ಧಾರವಾಡ/ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಿಸುವ ಸದುದ್ದೇಶದಿಂದ ಹಾಗೂ ಜಿಲ್ಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್‍ನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದೆ.
ದೆಹಲಿಯ ನಿಜಾಮುದ್ದೀನ್ ತಬ್ಲಿಘ್ ಜಮಾತ್ ಪ್ರಾರ್ಥನಾ ಮಂದಿರದಲ್ಲಿ ಸಭೆ ನಡೆಸಿ ಮರಳಿ ಬಂದ 30 ಜನರು ಸೇರಿ ಒಟ್ಟು 50 ಜನರನ್ನು ಹೋಟೆಲ್ ಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಹೊಟೇಲ್ ವಶಕ್ಕೆ ತೆಗೆದುಕೊಂಡಿದೆ.
ಈಗಾಗಲೇ ಅಯೋಧ್ಯೆ ಹೋಟೆಲ್ ಗೆ ಆರೋಗ್ಯ ಇಲಾಖೆ ಸಿಬ್ಬಂದಿ, ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಮ್ ಕ್ವಾರಂಟೈನ ನಲ್ಲಿದ್ದವರನ್ನು ಒಬ್ಬೊಬರನ್ನು ನಿಗಾವಹಿಸಲು ಕಷ್ಟವಾಗುತ್ತಿದ್ದು, ಒಂದೆಡೆಯಲ್ಲಿ ಹೋಮ್ ಕ್ವಾರಂಟೈನ ನಲ್ಲಿದ್ದವರನ್ನು ಹೋಟೆಲ್ ಅಯೋಧ್ಯಾಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.