Breaking News

ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಮುಹೂರ್ತ ಫಿಕ್ಸ್ : ಚುನಾವಣೆಗಾಗಿ ಬಿ ಜೆ ಪಿ 2 ಗುಂಪು

ಬೆಳಗಾವಿ: ರಾಜ್ಯ ರಾಜಕಾರಣವನ್ನೇ ಅಲುಗಾಡಿಸಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ನೆನಪು ಮಾಸುವ ಮುನ್ನವೇ ಮತ್ತೆ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ರಮೇಶ ಕತ್ತಿ ಮತ್ತೊಮ್ಮೆ ಬ್ಯಾಂಕ್ ಮೇಲೆ ಹಿಡಿತ ಸಾಧಿಸಿ ಅಧ್ಯಕ್ಷರಾಗಲು ಪ್ರಯತ್ನ ನಡೆಸಿದ್ದಾರೆ. ಅವರಿಗೆ ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲವಾಗಿ …

Read More »

ಲಾಕ್‌ಡೌನ್ ಎಫೆಕ್ಟ್: ಪೊಲೀಸ್ ಠಾಣೆಯಲ್ಲಿ ಕೇಳೋರೇ ಇಲ್ಲ ಮಾಲೀಕರಿಲ್ಲದ ವಾಹನಗಳನ್ನು!

ಕೊರೋನಾ ವೈರಸ್ ಇನ್ನೂ ತನ್ನ ಕಬಂದಬಾಹುವನ್ನ ಚಾಚುತ್ತಲೇ ಇದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ವೈರಸ್ ಅಕ್ಟೋಬರ್ ಬಂದರೂ ಕಡಿಮೆಯಾಗದೆ, ಇನ್ನೂ ಹೆಚ್ಚುತ್ತಲೆ ಇದೆ. ಮಾರ್ಚ್ ತಿಂಗಳಲ್ಲಿ ಕೊರೋನಾ ಹರಡುವಿಕೆಯ ಸರಪಳಿ ತುಂಡರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್ ನಿಯಮಾವಳಿಯನ್ನ ಜಾರಿಗೆ ತಂದಿತ್ತು. ಜನರು ಯಾರೂ ಅನಗತ್ಯವಾಗಿ ಓಡಾಡಬಾರದು, ಊರಿನಿಂದ ಊರಿಗೆ ಅಷ್ಟೆ ಅಲ್ಲ ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಹೋಗುವುದನ್ನು ಸಹ ನಿಷೇಧಿಸಿತ್ತು. ಅನಗತ್ಯ ಓಡಾಡಿದವರ ವಾಹನಗಳನ್ನ ಸಹ ಪೊಲೀಸ್ …

Read More »

ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,‌ ಲಂಚ ಪಡೆಯುತ್ತಿದ್ದ ಇಬ್ಬರನ್ನು‌ ವಶ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,‌ ಲಂಚ ಪಡೆಯುತ್ತಿದ್ದ ಇಬ್ಬರನ್ನು‌ ವಶಕ್ಕೆ ಪಡೆದಿದ್ದಾರೆ ಪಾಲಿಕೆ ಆಯುಕ್ತೆ ಸಹಾಯಕ ಮಲ್ಲಿಕಾರ್ಜುನ ಮತ್ತು ಡಿ.ದರ್ಜೆ ನೌಕರ ಭಾಷ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಫಾರಂ 2. ನೀಡಲು ಐವತ್ತು ಸಾವಿರ ರುಪಾಯಿ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಕಾರ್ಯಾಚರಣೆ ನಡೆದಿದೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದವರ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.

Read More »

ಶಾರ್ಜಾಗೆ ವಾಪಸ್ಸಾಗಿರುವುದು ರಾಜಸ್ತಾನ ರಾಯಲ್ಸ್​ಗೆ ನೆರವಾಗಲಿದೆಯೇ?

ಗೆಲ್ಲುವುದನ್ನು ಮರೆತಂತಿರುವ ರಾಜಸ್ತಾನ ರಾಯಲ್ಸ್ ಮತ್ತು ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂಡಿಯನ್ ಪ್ರಿ ಮೀಯರ್ ಲೀಗ್ 13 ನೇ ಅವೃತಿಯ 23 ನೇ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿಂ ದು ನಡೆಯಲಿದೆ . ರಾಯಲ್ಸ್​ಗೆ ಇವತ್ತು ಅನುಕೂಲವಾಗಬಹುದಾದಸಂಗತಿಯೆಂದರೆ ಅದು ಶಾರ್ಜಾಗೆ ವಾಪಸ್ಸಾಗಿರುವುದು. ನಿಮಗೆ ಗೊತ್ತಿರುವ ಹಾಗೆ, ಈ ಮೈದಾನದಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳನ್ನು ಸ್ಟಿವೆನ್ ಸ್ಮಿತ್​ನ ಅವರ ತಂಡ ಸುಲಭವಾಗಿ ಗೆದ್ದಿತ್ತು. ಆದರೆ. ನಂತರ, ದುಬೈ …

Read More »

22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಕೊರೊನಾದಿಂದ ಮತ್ತೆ ತಾಯಿ ಮಡಲಿಗೆ ಸೇರಿರುವ ಘಟನೆ

ಗದಗ: ಸುಮಾರು 22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಕೊರೊನಾದಿಂದ ಮತ್ತೆ ತಾಯಿ ಮಡಲಿಗೆ ಸೇರಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ನಡೆದಿದೆ. ಗೋಗೇರಿ ಗ್ರಾಮದ ಮಲಿಕ್‌ಸಾಬ ಬಾಗವಾನ ಎಂಬುವವರ ಮೂರನೇ ಮಗ ಆದಂ ಮಲಿಕ್‌ಸಾಬ ಬಾಗವಾನ ಮರಳಿ ಮನೆಗೆ ಬಂದಿದ್ದಾರೆ. ಮಲಿಕ್‌ಸಾಬ ಹಾಗೂ ಬಡಿಮಾ ದಂಪತಿಗೆ ಒಟ್ಟು ನಾಲ್ವರು ಪುತ್ರರು, ಆರು ಜನ ಪುತ್ರಿಯರಿದ್ದಾರೆ. ಮನೆಯಲ್ಲಿನ ಆರ್ಥಿಕ ಸಮಸ್ಯೆ ಹಿನ್ನೆಲೆ ಆದಂ ಹೈಸ್ಕೂಲ್ ಮುಗಿಸಿದ ನಂತರ …

Read More »

ವಿದ್ಯಾಗಮ ಯೋಜನೆಯಿಂದ ಸೋಂಕು ಬಂದಿದ್ದರೆ ಅದನ್ನು ನಿಲ್ಲಿಸೋಣ

ಬೆಂಗಳೂರು: ವಿದ್ಯಾಗಮ ಯೋಜನೆಯಿಂದ ಸೋಂಕು ಬಂದಿದ್ದರೆ ಅದನ್ನು ನಿಲ್ಲಿಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ಮಕ್ಕಳು, ಶಿಕ್ಷಕರ ಆರೋಗ್ಯ ಮುಖ್ಯವಾಗಿದೆ ಎಂದು ಆತಂಕದಲ್ಲಿದ್ದ ಶಿಕ್ಷಕರು, ಪೋಷಕರಿಗೆ ಸಮಾಧಾನದ ಸುದ್ದಿ ನೀಡಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿದ್ಯಾಗಮ ಯೋಜನೆ ಕುರಿತಾಗಿ ಸರ್ಕಾರ ಚಿಂತನೆ ನಡೆಸಲಿದೆ. ತಜ್ಞರ ಸಮಿತಿ ವರದಿ …

Read More »

ರಾಗಿಣಿ ಬೇಲ್​ಗಾಗಿ ಹೈಕೋರ್ಟ್ ಮೊರೆ ಹೋಗಲು ಹಣವಿಲ್ಲದೇ, ಪೋಷಕರು ಪರದಾಟ

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್​ ಲಿಂಕ್​ ಆರೋಪದಲ್ಲಿ ಜೈಲು ಸೇರಿರುವ ರಾಗಿಣಿ ದ್ವಿವೇದಿ ಬೇಲ್​ಗಾಗಿ ಹಣವಿಲ್ಲದೇ ರಾಗಿಣಿ ಪೋಷಕರು ಪರದಾಡುತ್ತಿದ್ದಾರೆ ಅನ್ನೋ ಮಾಹಿತಿ ಅವರ ಆಪ್ತವಲಯದಿಂದ ಲಭ್ಯವಾಗಿದೆ. ಈ ಹಿಂದೆಯೇ ರಾಗಿಣಿ ಪೋಷಕರು, ವಕೀಲರಿಗೆ ಫೀಸ್​ ಕೊಡುವ ಸಲುವಾಗಿ, ಹಣವಿಲ್ಲದೇ ತಾವು ವಾಸವಿದ್ದ ಫ್ಲಾಟ್​ ಮಾರಲು ಮುಂದಾಗಿದ್ದರು. ಆದ್ರೆ, ಫ್ಲಾಟ್​ ಮಾರಟಕ್ಕಿಟ್ಟು ಒಂದು ತಿಂಗಳಾದ್ರು, ಇನ್ನೂ ಸೇಲ್​ ಆಗಿಲ್ಲ ಎನ್ನಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಸೇರಿರೋ ರಾಗಿಣಿ ಬೇಲ್​ಗಾಗಿ ಹೈಕೋರ್ಟ್ …

Read More »

9ನೇ ತರಗತಿಯ ಬಾಲಕನೊಬ್ಬನ ಅಪಹರಣ ಪ್ರಕರಣ ಪೊಲೀಸರು ಹಾಗೂ ಆ ಬಾಲಕನ ಪಾಲಕರನ್ನೇ ದಂಗಾಗಿಸಿರುವ ಘಟನೆ

ಚೆನ್ನೈ: 9ನೇ ತರಗತಿಯ ಬಾಲಕನೊಬ್ಬನ ಅಪಹರಣ ಪ್ರಕರಣ ಪೊಲೀಸರು ಹಾಗೂ ಆ ಬಾಲಕನ ಪಾಲಕರನ್ನೇ ದಂಗಾಗಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಬಾಲಕನನ್ನು ಅಪಹರಣ ಮಾಡಿ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವ ಫೋನ್‌ಕರೆ ಆಧಾರದ ಮೇಲೆ ಬೆನ್ನಟ್ಟಿಹೋದ ಪೊಲೀಸರಿಗೆ ಅಪಹರಣಕಾರರನ್ನು ನೋಡಿ ದಂಗಾಗಿರುವ ಘಟನೆ ಇದಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಈ ಬಾಲಕನ ತಂದೆ ದ್ವಿಚಕ್ರ ವಾಹನ ಪರಿಕರಗಳ ಅಂಗಡಿಯನ್ನು ನಡೆಸುತ್ತಿದ್ದಾರೆ. ಅವರ ಮಗ ಟ್ಯೂಷನ್‌ಗೆ ಹೋಗಿದ್ದ. ಅಲ್ಲಿಂದಲೇ ಆತ ನಾಪತ್ತೆಯಾಗಿದ್ದ. ನಂತರ …

Read More »

ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಪಾತ್ರ ಬಹಳ ಮುಖ್ಯ: ಡಿ.ಕೆ ಶಿವಕುಮಾರ್

ಬೆಂಗಳೂರು: ಆರ್.ಆರ್.ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಸೋಶಿಯಲ್ ಮೀಡಿಯಾ ಘಟಕದ ಜತೆ ಸಭೆ ನಡೆಸಿದರು. ‘ಬೈಎಲೆಕ್ಷನ್‌ನಲ್ಲಿ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಮಾಡಿ’ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾದ ಪಾತ್ರ ಮುಖ್ಯ. ಸೋಶಿಯಲ್ ಮೀಡಿಯಾ ಇನ್ನಷ್ಟು ಌಕ್ಟಿವ್ ಆಗಬೇಕು. ಸೋಶಿಯಲ್ ಮೀಡಿಯಾದಲ್ಲಿ ಮಾರ್ಕೆಟಿಂಗ್ ಮಾಡ್ತಾರೆ. ಏನೂ ಮಾಡದಿದ್ರೂ ಬಿಜೆಪಿಯವ್ರು ಮಾರ್ಕೆಟಿಂಗ್ ಮಾಡ್ತಾರೆ. ನಾವು ಹಲವು ಬಾರಿ ಈ ವಿಚಾರದಲ್ಲಿ ಎಡವಿದ್ದೇವೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಾಗುತ್ತದೆ …

Read More »

ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ವಿಸ್ತರಣೆ, ಇನ್ನೂ ಪರಪ್ಪನ ಜೈಲಿನಲ್ಲೇ ಇರಬೇಕು..

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. NDPS ವಿಶೇಷ ಕೋರ್ಟ್‌ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿದೆ. ಕೋರ್ಟ್ ನಟಿಮಣಿಯರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್​ 23ರವರೆಗೆ ವಿಸ್ತರಿಸಿದೆ. ಸಂಜನಾ ಗಲ್ರಾನಿಯ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ನಟಿ ಪರ ವಕೀಲ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ …

Read More »