Breaking News

ರಾಜ್ಯದಲ್ಲಿ ಕೊಂಚ ತಗ್ಗಿದ ಕೊರೊನಾ ಸೋಂಕಿನ ಅಬ್ಬರ

ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 70 ಜನರು ಸತ್ತಿದ್ದಾರೆ ಮತ್ತು ಹೊಸದಾಗಿ 7,606 ಜನರಲ್ಲಿ ಸೋಂಕು ದೃಢಪಟ್ಟಿದೆಯೆಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯಿಂದ ಗೊತ್ತಾಗಿದೆ . ಮಹಾಮಾರಿಯಿಂದ ಇದುವರೆಗೆ ಮರಣಿಸಿದವರ ಸಂಖ್ಯೆ ಇಂದು ಹತ್ತು ಸಾವಿರ (10,036) ದಾಟಿದೆ . ಇಲ್ಲಿಯವರೆಗೆ 7,07,860 ಸೋಂಕು ತಾಕಿಸಿಕೊಂಡವರ ಪೈಕಿ 5,92,084 ಜನ ಗುಣಮುಖರಾಗಿ ಮನೆಗಳಿಗೆ ಹಿಂತಿರುಗಿದ್ದಾರೆ ಮತ್ತು ಉಳಿದ 1,15,776 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 18 ಜನ ಬಲಿಯಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 3,498 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ . ನಗರದಲ್ಲಿ ಇದುವರೆಗೆ ಸೋಂಕಿಗೆ ತುತ್ತಾದವರ ಸಂಖ್ಯೆ 3,362 ತಲುಪಿದೆ ಮತ್ತು …

Read More »

ಬಿಗ್ ಬಿ ಯಾವತ್ತಿಗೂ ಬ್ಯುಸಿ ಬೀ!

ಬಾಲಿವುಡ್​ನಲ್ಲೀಗ ಅತ್ಯಂತ ಚಲಾವಣೆಯಲ್ಲಿರುವ ಅಥವಾ ಲಾಕ್​ಡೌನ್ ಹೊರತಾಗಿಯೂ ಬಹಳ ಬ್ಯುಸಿಯಾಗಿರುವ ನಟ ಯಾರೆಂದು ಊಹಿಸಬಲ್ಲಿರಾ ? ನಿಮಗೆ ಆಶ್ಚರ್ಯವಾಗಬಹುದು . ಕೊವಿಡ್ -19 ಸೋಂಕಿಗೆ ಹೆದರಿ ಬಹಳಷ್ಟು ನಟ – ನಟಿಯರು ತಮ್ಮ ಮನೆಗಳಿಂದ ಆಚೆ ಬರುತ್ತಿಲ್ಲ . ಆದರೆ , ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಖುದ್ದು ಸೋಂಕಿಗೊಳಗಾಗಿ ಮೂರು ವಾರಗಳ ಕಾಲ ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ ಬಾಲಿವುಡ್​ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಈಗ ದಿನವಿಡೀ ಕೆಲಸ ಮಾಡಿಕೊಂಡೇ ಇದ್ದಾರೆ . ಹೌದು , ನಿನ್ನೆಯಷ್ಟೇ ( ಅಕ್ಟೋಬರ್ 11) ತಮ್ಮ 78 ನೇ ಹುಟ್ಟಹಬ್ಬವನ್ನು ಬಹಳ ಸರಳ ರೀತಿಯಲ್ಲಿ ಕುಟುಂಬದ …

Read More »

ವಿವಿಧ ಸಮುದಾಯದ ಜನರು ಸ ಹೃದಯ ಸಹಬಾಳ್ವೆಯಿಂದ ಬಾಳಬೇಕು

  ಅಥಣಿ  : ದೇಶದಲ್ಲಿ ಬದುಕುತ್ತಿರುವ ವಿವಿಧ ಸಮುದಾಯದ ಜನರು ಸ ಹೃದಯ ಸಹಬಾಳ್ವೆಯಿಂದ ಬಾಳಬೇಕು . ಸಮಾಜದಲ್ಲಿ ಸಮಾನತೆ  ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕೈಜೊಡಿಸಬೇಕೆಂದು ಅಥಣಿ  ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕರಾದ ಜ್ಯೋತಿ ನರೋಟಿ  ಹೇಳಿದರು . ಜಿಲ್ಲಾ ಪಂಚಾಯತ ಬೆಳಗಾವಿ ತಾಲೂಕಾ ಆಡಳಿತ ಸಮಾಜ ಕಲ್ಯಾಣ ಇಲಾಖೆ ಅಥಣಿ  ಹಾಗೂ ಗ್ರಾಮ ಪಂಚಾಯತ ನದಿ ಇಂಗಳಗಾಂವ  ಇವರ ಸಹಯೋಗದಲ್ಲಿ ಅಸ್ಪೃಶ್ಯತಾ ನಿರ್ಮೂಲನೆ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳ ಜಾಗೃತಿ …

Read More »

ರೇಣುಕಾ ಯಲ್ಲಮ್ಮ ದೇಗುಲದ‌ ಬಳಿ ಅಕ್ರಮ ಕಟ್ಟಡ! ನಿರ್ಮಾಣಕ್ಕೆ ಮಧ್ಯಂತರ ತಡೆ

ಬೆಳಗಾವಿ: ರೇಣುಕಾ ಯಲ್ಲಮ್ಮ ದೇಗುಲದ‌ ಬಳಿ ಅಕ್ರಮ ಕಟ್ಟಡ ನಿರ್ಮಾಣ ಆರೋಪಕ್ಕೆ ಸಂಬಂಧಿಸಿ ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಧ್ಯಂತರ ತಡೆ ನೀಡಲಾಗಿದೆ.   ಸವದತ್ತಿಯ ದೇವಸ್ಥಾನ ಸಂರಕ್ಷಿತ ಸ್ಮಾರಕ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಸಂರಕ್ಷಿತ ಸ್ಮಾರಕ. ಹಾಗಾಗಿ, ಅದರ 100 ಮೀಟರ್ ಸುತ್ತಳತೆಯಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿದೆ. ದೇವಸ್ಥಾನದ ಸುತ್ತ ನಿಯಮ ಮೀರಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ …

Read More »

ಸೀತಾಫಲ ಹಣ್ಣು ತರಲು ಬೆಟ್ಟಕ್ಕೆ ಹೋದ ಮಹಿಳೆ ವಾಪಸ್​ ಬರಲೇ ಇಲ್ಲ..

ಕಲಬುರಗಿ: ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬಳ ಮೃತದೇಹ ಇಂದು ಪತ್ತೆಯಾಗಿದೆ. ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ತಾಂಡಾದ ನಿವಾಸಿ ಶಾಂತಾಬಾಯಿ(40) ಮೃತ ದರ್ದೈವಿ. ದಡದ ಮರದ ಕೊಂಬೆಯಲ್ಲಿ ಶವ ಪತ್ತೆ.. ಶಾಂತಾಬಾಯಿ ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದಳು. ಸೀತಾಫಲ ಹಣ್ಣು ತರಲು ಬೆಟ್ಟಕ್ಕೆ ಹೋಗಿ ವಾಪಸ್ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಇಂದು ಕಮಲಾಪುರ ತಾಲೂಕಿನ ಮರಗುತ್ತಿ ತಾಂಡಾ ಬಳಿಯಿರುವ ಹಳ್ಳದ ದಡದ ಮರದ ಕೊಂಬೆಯಲ್ಲಿ …

Read More »

ವರುಣನ ಆರ್ಭಟಕ್ಕೆ ಗೋಡೆ ಗಡಗಡ: ನಡುಗಿದ ಐತಿಹಾಸಿಕ ಸವದತ್ತಿ ಕೋಟೆ

ಬೆಳಗಾವಿ: ಜಿಲ್ಲೆಯಾದ್ಯಂತ ಭಾರಿ ಮಳೆ ಸಂಭವಿಸಿದೆ. ವರುಣನ ಆರ್ಭಟಕ್ಕೆ ಐತಿಹಾಸಿಕ ಸವದತ್ತಿ ಕೋಟೆಯ ಒಂದು ಭಾಗ ಕುಸಿದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪುರಾತನ ನಗರಗಳಲ್ಲಿ ಒಂದು. ಆದರೆ ಮಳೆಯ ಪ್ರಭಾವದಿಂದಾಗಿ ತಮ್ಮ ಧಾರ್ಮಿಕತೆ, ಇತಿಹಾಸ ಸಾರುತ್ತಿದ್ದ ಪುರಾತನ ಕಲೆಗಳಿಗೆ ಹಾನಿಯಾಗುತ್ತಿದೆ. 18ನೇ ಶತಮಾನದಲ್ಲಿ ಜಯಪ್ಪ ದೇಸಾಯಿಯಿಂದ ನಿರ್ಮಿಸಲ್ಪಟ್ಟ ಸವದತ್ತಿ ಪಟ್ಟಣದಲ್ಲಿರುವ ಕೋಟೆಯ ಒಂದು ಭಾಗದ ಗೋಡೆ ಕುಸಿದಿದೆ. ಈ ಘಟನೆಯಿಂದಾಗಿ ಕೋಟೆ ಅಕ್ಕಪಕ್ಕದ ಜನರಲ್ಲಿ ಆತಂಕ ಉಂಟಾಗಿದೆ. ಗೋಡೆ ಕುಸಿಯುವ …

Read More »

IPL 2020: RCB vs KKR Live Score ರನ್ ಮಷಿನ್​ ಕೊಹ್ಲಿ ಬಳಗಕ್ಕೆ ಕೊಲ್ಕತ್ತಾ ನೈಟ್ ಚಾಲೆಂಜ್​..

ಮರಳುಗಾಡಿನ ಮಹಾಯುದ್ಧದಲ್ಲಿ ಆರ್​ಸಿಬಿ ಅಬ್ಬರ ಪಂದ್ಯದಿಂದ ಪಂದ್ಯಕ್ಕೆ ಜೋರಾಗ್ತಿದೆ. ಹೀಗಾಗಿ ಇಂದು ನಡೆಯುತ್ತಿರುವ ಆರ್​ಸಿಬಿ ಮತ್ತು ಕೆಕೆಆರ್ ನಡುವಿನ ಕದನ ತೀವ್ರ ಕುತೂಹಲ ಕೆರಳಿಸಿದೆ. ಟೂರ್ನಿಯ ಆರಂಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಗ್ಗರಿಸಿದ್ರೂ, ನಂತರದ ಪಂದ್ಯಗಳಲ್ಲಿ ಗೆಲುವಿನ ಕೇಕೆ ಹಾಕಿ ಮುನ್ನುಗ್ಗುತ್ತಿದೆ. ಹೀಗಾಗಿ ದಿನೇಶ್ ಕಾರ್ತಿಕ್ ಪಡೆಯನ್ನ ಕೊಹ್ಲಿ ಪಡೆ ಕಟ್ಟಿ ಹಾಕಬೇಕು ಅಂದ್ರೆ, ಬ್ಯಾಟಿಂಗ್​ನಂತೆ ಬೌಲಿಂಗ್​ನಲ್ಲೂ ಅದ್ಭುತ ಪ್ರದರ್ಶನ ನೀಡಲೇಬೇಕು. ಐಪಿಎಲ್​ನಲ್ಲಿ ಇದುವರೆಗೂ ಆರ್​ಸಿಬಿ ಮತ್ತು ಕೆಕೆಆರ್ …

Read More »

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ನಂದಿಬೆಟ್ಟ ಹಾಗೂ ಕೆಮ್ಮಣ್ಣುಗುಂಡಿಯನ್ನು ತೋಟಗಾರಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ…………….?

ಬೆಂಗಳೂರು, ಅ.12- ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ನಂದಿಬೆಟ್ಟ ಹಾಗೂ ಕೆಮ್ಮಣ್ಣುಗುಂಡಿಯನ್ನು ತೋಟಗಾರಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವ ಸರ್ಕಾರದ ತೀರ್ಮಾನಕ್ಕೆ ಎರಡು ಇಲಾಖೆಗಳ ನಡುವೆ ಭಾರೀ ಸಂಘರ್ಷ ಏರ್ಪಟ್ಟಿದೆ. ಯಾವುದೇ ಕಾರಣಕ್ಕೂ ಈ ಎರಡೂ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಲು ಅವಕಾಶ ಕೊಡಬಾರದೆಂದು ತೋಟಗಾರಿಕೆ ಇಲಾಖೆಯ ಅಕಾರಿಗಳು ನಾರಾಯಣಗೌಡ ಅವರ ಮೇಲೆ ಒತ್ತಡ ಹಾಕಿದ್ದಾರೆ. ವಾರ್ಷಿಕವಾಗಿ ಇಲಾಖೆಗೆ ಕೋಟಿಗಳಷ್ಟು ಆದಾಯ ತರುವ ಈ ಪ್ರವಾಸಿತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ …

Read More »

150 ವರ್ಷ ಇತಿಹಾಸವಿರೋ ಕಾಂಗ್ರೆಸ್ ಪಕ್ಷ ಕೋಮುವಾದಿ ಬಿಜೆಪಿ ಜೊತೆ ಸೇರಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ

ಹಾಸನ: 150 ವರ್ಷ ಇತಿಹಾಸವಿರೋ ಕಾಂಗ್ರೆಸ್ ಪಕ್ಷ ಕೋಮುವಾದಿ ಬಿಜೆಪಿ ಜೊತೆ ಸೇರಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಮಗನಿಗೆ ಮಂಡ್ಯದಲ್ಲಿ ಜೆಡಿಎಸ್ ಮತಗಳು ಸರಿಯಾಗಿ ಬಂದಿದೆ. 150 ವರ್ಷ ಇತಿಹಾಸ ಇರುವ ಪಕ್ಷ ಕಾಂಗ್ರೆಸ್ ಪಕ್ಷ ಕೋಮುವಾದಿಗಳ ಜೊತೆ ಸೇರಿದೆ ಎಂದು ಹೇಳಿದರು. ರಾಜ್ಯದ …

Read More »

ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆ

ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆಯಾಗಿದೆ. ಹಾಲಿನ ಪ್ಯಾಕೆಟ್ ಜೊತೆಗೆ ಮೂಟೆಯಲ್ಲಿ ಪಿಪಿಇ ಕಿಟ್‍ಗಳು ಕೂಡ ಪತ್ತೆಯಾಗಿವೆ. ಆನೇಕಲ್ ತಾಲೂಕಿನ ಹುಸ್ಕೂರು ಆರ್‌ಟಿಒ ಕಚೇರಿ ಮುಂದೆ ಹಾಲಿನ ಪಾಕೆಟ್‍ಗಳು ಪತ್ತೆಯಾಗಿವೆ. ನಂದಿನಿ, ಅಕ್ಷಯಕಲ್ಪ ಕಂಪನಿಯ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಬಿದ್ದಿರುವುದರಿಂದ ವಾಸನೆ ಬರುತ್ತಿದ್ದು, ಸಾರ್ವಜನಿಕರಿಗೆ ಓಡಾಡಲು ಪರದಾಡುತ್ತಿದ್ದಾರೆ. ಹಾಲಿನ ಪ್ಯಾಕೆಟ್‍ಗಳ ಮೇಲೆ 9ನೇ ಡೇಟ್ ಇದೆ. ಆದರೆ ಇಷ್ಟೊಂದು …

Read More »