Breaking News
Home / new delhi / ಕರೋನಾ ರುದ್ರನರ್ತನ : ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ, ಮೋದಿ ಮಹತ್ವದ ಸಲಹೆ.!

ಕರೋನಾ ರುದ್ರನರ್ತನ : ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ, ಮೋದಿ ಮಹತ್ವದ ಸಲಹೆ.!

Spread the love

ನವದೆಹಲಿ, ಮಾ.27-ಕಿಲ್ಲರ್ ಕೊರೊನಾ (ಕೋವಿಡ್-19) ವಿರುದ್ಧ ಹೋರಾಟದಲ್ಲಿ ಸಂಯುಕ್ತ ರಂಗವಾಗಿ ಮುಂಚೂಣಿಯಲ್ಲಿರಲು ಪಣ ತೊಟ್ಟಿರುವ ಜಿ-20 ರಾಷ್ಟ್ರಗಳು, ಈ ಪಿಡುಗಿನಿಂದಾಗಿ ತೀವ್ರವಾಗಿ ಕುಸಿದಿರುವ ಜಾಗತಿಕ ಪುನ:ಶ್ಚೇತನಕ್ಕೆ 5 ಲಕ್ಷ ಕೋಟಿ ಡಾಲರ್ ನೆರವಿಗೆ ಮನವಿ ಮಾಡಿದೆ.

ಮಾರಕ ಕೊರೊನಾ ವೈರಸ್ ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಈ ಪಿಡುಗಿನ ವಿರುದ್ಧ ಪರಸ್ಪರ ಸಹಕಾರದೊಂದಿಗೆ ಸಂಘಟಿತ ಹೋರಾಟ ನಡೆಸಲು ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ ನಡೆಯಿತು. ಈ ತುರ್ತು ಸಭೆಯಲ್ಲಿ 20 ದೇಶಗಳ ಅಗ್ರ ನಾಯಕರು ಕೋವಿಡ್-19 ವಿಷಯವಾಗಿ ಸಮಾಲೋಚಿಸಿದರು.

ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಜಿ-20 ರಾಷ್ಟ್ರಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಪಿಡುಗಿನಿಂದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ ಎಂದು ಕಳವಳ ವ್ಯಕ್ತಪಡಿಸಿದರು.ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಓ) ಸುಧಾರಣೆ ಸೇರಿದಂತೆ ಸದೃಢ ಕ್ರಿಯಾ ಯೋಜನೆ ರೂಪಿಸುವಂತೆಯೂ ಮೋದಿ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಇಡೀ ವಿಶ್ವವೇ ಮಾರಕ ವೈರಸ್‍ನಿಂದ ತತ್ತರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಮೊದಲು ಮಾನವೀಯತೆ ಕುರಿತು ನಾವೆಲ್ಲರೂ ಚರ್ಚಿಸೋಣ.ಆ ನಂತರ ಆರ್ಥಿಕತೆ ಬಗ್ಗೆ ಸಮಾಲೋಚಿಸೋಣ ಎಂದು ಮೋದಿ ಜಿ-20 ರಾಷ್ಟ್ರಗಳ ಅಗ್ರನಾಯಕರಲ್ಲಿ ಮನವಿ ಮಾಡಿದರು. ಪ್ರಧಾನಿ ಅವರ ಈ ಸಲಹೆಗೆ ಜಿ-20 ದೇಶಗಳ ಎಲ್ಲ ಧುರೀಣರು ಮೆಚ್ಚುಗೆ ಸೂಚಿಸಿದರು.

ಈ ಪಿಡುಗು ಈಗಾಗಲೇ ಸಹಸ್ರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದರಿಂದ ತಲೆದೋರಿರುವ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳು ಕೂಡ ಆಘಾತಕಾರಿಯಾಗಿದೆ. ನಾವು ನಮ್ಮ ತಕ್ಷಣದ ಅಗತ್ಯವನ್ನು ಮೀಗಿ ಈ ಸೋಂಕು ವ್ಯಾಪಿಸದಂತೆ ತಡೆಗಟ್ಟಬೇಕಿದೆ ಎಂದು ಮೋದಿ ಸಲಹೆ ಮಾಡಿದರು.


Spread the love

About Laxminews 24x7

Check Also

ಸುವರ್ಣಸೌಧದ ಹಾಲ್‌ನಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಮನವಿ

Spread the loveಬೆಳಗಾವಿ: ಸಾವರ್ಕರ್ ಫೋಟೋ ತೆರವಿನ ಕೂಗಿನ‌ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ