Breaking News

ಇವಿಎಂ ಅಂದ್ರೆ ಮೋದಿ ವೋಟಿಂಗ್‌ ಮಷೀನ್‌, :

ಪಾಟ್ನಾ: ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ ಅನ್ನು ಕಾಂಗ್ರೆಸ್‌ ಅಧ್ಯಕ್ಷ ಮೋದಿ ವೋಟಿಂಗ್‌ ಮಷೀನ್‌ ಎಂದು ಹೇಳಿ ವ್ಯಂಗ್ಯವಾಡಿದ್ದಾರೆ. ಬಿಹಾರದ ಅರಾರಿಯಾದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ನಾವು ಮೋದಿ ವೋಟಿಂಗ್‌ ಮಷೀನ್‌ ಅಥವಾ ಮೋದಿಯವರ ಮಾಧ್ಯಮಕ್ಕೆ ನಾನು ಭಯಪಡುವುದಿಲ್ಲ. ಈ ಬಾರಿ ಬಿಹಾರದ ಯುವಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ನಮಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸತ್ಯ ಯಾವಾಗಲೂ ಸತ್ಯವೇ. ನ್ಯಾಯ ಯಾವಾಗಲೂ ನ್ಯಾಯವೇ. …

Read More »

ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಮೂವರು ಕಾಮುಕರು 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.

ನವದೆಹಲಿ: ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಮೂವರು ಕಾಮುಕರು 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ. ವಾಯವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಸಹ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಜಿ ಬೌನ್ಸರ್‍ಗಳು ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಕನ್ವರ್ ಪಾಲ್(32), ಬೌನ್ಸರ್‍ಗಳಾದ ಮನೀಶ್(22) ಹಾಗೂ ಪ್ರವೀಣ್ ತಿವಾರಿ(24) ಎಂದು …

Read More »

ಆಂಜನೇಯನ ಗುಡಿ ಮುಂದೆ ಕುದುರೆ ಪ್ರಾರ್ಥನೆ

ಬಾಗಲಕೋಟೆ: ಆಂಜನೇಯನ ಗುಡಿ ಮುಂದೆ ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ನಿಂತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ಪುನರ್ ವಸತಿ ಕೇಂದ್ರದ ಸಮೀಪವಿರುವ ದೇವಸ್ಥಾನದ ಬಳಿ ನಡೆದಿದೆ, ಇಲ್ಲಿರುವ ಪುಟ್ಟ ಆಂಜನೇಯ ಸ್ವಾಮಿ ಗುಡಿಗೆ ತಲೆ ಕೊಟ್ಟು ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿಂತು ಕೊಂಡಿದೆ. ಕುದುರೆ ದೇವರ ಗುಡಿಯ ಕಟ್ಟಡಕ್ಕೆ ಹಣೆ …

Read More »

ಬಿಜೆಪಿಯ ಶಕ್ತಿ ಕೇಂದ್ರ ಕಡಲನಗರಿ ಮಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಾಳೆ ನಡೆಯಲಿದೆ.

ಮಂಗಳೂರು: ಬಿಜೆಪಿಯ ಶಕ್ತಿ ಕೇಂದ್ರ ಕಡಲನಗರಿ ಮಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಾಳೆ ನಡೆಯಲಿದೆ. ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಹಲವಾರು ಮಹತ್ವದ ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಿಎಂ ಯಡಿಯೂರಪ್ಪ ಆದಿಯಾಗಿ ಸಚಿವರು, ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕಾರಣಿಗೆ ಮಂಗಳೂರು ಅದ್ಧೂರಿಯಾಗಿ ಶೃಂಗಾರಗೊಂಡಿದೆ. ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಮೊದಲ ಬಾರಿಗೆ 20 ವರ್ಷಗಳ ಬಳಿಕ …

Read More »

ನಗರಕ್ಕೆ ಆಗಮಿಸಿದ ತಕ್ಷಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕೊರೊನಾ ಪಾಠ

ಮೈಸೂರು: ನಗರಕ್ಕೆ ಆಗಮಿಸಿದ ತಕ್ಷಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕೊರೊನಾ ಪಾಠ ಮಾಡಿದ್ದಾರೆ. ಇಂದು ಮೈಸೂರು ಪ್ರವಾಸಕ್ಕೆ ಆಗಮಿಸಿರುವ ಅವರು, ಎಲ್ಲರೂ ನನ್ನಿಂದ ದೂರ ಇರಿ, 6 ಅಡಿ ದೂರ ನಿಂತುಕೊಳ್ಳಿ. ನನ್ನ ಅಕ್ಕ ಪಕ್ಕ ನಿಂತುಕೊಂಡರೂ ನಾನು ಬರುವುದಿಲ್ಲ ಎಂದು ತಮ್ಮ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತರನ್ನು ದೂರ ಸರಿಸಿದ್ದಾರೆ. ಯಾರೂ ಹತ್ತಿರ ಬಾರದಂತೆ ತಡೆದಿದ್ದಾರೆ. ಈ ಮೂಲಕ ತಮ್ಮ ಕಾರ್ಯಕರ್ತರಿಗೆ ಕೊರೊನಾ ಪಾಠ ಮಾಡಿದ್ದಾರೆ. ರಾಜಕಾರಣಿಗಳ …

Read More »

ಡಿಸಿಸಿ ಬ್ಯಾಂಕ್ ಚುನಾವಣೆ  ಎಂಇಎಸ್ ಮುಖಂಡರಿಗೆ ಬಿಜೆಪಿ  ಬೆಂಬಲ  10 ಬಾರಿ ಯೋಚನೆ ಮಾಡಲಿ: ಸತೀಶ ಜಾರಕಿಹೊಳಿ

ಗೋಕಾಕ: ಡಿಸಿಸಿ ಬ್ಯಾಂಕ್ ಚುನಾವಣೆ  ಎಂಇಎಸ್ ಮುಖಂಡರಿಗೆ ಬಿಜೆಪಿ  ಬೆಂಬಲ  ನೀಡುತ್ತಿರುವ ವಿಚಾರವಾಗಿ  ಕೆಪಿಸಿಸಿ  ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಪ್ರತಿಕ್ರಿಯಿಸಿದ್ದು, ಸತತವಾಗಿ ಕರ್ನಾಟಕದ ವಿರುದ್ದ ಹೋರಾಟ ಮಾಡುವವರಿಗೆ ಬೆಂಬಲ ನೀಡುವ ಮುನ್ನ 10 ಬಾರಿ ಯೋಚನೆ ಮಾಡಲಿ ಎಂದು  ಹೇಳಿದ್ದಾರೆ. ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾತನಾಡಿದ ಅವರು,  ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವ  ವಿರೋಧಿಗಳಿಗೆ   ಒಂದು ರಾಜಕೀಯ ಪಕ್ಷ ಆಹ್ವಾನ ನೀಡಲು …

Read More »

ಬಿಜೆಪಿ ನಾಯಕರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಶಾಕ್

ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠಿತ ಚುನಾವಣೆಯಾಗಿ ಮಾರ್ಪಟ್ಟಿದೆ. ಎಂಇಎಸ್ ನಾಯಕನಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದ ಬಿಜೆಪಿ ನಾಯಕರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಶಾಕ್ ನೀಡಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರತಿಸ್ಪರ್ಧಿ ಎಂಇಎಸ್ ನಾಯಕ ಅರವಿಂದ ಪಾಟೀಲ ಅವರಿಗೆ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದರು. ಬಹಿರಂಗವಾಗಿಯೇ ಹೇಳಿಕೆ ನೀಡಿದ ನಾಯಕರು ಅರವಿಂಧ ಗೆಲ್ಲಿಸುವ ಪ್ರಯತ್ನ ನಡೆಸಿದ್ದರು. ಡಿಸಿಎಂ ಲಕ್ಷ್ಮಣ ಸವದಿ, ಸಂಸದ …

Read More »

ಮುಖ್ಯಮಂತ್ರಿಗಳ ಮಗನ ಭ್ರಷ್ಟಾಚಾರ ಬಿಚ್ಚಿಟ್ಟ ಪವರ್ ಟಿವಿಯನ್ನು ಪೊಲೀಸ್ ಬಲ ಪ್ರಯೋಗಿಸಿ ಎರಡು ವಾರ ಮುಚ್ಚಿಸಿದ್ದು,  ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕೆಲಸವೆ?: ದಿನೇಶ್ ಗುಂಡೂರಾವ್

ಬೆಂಗಳೂರು:  ರಾಜ್ಯದ   ಮುಖ್ಯಮಂತ್ರಿಗಳ ಮಗನ ಭ್ರಷ್ಟಾಚಾರ ಬಿಚ್ಚಿಟ್ಟ ಪವರ್ ಟಿವಿಯನ್ನು ಪೊಲೀಸ್ ಬಲ ಪ್ರಯೋಗಿಸಿ ಎರಡು ವಾರ ಮುಚ್ಚಿಸಿದ್ದು,  ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕೆಲಸವೆ? ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ. ಮುಂಬೈ ಪೊಲೀಸರು ಬುಧವಾರ ಬೆಳಗ್ಗೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಇದಕ್ಕೆ ದಿನೇಶ್ ಗುಂಡೂರಾವ್ ಟ್ವಿಟ್ ಮೂಲಕ ತಿರುಗೇಟು ನೀಡಿದ್ದಾರೆ. ಅರ್ನಬ್ ಗೋಸ್ವಾಮಿ …

Read More »

ಹಾಸನದಲ್ಲಿ ಮತ್ತೆ ಗುಂಡಿನ ಸದ್ದು- ರೌಡಿ ಶೀಟರ್ ಸುನೀಲ್ ಮೇಲೆ ಫೈರಿಂಗ್

ಹಾಸನ: ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೂವರು ಯುವಕರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಸುನೀಲ್ ಹಾಸನ ಗ್ರಾಮಾಂತರ ಪಿಎಸ್‍ಐ ಸುರೇಶ್‍ಗೆ ಚೂರಿ ಇರಿದಿದ್ದಾನೆ. ನಂತರ ಹೆದರಿಸಿ, ಪರಿಸ್ಥಿತಿ ನಿಯಂತ್ರಿಸಲು ಸಿಪಿಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಏರ್ ಫೈರ್ …

Read More »

ಬೆಂಗಳೂರಿನ ಬಹುತೇಕ ಕಾಲೇಜುಗಳು, ಗೂಡಂಗಡಿ ಸೇರಿದಂತೆ ಎಲ್ಲೆಡೆ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಪೊಲೀಸರು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ : ಜೈ ಜಗದೀಶ್

ಮಡಿಕೇರಿ: ಬೆಂಗಳೂರಿನ ಬಹುತೇಕ ಕಾಲೇಜುಗಳು, ಗೂಡಂಗಡಿ ಸೇರಿದಂತೆ ಎಲ್ಲೆಡೆ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಪೊಲೀಸರು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹಿರಿಯ ಚಿತ್ರನಟ ಜೈ ಜಗದೀಶ್ ಪ್ರಶ್ನಿಸಿದ್ದಾರೆ. ಸ್ಯಾಂಡಲ್‍ವುಡ್‍ಗೆ ಡ್ರಗ್ ನಂಟಿನ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಎನ್ನುವುದು ಎಲ್ಲೆಡೆ ಇದ್ದರೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರ ದೊಡ್ಡ ಸುದ್ದಿಯಾಗಿದೆ. ಮಾಧ್ಯಮಗಳು ಕೊರೊನಾ ಹಾಗೂ ಡ್ರಗ್ಸ್ ವಿಚಾರಗಳಿಗಷ್ಟೇ ಏಕೆ ಪ್ರಾಮುಖ್ಯತೆ ನೀಡುತ್ತಿವೆ ತಿಳಿಯುತ್ತಿಲ್ಲ. ಇದುವರೆಗೆ ಕನ್ನಡ ಚಿತ್ರರಂಗದಲ್ಲೇ …

Read More »