Breaking News

ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವಿಜಯಪುರ: ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದವನನ್ನು ಅಗ್ನಿಶಾಮಕ ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.ವಿಜಯಪುರ ತಾಲೂಕಿನ ಅತ್ತಾಲಟ್ಟಿ ಬಳಿ ಘಟನೆ ನಡೆದಿದ್ದು, ಅತ್ತಾಲಟ್ಟಿ ನಿವಾಸಿ ಬಂದೇನವಾಜ್ ಮೊಕಾಶಿಯವರನ್ನು ರಕ್ಷಣೆ ಮಾಡಲಾಗಿದೆ. ಸಕಾಲಕ್ಕೆ ತೆರಳಿ ಅಗ್ನಿಶಾಮಕ ದಳದ ಸಿಬ್ಬಂದಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಸಾರವಾಡದಿಂದ ಅತ್ತಾಲಟ್ಟಿಗೆ ಹೊರಟಿದ್ದ ವೇಳೆ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದ. ಕಳೆದ ರಾತ್ರಿ ನಡೆದ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. …

Read More »

“ಖುಷ್ಬೂ ಪಕ್ಷ ಬಿಟ್ಟಿರುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ” : ಗುಂಡೂರಾವ್

ಬೆಂಗಳೂರು, ಅ.12- ಖುಷ್ಬೂ ಅವರು ಕಾಂಗ್ರೆಸ್ ಪಕ್ಷ ತೊರೆದಿರುವುದು ತಮಿಳುನಾಡು ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಖುಷ್ಬೂ ಇದೀಗ ಅದೇ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗುವ ಮೂಲಕ ಕಾಂಗ್ರೆಸ್ ಮುಖಂಡರ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ನೋಡಿದರೆ ಅವರಿಗೆ ಸೈದ್ಧಾಂತಿಕ ಸಿದ್ಧಾಂತವಿಲ್ಲ ಎಂಬುದನ್ನು …

Read More »

“ನನ್ನ ಮೇಲೆ ವಿಶ್ವಾಸವಿಟ್ಟು ನೀಡಿದ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸುತ್ತೇನೆ”

ಬೆಂಗಳೂರು, ಅ.12- ಆರೋಗ್ಯ ಇಲಾಖೆಯಂತಹ ಪ್ರಮುಖ ಜವಾಬ್ದಾರಿಯನ್ನು ನನ್ನ ಮೇಲೆ ವಿಶ್ವಾಸವಿಟ್ಟು ಸಿಎಂ ಹಾಗೂ ವರಿಷ್ಠರು ನೀಡಿದ್ದಾರೆ. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಅದನ್ನು ನಿಭಾಯಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಆದಿಚುಂಚನಗಿರಿ ಶಾಖಾಮಠಕ್ಕೆ ಇಂದು ಭೇಟಿ ನೀಡಿದ ಅವರು, ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಎಸ್.ಎಂ.ಕೃಷ್ಣ ಸರ್ಕಾರದ ವೇಳೆ ಸಂಪುಟದಲ್ಲಿ ಹೆಚ್ಚಿನ ಸ್ಥಾನಕ್ಕಾಗಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯನ್ನು ಪ್ರತ್ಯೇಕಿಸಲಾಗಿತ್ತು. …

Read More »

ದೇವಸ್ಥಾನದ ಅರ್ಚಕರಿಗೆ ಉಳಿಗಾಲವಿಲ್ಲದಿರುವುದುವಿಪರ್ಯಾಸ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕಿಡಿ

ಲಕ್ನೋ, ಅ.12- ಸಂತ ರಾಜ್ಯವಾಳುತ್ತಿರುವ ಉತ್ತರ ಪ್ರದೇಶದಲ್ಲೂ ದೇವಸ್ಥಾನದ ಅರ್ಚಕರಿಗೆ ಉಳಿಗಾಲವಿಲ್ಲದಿರುವುದು ವಿಪರ್ಯಾಸ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ. ಜಮೀನು ವಿವಾದಕ್ಕೆ ಸಂಬಂಸಿದಂತೆ ಗೋಂಡಾ ಜಿಲ್ಲೆಯ ದೇವಸ್ಥಾನ ಅರ್ಚಕರೊಬ್ಬರ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿರುವುದನ್ನು ಉಲ್ಲೇಖಿಸಿ ಮಾಯಾವತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟ್ವಿಟರ್‍ನಲ್ಲಿ ವಾಗ್ದಾಳಿ ನಡೆಸಿದ್ದಾರೆ ಸಂತ ರಾಜ್ಯವಾಳುತ್ತಿರುವ ಉತ್ತರ ಪ್ರದೇಶದಲ್ಲಿ ಅರ್ಚಕರ ಮೇಲೆ ದಾಳಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಅದನ್ನು ಗಮನಿಸಿದರೆ ಯುಪಿಯಲ್ಲಿ ಕಾನೂನು ಸುವ್ಯವಸ್ಥೆ …

Read More »

ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರಿಗೆದಸರಾ ಉದ್ಘಾಟನೆಗೆ ಆಹ್ವಾನ

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರಿಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಸರ್ಕಾರದ ಗೌರವಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದು ಡಾಕ್ಟರ್ ಮಂಜುನಾಥ್ ದಸರಾ ಉದ್ಘಾಟನೆಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದ ತಂಡ ಇಂದು ಸಿಎಂ ಯಡಿಯೂರಪ್ಪಗೆ ಅಧಿಕೃತವಾಗಿ ಆಹ್ವಾನ ನೀಡಿದೆ. ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟನೆಗೆ ಡಾ.ಮಂಜುನಾಥ್ ಅವರಿಗೂ ಆಹ್ವಾನ ನೀಡಿದ್ದಾರೆ. ಮೈಸೂರು ಪೇಟ ಮತ್ತು …

Read More »

ಚಿತ್ರನಟಿ ಖುಷ್ಬೂ  ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ಹೊಸದಿಲ್ಲಿ:  ಚಿತ್ರನಟಿ ಖುಷ್ಬೂ  ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಇಂದು  ರಾಜೀನಾಮೆ ನೀಡಿದ್ದಾರೆ. ಖುಷ್ಬೂ ಬಿಜೆಪಿ ಸೇರಲಿದ್ದಾರೆ ಎಂಬ  ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರೆ ಸ್ಥಾನದಿಂದ ಕೈ ಬಿಡಲಾಗಿತ್ತು. 2014ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್​ ಹೀನಾಯ ಸೋಲನುಭವಿಸಿದ ಹೊತ್ತಲ್ಲಿ ನಾನು ಕಾಂಗ್ರೆಸ್​ಗೆ ಸೇರ್ಪಡೆಯಾದೆ. ನಾನು ಯಾವುದೇ ಹಣಕಾಸಿನ ಲಾಭಕ್ಕಾಗಿ ಅಥವಾ ಖ್ಯಾತಿಗಾಗಿ ಪಕ್ಷಕ್ಕೆ ಬರಲಿಲ್ಲ. ಪಕ್ಷದೊಳಗೆ ಉನ್ನತ ಮಟ್ಟದಲ್ಲಿ ಕುಳಿತಿರುವ ಕೆಲವರು, ವಾಸ್ತವತೆ ಅಥವಾ ಸಾರ್ವಜನಿಕರೊಂದಿಗೆ …

Read More »

ರಮೇಶ ಜಾರಕಿಹೊಳಿ  ಉಪ ಚುನಾವಣೆ ಬಿಜೆಪಿ  ಟಿಕೆಟ್ ನೀಡಬೇಕು ಎಂದು ಒತ್ತಾಯB.S.Y.ಗೆ

ಬೆಂಗಳೂರು:  ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ  ಅವರು, ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪರನ್ನು ಭೇಟಿಯಾದ ಜಾರಕಿಹೊಳಿ, 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆ ಬಿಜೆಪಿ  ಟಿಕೆಟ್ ಅವರನ್ನು ಮುನಿರತ್ನ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ. ಮುನಿರತ್ನಗೆ ಟಿಕೆಟ್ ಕೈ ತಪ್ಪಬಾರದು. ಈ ಕುರಿತು ಹೈಕಮಾಂಡ್ ನಾಯಕರ ಬಳಿ ಮಾತುಕತೆ …

Read More »

ಅಮರನಾಥ್ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ ಟಿಕೆಟ್ ಎಂಬ ಸುದ್ದಿ

ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಟಿಕೆಟ್ ಗಾಗಿ ಲಾಬಿ ಆರಂಭವಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಸದ್ಯಕ್ಕೆ ಬಿಜೆಪಿ ಕಠಿಣ ಸವಾಲಾಗಿದೆ. ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ಅವರಿಗೆ ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ ಟಿಕೆಟ್ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಲೋಕಸಭೆ ವ್ಯಾಪ್ತಿಗೆ ಬರುವ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಜಾರಕಿ ಹೊಳಿ …

Read More »

ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಮಾಡಿದ್ದ ರೈತ ಸಾವು

ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೊನಾ ವೈರಸ್ ನಿಂದ ಬೇಗ ಗುಣಮುಖರಾಗುವಂತೆ ಉಪವಾಸ ಮಾಡಿದ್ದ ತೆಲಂಗಾಣದ ರೈತ ಸಾವನ್ನಪ್ಪಿದ್ದಾರೆ ರಾಜು ಅವರು ಡೋನಾಲ್ಡ್ ಟ್ರಂಪ್ ಪಕ್ಕಾ ಅಭಿಮಾನಿ. ಹೀಗಾಗಿ ಟ್ರಂಪ್ ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಸುದ್ದಿ ಕೇಳಿದ ಕೂಡಲೇ ರಾಜು, ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಕುಳಿತು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ ಅನ್ನ-ನೀರು ಹಾಗೂ ನಿದ್ದೆ ಇಲ್ಲದೆ ಕೆಲವು ರಾತ್ರಿಗಳನ್ನು ಕಳೆದಿದ್ದಾರೆ. ಟ್ರಂಪ್ ಗೆ ಕೊರೊನಾ ಬಂದ …

Read More »

ನೆಲಮಂಗಲ: ಆತ್ಮಹತ್ಯೆಗೆ ಸಿದ್ಧತೆ ನಡೆಸಿದ್ದ ಹೆಂಡತಿಯನ್ನ ಕೊಂದವನಿಗೆ ಜೀವಾವಧಿ ಶಿಕ್ಷೆ!

ನೆಲಮಂಗಲ: 2013ರ ಕೊಲೆ ಆರೋಪಿಗೆ 55 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ನ್ಯಾಯಾಲಯ ತೀರ್ಪುಕೊಟ್ಟಿದೆ. ಕಾಂತರಾಜು ಅಲಿಯಾಸ್ ರಾಜು (31) ಶಿಕ್ಷೆಗೆ ಒಳಪಟ್ಟ ಅಪರಾಧಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಹಸುಗಳನ್ನ ಸಾಕುವ ಕೆಲಸವನ್ನ ಅಪರಾಧಿ ಕಾಂತರಾಜು ಹಾಗೂ ಆತನ ಹೆಂಡತಿ ಮೃತೆ ಲಲಿತಾಬಾಯಿ ಮಾಡುತ್ತಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆ ಕಾಟನಾಯಕನಹಳ್ಳಿಯವರಾದ ಇಬ್ಬರು ಜೀವನಾಧಾರಕ್ಕಾಗಿ ನೆಲಮಂಗಲದ ಗೊಲ್ಲಹಳ್ಳಿಗೆ ಬಂದಿದ್ದು, ಅಪರಾಧಿ ಕಾಂತರಾಜ್ ತನಗಿಂತ …

Read More »