದೆ. ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಈಗಾಗಲೇ ಮುಂಜಾನೆಯೇ ಸಾವಿರಾರು ರೈತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಭದ್ರತೆಗಾಗಿ 500ಕ್ಕೂ …

Read More »

ವಿರೋಧ ಪಕ್ಷ 8 ಮಂದಿ ‘ರಾಜ್ಯ ಸಭಾ’ಸದ್ಯಸರು ಒಂದು ವಾರ ಅಮಾನತ್ತು. ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ

ನವದೆಹಲಿ: ಸೋಮವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಗದ್ದಲದಿಂದ ತೀವ್ರ ನೋವಾಗಿದೆ ಎಂದು ಹೇಳಿದ ನಂತರ ರಾಜ್ಯಸಭೆಯಲ್ಲಿ ಸೋಮವಾರ ಬೆಳಗ್ಗೆ ಪ್ರತಿಭಟನೆ ಗಳು ಭುಗಿಲೆದ್ದಿದ್ದು, ಎಂಟು ಮಂದಿ ವಿರೋಧ ಪಕ್ಷಗಳ ಸಂಸದರ ವಿರುದ್ಧ ಅಮಾನತು ನಿರ್ಣಯ ವನ್ನು ಅಂಗೀಕರಿಸಲಾಯಿತು. ನಿನ್ನೆ ಗದ್ದಲದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಹರಿವಂಶ್ ವಿರುದ್ಧ ವಿರೋಧ ಪಕ್ಷದ ಅವಿಶ್ವಾಸ ನಿರ್ಣಯವನ್ನು ನಾಯ್ಡು ಅವರು ತಿರಸ್ಕರಿಸಿದ್ದಾರೆ. ‘ನಿನ್ನೆ ನನಗೆ ತುಂಬಾ ನೋವಾಯಿತು. ನಿನ್ನೆ ಸಾಮಾಜಿಕ ದೂರಮತ್ತು …

Read More »

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆಗೆ ನಿವಾಸಿಗಳ ವಿರೋಧ

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯಲ್ಲಿ ಕೋವಿಡ್-19ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ, ಗುಂಡಿ ತೋಡಲು ಜೆಸಿಬಿಯೊಂದಿಗೆ ಬಂದಿದ್ದ ಕುಟುಂಬದವರನ್ನು ಮತ್ತು ಪಾಲಿಕೆ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲು ಅವರು ಬಂದಿದ್ದರು. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಮಾಜಸೇವಕಿ ಸರಳಾ ಹೆರೇಕರ್‌ ಅವರಿಗೆ ವಿಷಯ ತಿಳಿಸಿದ್ದರು. ಅವರು ಬಂದ ಬಳಿಕ ನಿವಾಸಿಗಳು, …

Read More »

ಕೊರೋನಾ : ರಾಜ್ಯದಲ್ಲಿ ಈಗೇಲ್ಲಿಗೆ ತಲುಪಿದೆ ಮಹಾಮಾರಿ ಹಂತ?

ಬೆಂಗಳೂರು : ರಾಜ್ಯದಲ್ಲಿ ಭಾನುವಾರ ಹೊಸದಾಗಿ 8,445 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, 8,611 ಮಂದಿ ಗುಣಮುಖರಾಗಿದ್ದಾರೆ. ಇದೇ ದಿನ 101 ಮಂದಿ ಮೃತಪಟ್ಟಿದ್ದು ಈವರೆಗೆ ಸಾವಿಗೀಡಾದವರ ಸಂಖ್ಯೆ ಸಂಖ್ಯೆ 8 ಸಾವಿ​ರದ ಸಂಖ್ಯೆ ದಾಟಿ 8023ಕ್ಕೆ ಏರಿದೆ. ಸೆಪ್ಟೆಂಬರ್‌ 11ರಂದು ಸಾವಿನ ಸಂಖ್ಯೆ 7 ಸಾವಿರ ದಾಟಿತ್ತು. ಆ ನಂತ​ರದ 10 ದಿನ​ದಲ್ಲಿ 1000 ಸೋಂಕಿ​ತರು ಸಾವ​ನ್ನ​ಪ್ಪಿ​ದ್ದಾ​ರೆ. ಈ ನಡುವೆ, 8,611 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದರೊಂದಿಗೆ ಈವರೆಗೆ 4.13 ಲಕ್ಷ ಜನರು …

Read More »

ಶಾಸಕರು ಸಚಿವರೇ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದು:H.D.D.

ನವದೆಹಲಿ: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದೆ. ಶಾಸಕರು ಸಚಿವರೇ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದು ಬಿ.ವೈ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿಎಂ ಬಿಎಸ್‍ವೈ ದೆಹಲಿ ಪ್ರವಾಸ ವೇಳೆ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ವಿರೋಧದ ನಡುವೆಯೇ ಬಿಎಸ್‍ವೈ ಮತ್ತಷ್ಟು ದಿನಗಳ ಕಾಲ ಮುಂದುವರಿಯಲು ಹೈಕಮಾಂಡ್ ಸೂಚನೆ ನೀಡಿದೆ . ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು …

Read More »