ಗೋಕಾಕ: ತಮ್ಮ ಸ್ವಂತ ಹೊಲದಲ್ಲಿ ಬೆಳೆದ ತರಕಾರಿಗಳನ್ನು ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕುಕೊಂಡಿರುವ ಗೋಕಾಕ ಸುತ್ತಮುತ್ತಲಿನ ಪ್ರದೇಶದ ಕಡುಬಡವರಿಗೆ ವಿತರಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮುಂದಾಗಿದ್ದಾರೆ.
ಇಲ್ಲಿನ ಬ್ಯಾಳಿ ಬಸ್ಸಾಪುರದಲ್ಲಿ 3 ಎಕರೆ ಜಮೀನಿನಲ್ಲಿ ಬೆಳೆದುನಿಂತ ಟೊಮೆಟೊ, ಮೆಣಸಿನಕಾಯಿ ಮತ್ತು ಇತರೆ ತರಕಾರಿಗಳನ್ನು ಪರಿಶೀಲಿಸಿದ ಬಳಿಕ ಗೋಕಾಕ ತಾಲೂಕಿನ ಕಡುಬಡವರಿಗೆ ಮತ್ತು ನಿರ್ಗತಿಕರಿಗೆ ವಿತರಿಸಲು ಅವರು ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.

ಈಗಾಗಲೇ ರೈತರ ಬೆನ್ನೆಲುಬಾಗಿ ನಿಂತಿರುವ ಶಾಸಕರು ರೈತರು ಬೆಳೆದ ತರಕಾರಿ ಹಣ್ಣು ಹಂಪಲುಗಳನ್ನು ಖರೀದಿಸಿ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಈಗ ತಮ್ಮ ಸ್ವಂತ ಜಮೀನಿನಲ್ಲಿ ಬೆಳೆದ ತರಕಾರಿಗಳನ್ನು ಕೂಡ ವಿತರಿಸಲು ಮುಂದಾಗಿದ್ದು ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಶಾಸಕರ ಈ ಕಾರ್ಯಕ್ಕೆ ರೈತರು ಕೂಡ ಸಾಥ್ ನೀಡಿದ್ದು ತಾವು ತರಕಾರಿಗಳನ್ನು ನೀಡಲು ಮುಂದಾಗಿದ್ದಾರೆ.
https://youtu.be/-2anOtHqGWA
ಶಾಸಕರ ಕಾರ್ಯಕ್ಕೆ ಅವರ ಪುತ್ರ ರಾಹುಲ್ ಕೂಡ ಸಾಥ್ ನೀಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಪ್ರಕಾಶ ಬಾಗೇವಾಡಿ, ಶಿವು ಪಾಟೀಲ, ಯಮನಪ್ಪಾ ಬಾಗಾಯಿ, ರೀಯಾಜ್ ಚೌಗಲಾ, ಆರೀಪ ಪೀರಜಾದೆ, ಮಹೇಶ ಚಿಕ್ಕೋಡಿ ಇದ್ದರು.