Home / ಜಿಲ್ಲೆ / ಲಾಕ್ ಡೌನ್‍ನಲ್ಲಿ ಸಾಧಕರ ಸಾಧನೆಗಳ ತಿಳಿಯುವ ಸಮಯ………..

ಲಾಕ್ ಡೌನ್‍ನಲ್ಲಿ ಸಾಧಕರ ಸಾಧನೆಗಳ ತಿಳಿಯುವ ಸಮಯ………..

Spread the love

ಕೊವಿಡ್-19. ಭಾರತ ದೇಶದಲ್ಲಿ 2020 ಮಾರ್ರ್ಚ್‍ನಿಂದ ಬಹು ದೊಡ್ಡ ಆಘಾತ, ಗಂಡಾಂತರ ತಂದೊಡ್ಡಿದೆ. ಈ ಸಮಯದಲ್ಲಿ ಕೇಂದ್ರ ಸರ್ಕಾರ ದೇಶದ ಜನರ ಸುರಕ್ಷತೆಗಾಗಿ ದೇಶಕ್ಕೆ ದೇಶವನ್ನೆ ಲಾಕ್‍ಡೌನ್ ಮಾಡಿದೆ. ಇದು ಸಮಯೋಚಿತವಾದ ಮತ್ತು ಅತ್ಯಂತ ಸೂಕ್ತವಾದ ತಿರ್ಮಾನವಾಗಿದೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊಟ್ಟ ಮೊದಲು ಹುಟ್ಟಿಕೊಂಡ ಈ ವೈರಸ್ ಜಗತ್ತಿನ ಎಲ್ಲಾ ದೇಶಗಳಿಗೆ ಬಹು ಬೇಗನೆ ಪಸರಿಸಿ ಮಾನವರ ಪ್ರಾಣ ಹಾನಿಮಾಡಲು ಪ್ರಾರಂಭಿಸಿದೆ. ಮುಂದುವರೆದ ದೇಶಗಳೆಂಬ ಹಣೆಪಟ್ಟಿ ಕಟ್ಟಿಕೊಂಡ ದೇಶಗಳು ಈ ಕೊರೊನಾ ಎಂಬ ಮಾರಿಯನ್ನು ಮಟ್ಟ ಹಾಕಲು ಆಗದೆ ಕೈಕಟ್ಟಿ ಕುಳಿ

ಕಾರಣ ಇದಕ್ಕೆ ಸೂಕ್ತ ಚಿಕಿತ್ಸೆಯಾಗಲಿ, ಔಷಧಿಯಾಗಲಿ ಯಾರೂ ಕಂಡುಹಿಡಿದಿಲ್ಲ. ಭಯಾನಕವಾದ ಈ ವೈರಸ್ ಸ್ಪರ್ಶದಿಂದ ಸೋಂಕಿತರಿಂದ, ವಸ್ತುಗಳ ಮುಖಾಂತರ ಇನ್ನೊಬ್ಬರಿಗೆ ಹರಡುತ್ತ ಮರಣ ಮೃದಂಗವನ್ನು ಬಾರಿಸುತ್ತ ಮಾನವ ಕುಲಕ್ಕೆ ಆಪತ್ತಾಗಿದೆ.

ಕೊರೊನಾ ಸೋಂಕು ತಡೆಗಟ್ಟಲು ಒಂದೇ ಒಂದು ಮಾರ್ಗೊಪಾಯ ಎಂದರೆ ಅದು ಲಾಕ್‍ಡೌನ್ ಮತ್ತು ಸಾಮಾಜಿಕ ಅಂತರ. ಲಾಕ್‍ಡೌನ್ ಜಾರಿಗೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಲಾಕ್‍ಡೌನ್ ಎಂದರೆ ಇಡೀ ದೇಶಕ್ಕೆ ದೇಶವನ್ನೇ ಬಂದ್ ಮಾಡುವುದು.

ಇಡೀ ಜಗತ್ತಿನಲ್ಲೆ ಎರಡನೆ ಸ್ಥಾನದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮತ್ತು ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿದ್ದು, ಲಾಕ್‍ಡೌನ್ ಮಾಡಿದ್ದು ಭಾರತವನ್ನು ಬೇರೆ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು.

ಇದರಿಂದ ರಾಷ್ಟ್ರದ ಆರ್ಥಿಕ ಪ್ರಗತಿಗೆ ತೊಂದರೆಯಾಗಲಿದೆ ಎಂಬುದಕ್ಕೆ ಬೇರೆ ರಾಷ್ಟ್ರಗಳು ಈ ಕ್ರಮಕ್ಕೆ ಮುಂದಾಗಲಿಲ್ಲ. ಆದರೆ, ಭಾರತ ಮಾತ್ರ ಪ್ರಜೆಗಳಿಗೆ ಪ್ರಾತಿನಿಧ್ಯ ಎಂಬುದನ್ನು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಈ ಮುಖಾಂತರ ತೋರಿಸಿಕೊಟ್ಟಿದೆ. ಈ ಮುಖೇನ ಕೊರೊನಾವನ್ನು ತಡೆಗಟ್ಟುವಲ್ಲಿ ಬೇರೆ ರಾಷ್ಟ್ರಗಳಿಗಿಂತ ಮುಂದಿದೆ. ಮುಗ್ದ ಭಾರತೀಯರನ್ನು ಕೊರೊನಾ ಕಂಟಕದಿಂದ ಪಾರುಮಾಡುತ್ತಿದೆ.

ದೇಶದ ಕಾನೂನಿಗೆ ತಲೆದೂಗಿ, ಜತೆಗೆ ಮುಂದಿನ ಭವಿಷ್ಯಕ್ಕೆ ತಮ್ಮ ತಲೆಯನ್ನು ಉಳಿಸಿಕೊಳ್ಳಲು ಇದು ಸಕಾಲವೆಂದು ನಮ್ಮ ಜನ ಅರಿತಿರುವರು. ಒಂದು ತಿಂಗಳು ಮನೆಯಲ್ಲಿರುವ ವಿಷಯ ಆತಂಕಕಾರಿಯೇನಲ್ಲ ಭವಿಷ್ಯದಲ್ಲಿ ಒಳ್ಳೆಯದೆ ಎಂಬ ಅರಿವು ಎಲ್ಲರಿಗೂ ಇದೆ.

ಏಕೆಂದರೆ, ಮನೆಯಲ್ಲಿ ಯಾವುದಕ್ಕೂ ಬಂಧನವಿಲ್ಲ. ಸರ್ಕಾರದ ಸಹಾಯ ಪಡೆದು, ನೆಮ್ಮದಿಯಿಂದ ಊಟ ಮಾಡಿ ಟಿವಿ, ಮೊಬೈಲ್, ದಿನಪತ್ರಿಕೆಗಳು, ಜತೆಗೆ ಮನೆಗೆಲಸಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಮನೆಯೇ ಮಂತ್ರಾಲಯ ಎಂದು ತಿಳಿದು ಈ ಸಮಯದಲ್ಲಿ ಭಯವಿಲ್ಲದೆ ವಾಸಿಸುತ್ತಿದ್ದಾರೆ. ಆದರೆ, ಹಲವಾರು ಜನಲಾಕ್‍ಡೌನ್ ಎಂದರೆ ನಮಗೆ ಕೆಡುಕು ಎಂಬಂತೆ ಭಾವಿಸುತ್ತಿದ್ದಾರೆ. ಇದು ನಮ್ಮ ಒಳಿತಿಗಾಗಿ ಎಂಬ ಭಾವನೆ ಬಂದಾಗ ಹಾಗಾಗದು.

ಭಾರತದ ಸ್ವಾತಂತ್ರ್ಯಚಳುವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ನ್ಯಾಯಾಧೀಶರು ಮೂರು ವರ್ಷಗಳ ಕಾಲ ಸೆರೆಮನೆವಾಸದ ಶಿಕ್ಷೆ ವಿಧಿಸಿದರಂತೆ. ಆಗ ಗಾಂಧೀಜಿಯವರು ನ್ಯಾಯಾಧೀಶರಿಗೆ ಪತ್ರ ಬರೆದು ಇನ್ನೂ ಅನೇಕ ಪುಸ್ತಕಗಳು ನನ್ನಲ್ಲಿವೆ. ಅವುಗಳೆಲ್ಲವನ್ನು ಓದಬೇಕಾಗಿದೆ ಹಾಗೂ ಬರೆಯಬೇಕಾದದ್ದೂ ಬಹಳ ಇದೆ.

ಮೂರು ವರ್ಷಗಳ ಶಿಕ್ಷೆ ವಿಧಿಸಿ ಈ ಕೆಲಸಗಳನ್ನು ಮಾಡಿ ಮುಗಿಸುವ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ. ಸೆರೆಮನೆಯಲ್ಲಿದ್ದು ಅದನ್ನೆಲ್ಲ ಮಾಡಿ ಮುಗಿಸಿದರಂತೆ. ಇದು ಸೆರೆಮನೆಯಲ್ಲಿದ್ದು ಮಾಡಿದ ಮಹಾನ್ ಕಾರ್ಯಕ್ಕೆ ಒಂದು ಉತ್ತಮ ನಿದರ್ಶನ.

ವಿನೋಬಾ ಭಾವೆಯವರು 1932ರಲ್ಲಿ ಧುಳೇ ಜೈಲಿನಲ್ಲಿದ್ದಾಗ ಪ್ರತಿದಿನ ಸಹ ಕೈದಿಗಳಿಗೆ ಭಗವದ್ಗೀತೆಯ ಪ್ರವಚನ ಮಾಡುತ್ತಿದ್ದರಂತೆ. ಇವರ ಪ್ರವಚನವನ್ನೆಲ್ಲ ಸಾಣೆ ಗುರೂಜಿಯವರು ಬರೆದು ಸಂಗ್ರಹಿಸಿ ಪ್ರಕಟಿಸಿದರಂತೆ. ಅದು ಇಂದಿಗೂ ವಿನೋಬಾ ಅವರ ಗೀತಾ ಪ್ರವಚನ ಪುಸ್ತಕವೆಂದು ಜನಪ್ರಿಯವಾಗಿದೆ.

ಜವಾಹರ್‍ಲಾಲ್ ನೆಹರೂರವರು 1932 ರಿಂದ 1935ರ ವರೆಗೆ ಸೆರೆಮನೆಯಲ್ಲಿದ್ದು, ತಮ್ಮ ಮಗಳಾದ ಇಂದಿರಾ ಪ್ರಿಯದರ್ಶಿನಿಗೆ 196 ಪತ್ರಗಳನ್ನು ಬರೆದರಂತೆ. ಅವುಗಳಾವವು ಕ್ಷೇಮ ಸಮಾಚಾರದ ಪತ್ರಗಳಾಗಿರಲಿಲ್ಲವಂತೆ. ಪ್ರಪಂಚದ ಪ್ರಮುಖ ಚರಿತ್ರೆಯ ಭಾಗಗಳನ್ನು ಬರೆದು ಪತ್ರದಲ್ಲಿ ತಿಳಿಸುತ್ತಿದ್ದರಂತೆ. ಮುಂದೆ ಆ ಪತ್ರಗಳ ಸಂಗ್ರಹವೇ ಗ್ಲಿಂಪ್ಸಸ್ ಆಫ್ ವಲ್ಡರ್ ಹಿಸ್ಟರಿ ಕೃತಿಯಾಗಿ ಹೊರಬಂದು ಬಹಳಷ್ಟು ಪ್ರಸಿದ್ಧಿಯಾಯಿತು.

1989ರಲ್ಲಿ ಗುಜರಾತಿನಲ್ಲಾದ ದೊಂಬಿಗಳಲ್ಲಿ 30 ವರ್ಷದ ರಾವ್‍ಜಿ ಹರಜೀ ಪಟೇಲ್. ಎಂಬುವರು ಸೆರೆಮನೆ ಶಿಕ್ಷೆಗೊಳಗಾಗಿದ್ದರು. ಆಗ ಅವರು ಜೈಲಿನಲ್ಲಿದ್ದಾದ ಖೈದಿಗಳಿಗೆ ದಿನಕ್ಕೆ 4000 ಸಾವಿರ ರೊಟ್ಟಿಗಳು ಬೇಕಾಗುತ್ತಿದ್ದವಂತೆ. ಅವುಗಳನ್ನು ಮಾಡಲು 15 ಗಂಟೆ ಸಮಯ ಬೇಕಾಗುತ್ತಿತ್ತಂತೆ.

ಕೈದಿಗಳಿಗೆ ರೊಟ್ಟಿ ಬಡಿಸುವ ಹೊತ್ತಿಗೆ ರೊಟ್ಟಿ ತಂಗಳಾಗುತ್ತಿದ್ದವಂತೆ. ಈ ವಿಷಯವನ್ನು ಅರಿತು ನಾನು ಈ ಸಮಸ್ಯೆ ಪರಿಹರಿಸುತ್ತೇನೆ ಎಂದು ರಾಮ್‍ಜೀ ಅಧಿಕಾರಿಗಳಲ್ಲಿ ಕೇಳಿ ಒಂದು ವಾರ ಅನುಮತಿ ಪಡೆದು ಪೆರೋಲ್ ಮೇಲೆ ಹೊರಗೆ ಬಂದು, ಅವಶ್ಯವಿದ್ದ ಯಂತ್ರದ ಬಿಡಿಭಾಗಗಳನ್ನು ತೆಗೆದುಕೊಂಡು ಸೆರೆಮನೆಗೆ ಬಂದು ನಲವತ್ತು ದಿನಗಳ ಕಾಲ ನಿರಂತರ ಶ್ರಮಿಸಿ ರೊಟ್ಟಿ ಮಾಡುವ ಯಂತ್ರವನ್ನು ಸಿದ್ಧಗೊಳಿಸಿದರಂತೆ.

ಈ ಮೋಟಾರು ಚಾಲಿತ ರೊಟ್ಟಿಯಂತ್ರ ಇಬ್ಬರು ಕೆಲಸಗಾರರ ಸಹಾಯದಿಂದ ಗಂಟೆಗೆ ನಾಲ್ಕು ಸಾವಿರ ರೊಟ್ಟಿ ಸಿದ್ಧಪಡಿಸಿತಂತೆ. ಇವರ ಸೆರೆಮನೆಯ ಬಿಡುವಿನ ಕೆಲಸದಲ್ಲಿ ಕೈದಿಗಳಿಗೆ ಬಿಸಿ ಬಿಸಿಯಾದ ರೊಟ್ಟಿಗಳು ದೊರಕುವಂತಾಯಿತು. ಇದು ಬಿಡುವಿನ ಕಾರ್ಯಕ್ಕೆ ಇನ್ನೊಂದು ನಿದರ್ಶನವಾಗಿದೆ.

ಹೀಗೆಯೇ ಗುಜರಾತಿನಲ್ಲೊಬ್ಬ ರೈತ ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆಯಲ್ಲಿ ಇನ್ನೊಬ್ಬ ರೈತನಿಗೆ ಇರಿದು ಜೈಲುಪಾಲಾಗಿ ಸೆರೆಯಲ್ಲಿದ್ದು ಅನೇಕ ಕೆಲಸಗಳನ್ನು ಮಾಡಿದ ಜೊತೆಗೆ ಮೂಲತಃ ರೈತನಾದ ಇವರು ಸೆರೆಮನೆ ಸಿಬ್ಬಂದಿ ತರಬೇತಿ ಶಾಲೆಯ ಮುಂಭಾಗದಲ್ಲಿ ಮನೆಗಳ ಮುಂಭಾಗದಲ್ಲಿ ಖಾಲಿ ಜಾಗದಲ್ಲಿ ಹೂದೋಟ ಮಾಡಿ ಎಲ್ಲರ ಮನಸೆಳೆದರು. ಜೈಲಿನಿಂದ ವಾಪಸ್ ಬಂದ ಮೇಲೆ ತಮ್ಮ 40 ಎಕರೆ ಜಮೀನಿನಲ್ಲಿಯೂ ಇದೆ ರೀತಿ ಕೆಲಸ ಮಾಡಿ ಬಿಡುವಿನ ಸಮಯದಲ್ಲಿ ಬುದ್ಧಿ ಮತ್ತು ಭಾವನೆಗಳನ್ನು ಉಪಯೋಗಿಸುವುದನ್ನು ತಿಳಿಸಿದರು.

ಹೀಗೆ ಒಟ್ಟಾರೆ ನಮ್ಮ ದೇಶದಲ್ಲಿ ಈ ಅನೇಕ ಮಹಾನ್ ವ್ಯಕ್ತಿಗಳ ದೃಷ್ಟಾಂತಗಳಿರುವಾಗ ಈ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿರುವವರು ಹಿಂಜರಿಯದೆ ಒಂದಿಲ್ಲೊಂದು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಸಾರ್ಥಕವಾಗುವುದು. ಹಾಗೇ ಇದು ಸಾಧಕರ ಸಾಧನೆಗಳ ತಿಳಿಯುವ ಸರಿಯಾದ ಸಮಯ, ಎಂದು ಭಾವಿಸಿ ಆ ಸಾಧಕರ ಪಥದಲ್ಲಿ ಸಾಗೋಣ ಈಗಿನ ಸಮಯಕ್ಕೆ ಕಾನೂನಿಗೆ ತಲೆಬಾಗುತ್ತ ನಾವು ಬದುಕೋಣ ಇತರರನ್ನು ಬದುಕಲು ಬಿಡೋಣ.

ಈ ಕೊರೊನಾ ಹಿಮ್ಮೆಟ್ಟಿಸಲು ಜಾರಿಗೆ ತಂದ ಲಾಕ್ ಡೌನ್‍ಅನ್ನು ಮತ್ತು ಸಾಮಾಜಿಕ ಅಂತರವನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸೋಣ. ಈ ಮಹನೀಯರ ಜೀವನಕ್ಕೆ ಹೋಲಿಸಿದರೆ ಈ ಸಂದರ್ಭ ಏನೇನೂ ಅಲ್ಲ ಎಂಬುದನ್ನು ತಿಳಿದು ಭವ್ಯ ಭಾರತದ ಭವಿಷ್ಯದ ಒಳಿತಿಗೆ ಎಲ್ಲರೂ ಬದ್ದರಾಗಿರೋಣ.

-ಶರಣಪ್ಪ ಕೆ., ಹೂಲಗೇರಿ ಉಪನ್ಯಾಸಕರು,
ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ

ತುಕೊಂಡವು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ