Breaking News
Home / new delhi / ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

ಲಾಕ್‍ಡೌನ್ ಎಫೆಕ್ಟ್- ಎಲ್‍ಪಿಜಿ ಗ್ರಾಹಕರ ಹೊರೆ ಕಡಿಮೆಗೊಳಿಸಿದ ಸರ್ಕಾರ

Spread the love

ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯ ಲಾಭವನ್ನು ಸಾಮಾನ್ಯ ಜನರು ಈಗ ಪಡೆಯುತ್ತಿದ್ದಾರೆ. ನೈಸರ್ಗಿಕ ಅನಿಲದ ಬೆನ್ನಲ್ಲೇ ಅಡಿಗೆ (ಎಲ್‍ಪಿಜಿ) ಅನಿಲದ ಬೆಲೆಯನ್ನು ಕಡಿಮೆ ಮಾಡಲಾಗಿದೆ.

ದೇಶದ ಅತಿದೊಡ್ಡ ಸರ್ಕಾರಿ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ರಾಜಧಾನಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ 61 ರೂ. ಈ ಕಡಿತಗೊಳಿಸಿದೆ. ಮಾರ್ಚ್ ನಲ್ಲಿ ಒಂದು ಸಿಲೆಂಟರ್ ಬೆಲೆ 805.50 ರೂ. ಇತ್ತು. ಸದ್ಯ ಅದರ ಬೆಲೆ 744 ರೂ.ಗೆ ಇಳಿಕೆಯಾಗಿದೆ. ಹೊಸ ಬೆಲೆಯು ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.

ಹೋಳಿ ಹಬ್ಬಕ್ಕೂ ಮುನ್ನ ಅಂದ್ರೆ ಮಾರ್ಚ್ 1ರಿಂದ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 53 ರೂ. ಕಡಿಮೆ ಮಾಡಲಾಗಿತ್ತು. ಇದರಿಂದಾಗಿ ಬೆಲೆಯು 744 ರೂ.ಗೆ ಇಳಿಕೆ ಕಂಡಿತ್ತು. ಇಂದಿನಿಂದ ಮತ್ತೆ 61 ರೂ. ಕಡಿಮೆ ಮಾಡಿರುವುದು ಗ್ರಾಹಕರಿಗೆ ಖುಷಿ ತಂದಿದೆ.

ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 65 ರೂ. ಇಳಿಕೆಯಾಗಿದೆ. ಈ ಮೂಲಕ ಮಾರ್ಚ್ ನಲ್ಲಿ 839.50 ರೂ. ಪಾವತಿಸಬೇಕಿದ್ದ ಗ್ರಾಹಕರು ಇಂದಿನಿಂದ 774.50 ರೂ. ಪಾವತಿಸಬೇಕು. ಮುಂಬೈನಲ್ಲಿ 62 ರೂ. ಇಳಿಕೆಯಾಗಿದ್ದು, 714.50 ರೂ.ಗೆ ಸಬ್ಸಿಡಿ ರಹಿತ ಸಿಲಿಂಡರ್ ಲಭ್ಯವಾಗಲಿದೆ. ಚೆನ್ನೈನಲ್ಲಿ 64.50 ರೂ. ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ಒಂದು ಸಿಲಿಂಡರ್ ಗೆ 761.50 ರೂ. ಪಾವತಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಮಾರ್ಚ್ ವೇಳೆಗೆ ಸಬ್ಸಿಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯು 809 ರೂ. ಇತ್ತು. ಬೆಲೆ ಇಳಿಯಿಂದಾಗಿ 747 ರೂ.ಗೆ ಲಭ್ಯವಾಗಲಿದೆ.

ಫೆಬ್ರವರಿಯಲ್ಲಿ ಎಲ್‍ಪಿಜಿ ಬೆಲೆ ದಿಢೀರ್ ಹೆಚ್ಚಾದ ನಂತರ ಸರ್ಕಾರ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ದ್ವಿಗುಣಗೊಳಿಸಿತ್ತು. ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್‍ಗೆ 153.86 ರೂ.ಗಳ ಸಬ್ಸಿಡಿಯನ್ನು 291.48 ರೂ.ಗೆ ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿಕೆ ನೀಡಿತ್ತು. ಅಂತೆಯೇ ಪ್ರಧಾನಿ ಉಜ್ವಲ ಯೋಜನೆ ಅಡಿ ಪ್ರತಿ ಸಿಲಿಂಡರ್‍ಗೆ ಸಬ್ಸಿಡಿಯನ್ನು 174.86 ರೂ.ನಿಂದ 312.48 ರೂ.ಗೆ ಹೆಚ್ಚಿಸಲಾಗಿದೆ. ದೇಶೀಯ ಗ್ರಾಹಕರು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ಪಡೆಯುತ್ತಾರೆ. ಇದಕ್ಕಿಂತ ಹೆಚ್ಚಿನದನ್ನು ನೀವು ಖರೀದಿಸಿದರೆ, ಗ್ರಾಹಕರು ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ.


Spread the love

About Laxminews 24x7

Check Also

ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ

Spread the loveಧಾರವಾಡ: ನೇಹಾ ಹಿರೇಮಠ ಹತ್ಯೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನೇಹಾ ಕೊಲೆ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ