Breaking News
Home / ಅಂತರಾಷ್ಟ್ರೀಯ / ಬಿಗ್ ಬಿ ಯಾವತ್ತಿಗೂ ಬ್ಯುಸಿ ಬೀ!

ಬಿಗ್ ಬಿ ಯಾವತ್ತಿಗೂ ಬ್ಯುಸಿ ಬೀ!

Spread the love

ಬಾಲಿವುಡ್​ನಲ್ಲೀಗ ಅತ್ಯಂತ ಚಲಾವಣೆಯಲ್ಲಿರುವ ಅಥವಾ ಲಾಕ್​ಡೌನ್ ಹೊರತಾಗಿಯೂ ಬಹಳ ಬ್ಯುಸಿಯಾಗಿರುವ ನಟ ಯಾರೆಂದು ಊಹಿಸಬಲ್ಲಿರಾ ?

ನಿಮಗೆ ಆಶ್ಚರ್ಯವಾಗಬಹುದು ಕೊವಿಡ್ -19 ಸೋಂಕಿಗೆ ಹೆದರಿ ಬಹಳಷ್ಟು ನಟ – ನಟಿಯರು ತಮ್ಮ ಮನೆಗಳಿಂದ ಆಚೆ ಬರುತ್ತಿಲ್ಲ ಆದರೆ ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಖುದ್ದು ಸೋಂಕಿಗೊಳಗಾಗಿ ಮೂರು ವಾರಗಳ ಕಾಲ ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ ಬಾಲಿವುಡ್​ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಈಗ ದಿನವಿಡೀ ಕೆಲಸ ಮಾಡಿಕೊಂಡೇ ಇದ್ದಾರೆ .

ಹೌದು ನಿನ್ನೆಯಷ್ಟೇ ಅಕ್ಟೋಬರ್ 11) ತಮ್ಮ 78 ನೇ ಹುಟ್ಟಹಬ್ಬವನ್ನು ಬಹಳ ಸರಳ ರೀತಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಆಚರಿಸಿಕೊಂಡ ಬಿಗ್ ಬಿ, ತಮ್ಮ ಅರ್ಧಕ್ಕಿಂತ ಕಡಿಮೆ ವಯಸ್ಸಿನ ನಟರಿಗಿಂತ ಜಾಸ್ತಿ ಬ್ಯುಸಿಯಾಗಿದ್ದಾರೆ .

‘ಕೌನ್ ಬನೇಗಾ ಕರೋಡ್​ಪತಿ’ಯ ಹೊಸ ಆವೃತಿ ಈಗಾಗಲೇ ಆರಂಭವಾಗಿರುವುದು ಎಲ್ಲರಿಗೂ ಗೊತ್ತಿದೆ ಈ ಕಾರ್ಯಕ್ರಮಕ್ಕಾಗಿ ಬಚ್ಚನ್ ಬೆಳಿಗ್ಗೆ ಗಂಟೆಯಿಂದ ರಾತ್ರಿ ಗಟೆಯವರೆಗೆ ಶೂಟ್ ಮಾಡುತ್ತಾರೆ ಸತತವಾಗಿ 12 ತಾಸು ಕೆಲಸ ಮಾಡಿದ ನಂತರ ಸ್ವಲ್ಪ ಹೊತ್ತು ಡಬ್ಬಿಂಗ್ ಕೆಲಸದಲ್ಲೂ ತೊಡಗುತ್ತಾರಂತೆ !

  ಶತಮಾನದ ಮಹಾನ್ ನಟನಿಗೆ ದಣಿವಾಗುವುದಿಲ್ಲವೇ ಅಮಿತಾಬ್ ಅವರನ್ನು ಲೀಡ್ ರೋಲ್​ನಲ್ಲಿರಿಸಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಮನ್​ಮೋಹನ್ ದೇಸಾಯಿ ಅವರನ್ನು ಒಮ್ಮೆ ಪತ್ರಕರ್ತರು , ‘ ನಿಮ್ಮ ಪ್ರಕಾರ ಜನಪ್ರಿಯತೆಯ ಉತ್ತುಂಗದಲ್ಲಿರುವ ಮೂರು ನಟರು ಯಾರು ಅಂತ ಕೇಳಿದಾಗ , ‘ ನಂಬರ್ ರಿಂದ 10 ರವರೆಗಿನ ಸ್ಥಾನಗಳು ಕೇವಲ ಅಮಿತಾಬ್ ಬಚ್ಚನ್​ಗೆ ಸೇರಿದ್ದು ನಂಬರ್ 11 ರಿಂದ ಉಳಿದವರ ಗಣತಿ ಶುರುವಾಗುತ್ತದೆ ,’ ಅಂತ ಹೇಳಿದ್ದರು !

ಌಂಗ್ರಿ ಯಂಗ್​ಮ್ಯಾನ್ ಅಂಕಿತ ನಾಮದೊಂದಿಗೆ ಬಾಲಿವುಡ್ ಅನ್ನು ದಶಕಗಳಿಂದ ಆಳುತ್ತಿರುವ ಬಿಗ್ ಬಿ ಅವರ ಕ್ರಿಯಾಶೀಲತೆ ಯುವಕರನ್ನು ನಾಚಿಸುತ್ತದೆ ಯುವ ಮತ್ತು ಹಲವಾರು ಹೆಸರಾಂತ ನಟರು ಅನ್​ಲಾಕ್ ಪ್ರಕ್ರಿಯೆ ಹಂತಹಂತವಾಗಿ ಶುರುವಾದಾಗಿನಿಂದ ಕೆಲಸಕ್ಕಾಗಿ ನಿರ್ಮಾಪಕರ ಮನೆಗಳಿಗೆ ಎಡತಾಕುತ್ತಿದ್ದರೆ ಬಚ್ಚನ್ ಅವರು 2021 ರಲ್ಲೂ ಪುರುಸೊತ್ತಿಲ್ಲದೆ ದುಡಿಯುವಷ್ಟು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿದ್ದಾರೆ ಅವುಗಳಲ್ಲಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೊತೆ ನಟಿಸುತ್ತಿರುವ ‘ಬ್ರಹ್ಮಾಸ್ತ್ರ’ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ತಾರಾಗಣದಲ್ಲಿರುವ ವೈಜ್ಞಾನಿಕ ಚಿತ್ರ ಸೈ – ಫಿ ), ‘ ಡೆಡ್ಲೀ’ ಹೆಸರಿನ ಕಾಮಿಡಿ ಫಿಲ್ಮ್ ಮೊದಲಾದವು ಸೇರಿವೆ ಹಾಗೆಯೇ ಶೂಟಿಂಗ್ ಸಂಫೂರ್ಣಗೊಂಡಿರುವ ‘ಝುಂಡ್’ ಮತ್ತು ರೂಮಿ ಜಾಫ್ರಿಯವರ ‘ಚೆಹೆರೆ’ ಸಿನಿಮಾಗಳ ಡಬ್ಬಿಂಗ್ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ .

40 ವರ್ಷಗಳ ಹಿಂದೆ ಮನ್​ಮೋಹನ್ ದೇಸಾಯಿ ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯಾ ?


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ