Home / ಜಿಲ್ಲೆ / ಭಾರತ ಪೌರತ್ವದ ಕ್ರಾಂತಿ” ಮೇದಾರ ಸಮಾಜದವರಾದ ಪ್ರಿನ್ಸಿಪಲ್ ಶ್ರೀನಿವಾಸ ಮಡ್ಡಿ ಅವರು ಬರೆದ ಲೇಖನ.!

ಭಾರತ ಪೌರತ್ವದ ಕ್ರಾಂತಿ” ಮೇದಾರ ಸಮಾಜದವರಾದ ಪ್ರಿನ್ಸಿಪಲ್ ಶ್ರೀನಿವಾಸ ಮಡ್ಡಿ ಅವರು ಬರೆದ ಲೇಖನ.!

Spread the love

“ಭಾರತ ಪೌರತ್ವದ ಕ್ರಾಂತಿ” ಮೇದಾರ ಸಮಾಜದವರಾದ ಪ್ರಿನ್ಸಿಪಲ್ ಶ್ರೀನಿವಾಸ ಮಡ್ಡಿ ಅವರು ಬರೆದ ಲೇಖನ.!

ಈ ಪ್ರಪಂಚದಲ್ಲಿ ಅತಿ ದೊಡ್ಡ ರಾಜಕೀಯ ತಪ್ಪು ಆಗಿದ್ದು ಕಾಂಗ್ರೆಸ್ ನ ನೆಹರು ಮತ್ತು ಮೊಹಮ್ಮದ್ ಅಲೀ ಜಿನ್ನಾ ಅವರು ಮಾಡಿದ ಧರ್ಮದ ಆಧಾರದ ಮೇಲೆ ಎರಡು ರಾಷ್ಟ್ರವನ್ನು ವಿಭಾಗ ಮಾಡಿದ್ದು,ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರ ಹಿಂದು,ಜೈನ್,ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಮತ್ತು ಸಿಂಗ್ ಹಾಗೂ ಭಾರತದಲ್ಲಿ ಅಲ್ಪ ಸಂಖ್ಯಾತರು ಮುಸಲ್ಮಾನ, ಜೈನ್,ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಮತ್ತು ಸಿಂಗ್.ಈ ವಿಷಯವೇ “ಭಾರತ ಪೌರತ್ವದ ಬುನಾದಿಗೆ ಕಾರಣವಾಯಿತು.ಇದೇ ಈ ದಿನದ ವಿಷಯವಸ್ತು.ಭಾರತದ ಕೇಲವೊಂದು ಭಾಗದಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿರುವುದು ಖಂಡನಿಯ ಮತ್ತು ಆಶ್ಚರ್ಯಕರವಾದ ಸಂಗತಿ.

ಭಾರತ ಪೌರತ್ವದ ಇತಿಹಾಸ-

ನೆಹರು-ಲಿಹಾಖತ (ದಿಲ್ಲಿ ಒಪ್ಪಂದ) 1950 ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಒಪ್ಪಂದವಾಯಿತು.ಏನೆಂದರೆ ಭಾರತದ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್,ಬೌದ್ಧ, ಪಾರ್ಸಿ,ಕ್ರಿಶ್ಚಿಯನ್, ಮತ್ತು ಸಿಂಗ್.ಅದೇ ರೀತಿ ಪಾಕಿಸ್ತಾನದ ಅಲ್ಪಸಂಖ್ಯಾತರಾದ ಹಿಂದು,ಜೈನ್,ಬೌದ್ಧ, ಪಾರ್ಸಿ,ಕ್ರಿಶ್ಚಿಯನ್ ಮತ್ತು ಸಿಂಗ್ ಇವರ ರಾಜಕೀಯ ಹಕ್ಕು,ಶಿಕ್ಷಣ ಹಕ್ಕು,ಆಸ್ತಿ ಹಕ್ಕು,ಪ್ರಾಣ ಮಾನ ಮತ್ತು ಗೌರವವನ್ನು ಕಾಪಾಡಬೇಕು.ಆದರೆ ಲಿಹಾಖತ ಜೀವಂತ ಇರುವರೆಗೂ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗಲಿಲ್ಲ.ಬದಲಾಗಿ ಲಿಹಾಖತರ ಕೊಲೆಯ ನಂತರ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ,ಕೊಲೆ,ಸುಲಿಗೆ, ಒತ್ತಾಯ ಪೂರ್ವಕವಾಗಿ ಧರ್ಮ ಪರಿವರ್ತನೆ,ಅಪಹರಣ,ಮತ್ತು ಅವರಿಗೆ ಎಲ್ಲಾ ಹಕ್ಕುಗಳಿಂದ ವಂಚನೆ ಮಾಡಲಾಯಿತು. ಇದರಿಂದ ಬೆಸತ್ತ ಪಾಕಿಸ್ತಾನದ ಅಲ್ಪಸಂಖ್ಯಾತರು ತಮ್ಮ ಹೆಣ್ಣು ಮಕ್ಕಳ ಮಾನ-ಪ್ರಾಣ ಹಾಗೂ ಧರ್ಮವನ್ನು ಕಾಪಾಡಲು ಭಾರತಕ್ಕೆ ಒಲಸೆ ಬಂದರು.ಯಾವುದೇ ಸಾಮಾನ್ಯ ವ್ಯಕ್ತಿ ತನ್ನ ಮನೆ,ಮತ್ತು ಹಳ್ಳಿಯನ್ನು ಬಿಡಬೇಕಾದರೆ ಎಷ್ಟೆಲ್ಲಾ ತೊಂದರೆಯಾಗುತ್ತದೆ.ಅದೇ ದೇಶವನ್ನು ಬಿಡುವಾಗ ಆ ವ್ಯಕ್ತಿಗೆ ಎಷ್ಟು ನೋವಾಗಿರಬೇಕು.ಇದನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ..?

ಭಾರತದ ನೆರೆಹೊರೆಯ ದೇಶಗಳ ಸಂವಿದಾನದ ಇತಿಹಾಸ-

ಅಫಫಾನಿಸ್ತಾನ,ಹಾಗೂ ಪಾಕಿಸ್ತಾನ ದೇಶಗಳು ಸ್ವತಂತ್ರವಾದ ನಂತರ ಅನುಛೇದ-2 ರ ಪ್ರಕಾರ ಇಸ್ಲಾಂ ಧರ್ಮವಾಗಿವೆ.ಅದೇ ರೀತಿ ಬಾಂಗ್ಲಾದೇಶ ಕೂಡ ಇಸ್ಲಾಂ ಧರ್ಮವಾಗಿ ಮಾರ್ಪಾಡಾಗಿದೆ.

ಅಫ್ಘಾನಿಸ್ತಾನ,ಪಾಕಿಸ್ತಾನ, ಮತ್ತು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡಲು ಒಲವು ತೊರಲು ಕಾರಣ-

ಪಾಕಿಸ್ತಾನದಲ್ಲಿ ಇರುವ ಹಿಂದು ಮತ್ತು ಸಿಖ್ ಧರ್ಮದವರಿಗೆ ಯಾವುದೇ ಹಾನಿಯಾಗುತ್ತಿದ್ದರೆ ಅವರು ಭಾರತಕ್ಕೆ ಬರತಕ್ಕದ್ದು ಹಾಗೂ ಅಲ್ಲಿರುವ ಅಲ್ಪಸಂಖ್ಯಾತರಿಗೆ ಅನುಕಂಪದ ಆಧಾರದ ಮೇಲೆ ಭಾರತದ ಪೌರತ್ವದ ಕೊಡಬಹುದು ಎಂದು ಮಹಾತ್ಮಾ ಗಾಂಧೀಜಿ, ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕೊಟ್ಟ ಹೇಳಿಕೆ.

ಭಾರತ ಪೌರತ್ವವನ್ನು ಕೊಟ್ಟಿರುವ ಇತಿಹಾಸ-

ಶ್ರೀಲಂಕಾದಲ್ಲಿ ಕದನವಾದಾನ ತುರ್ತು ಪರಿಸ್ಥಿತಿಯಿಂದ ತಮಿಳು ಜನರ ಹಕ್ಕುಗಳಿಗೆ ದಕ್ಕೆ ಆದಾಗ ಅವರಿಗೆ ಭಾರತದ ಪೌರತ್ವ ಕೊಡಲಾಯಿತು.

ಪಿ.ಚಿದಂಬರಂ ಗೃಹ ಮಂತ್ರಿಯಾದಾಗ ರಾಜಸ್ಥಾನದ ಮುಖ್ಯಮಂತ್ರಿಯವರ ವಿನಂತಿ ಪತ್ರದ ಆಧಾರದ ಮೇಲೆ ಪಾಕಿಸ್ತಾನದಿಂದ ಬಂದ ಅಲ್ಪಸಂಖ್ಯಾತರಿಗೆ ಅನುಕಂಪದ ಆಧಾರದ ಮೇಲೆ ಅವರಿಗೆ ಭಾರತದ ಪೌರತ್ವ ಕೊಡಲಾಯಿತು.

ಯುಗಂಡಾ ದೇಶದಲ್ಲಿ ತುರ್ತು ಪರಿಸ್ಥಿತಿಯಿಂದ ಅಲ್ಲಿನ ಜನರ ಮಾನವ ಹಕ್ಕುಗಳಿಗೆ ದಕ್ಕೆ ಆದಾಗ ಅವರಿಗೆ ಭಾರತದ ಪೌರತ್ವವನ್ನು ನೀಡಲಾಯಿತು.

ಭಾರತದ ಪೌರತ್ವ ಮಸೂದೆ ಸಂವಿದಾನದ 14 ನೇ ವಿಧೇಯ-

ಅಫಫಾನಿಸ್ತಾನ,ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರಾದ ಹಿಂದು,ಜೈನ್,ಬೌದ್ಧ, ಪಾರ್ಸಿ,ಕ್ರಿಶ್ಚಿಯನ್ ಮತ್ತು ಸಿಂಗ್ ಇವರು ತುರ್ತು ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ ಒತ್ತಾಯವಾಗಿ ಧರ್ಮ ಪರಿವರ್ತನೆ ಮಾಡುವ ಮೂಲಕ ಮದುವೆ ಆಗುತ್ತಿದ್ದಾರೆ.ಅಲ್ಲದೆ ಅವರ ಆಸ್ತಿಯನ್ನು ಕಬಳಿಸಲಾಗುತ್ತಿದೆ.ಆದ್ದರಿಂದ ಅವರು ತಮ್ಮ ಆಸ್ತಿ ಪಾಸ್ತಿಯನ್ನು ಬಿಟ್ಟು ಭಾರತಕ್ಕೆ ವಲಸೆ ಬರುತ್ತಿದ್ದಾರೆ.ವಲಸೆ ಬಂದಂತವರಿಗೆ ಭಾರತ ಪೌರತ್ವ ಮಸೂದೆ ಪ್ರಕಾರ ಸಂವಿದಾನದ 14 ನೇ ವಿಧೇಯದ ಪ್ರಕಾರ ಭಾರತದ ಪೌರತ್ವ ನೀಡುವಲ್ಲಿ ಯಾವುದೇ ಆಕ್ಷೇಪವಿಲ್ಲ.

ಇನ್ನು ರೋಹಿಯಾ ಮುಸ್ಲಿಂರಿಗೆ ಭಾರತದ ಪೌರತ್ವ ನೀಡಿದರೆ ಅದು ಅನರ್ಹವಾಗುತ್ತದೆ ಯಾಕೆಂದರೆ ಅವರಿಗೆ ಅವರ ದೇಶದಲ್ಲಿ ಪ್ರಾಣ,ಮಾನ ಹಾಗೂ ಗೌರವಕ್ಕೆ ಯಾವುದೇ ದಕ್ಕೆ ಬರುವುದಿಲ್ಲ.ಅಲ್ಲದೆ ಅವರು ಭಾರತಕ್ಕೆ ಬರುವಾಗ ನೇರವಾಗಿ ಬರುವುದಿಲ್ಲ.ಬಾಂಗ್ಲಾದೇಶ ಮೂಲಕ ಭಾರತಕ್ಕೆ ಬರುತ್ತಾರೆ.ಆದ್ದರಿಂದ ಭಾರತ ದೇಶದಲ್ಲಿ ಅವರಿಗೆ ಆಶ್ರಮ ನೀಡಲು ಸಾಧ್ಯವಿಲ್ಲ.ಹಾಗೂ ಅನಧಿಕೃತವಾಗಿ ಭಾರತಕ್ಕೆ ಬರುವವರಿಗೆ ಭಾರತದ ಪೌರತ್ವ ನೀಡಲು ಅವಕಾಶ ಇರುವುದಿಲ್ಲ.ಆದರೆ ಈ ಕಾರಣಕ್ಕೆ ದೇಶದ ವಿವಿಧ ಭಾಗಗಳಲ್ಲಿ ಹಿಂಸೆ,ಪ್ರತಿಭಟನೆಗಳು ನಡೆಯುತ್ತಿವೆ.ಆದ್ದರಿಂದ ನಾನು 2019 ರ ಭಾರತದ ಪೌರತ್ವ ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತೆನೆ.

Shrinivas.h.maddi (B ed, MA )
Principal
Brilliant’s valley international residential school, Bangalore-mysore road,arya ediga samstana matt,near bharat gas plant,solur-562127 tq – magadi.dist-ramanagara.contact: 8088759814,9741049720


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ