Breaking News
Home / ರಾಷ್ಟ್ರೀಯ / ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಮಾಡಿದ್ದ ರೈತ ಸಾವು

ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಮಾಡಿದ್ದ ರೈತ ಸಾವು

Spread the love

ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೊನಾ ವೈರಸ್ ನಿಂದ ಬೇಗ ಗುಣಮುಖರಾಗುವಂತೆ ಉಪವಾಸ ಮಾಡಿದ್ದ ತೆಲಂಗಾಣದ ರೈತ ಸಾವನ್ನಪ್ಪಿದ್ದಾರೆ

ರಾಜು ಅವರು ಡೋನಾಲ್ಡ್ ಟ್ರಂಪ್ ಪಕ್ಕಾ ಅಭಿಮಾನಿ. ಹೀಗಾಗಿ ಟ್ರಂಪ್ ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಸುದ್ದಿ ಕೇಳಿದ ಕೂಡಲೇ ರಾಜು, ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಕುಳಿತು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ ಅನ್ನ-ನೀರು ಹಾಗೂ ನಿದ್ದೆ ಇಲ್ಲದೆ ಕೆಲವು ರಾತ್ರಿಗಳನ್ನು ಕಳೆದಿದ್ದಾರೆ.

ಟ್ರಂಪ್ ಗೆ ಕೊರೊನಾ ಬಂದ ಸುದ್ದಿ ಕೇಳದ ಕೂಡಲೇ ರಾಜು ಅವರು ಶಾಕ್ ಗೆ ಒಳಗಾಗಿದ್ದಾರೆ ಎಂದು ಗೆಳೆಯರು ತಿಳಿಸಿದ್ದಾರೆ. ಕಳೆದ ವರ್ಷ ಟ್ರಂಪ್‍ನ 6 ಅಡಿಗಳ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅಲ್ಲದೆ ಅವರನ್ನು ಪೂಜಿಸುತ್ತಿದ್ದರು ಎಂದು ರಾಜು ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಟ್ರಂಪ್ ಗೆ ಕೊರೊನಾ ಪಾಸಿಟಿವ್ ಪರೀಕ್ಷೆಯ ಬಗ್ಗೆ ತಿಳಿದಾಗ ಅವರು ಅಸಮಾಧಾನಗೊಂಡರು. ಅವರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದರು, ಹಸಿವಿನಿಂದ ಬಳಲುತ್ತಿದ್ದರು ಮತ್ತು ಕಳೆದ ಮೂರು-ನಾಲ್ಕು ದಿನಗಳಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು. ಆದರೆ ಅವರು ಭಾನುವಾರ ಮಧ್ಯಾಹ್ನ ಹಾರ್ಟ್ ಅಟ್ಯಾಕ್ ನಿಂದ ನಿಧನ ಹೊಂದಿದರು ಎಂದು ರಾಜು ಆಪ್ತ ತಿಳಿಸಿದ್ದಾರೆ


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ

Spread the loveಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ