Breaking News
Home / Uncategorized / ಲಾಕ್ ಡೌನ್ ಏಪ್ರೀಲ್ 14ರ ಬಳಿಕವೂ ಮುಂದುವರೆದರೆ  ದಿನ ಪ್ರತಿ 3 ಗಂಟೆ ಮದ್ಯದಂಗಡಿಗಳನ್ನು ತೆರೆಯಲು  ರಾಜ್ಯ ಸರ್ಕಾರ ಚಿಂತನೆ

ಲಾಕ್ ಡೌನ್ ಏಪ್ರೀಲ್ 14ರ ಬಳಿಕವೂ ಮುಂದುವರೆದರೆ  ದಿನ ಪ್ರತಿ 3 ಗಂಟೆ ಮದ್ಯದಂಗಡಿಗಳನ್ನು ತೆರೆಯಲು  ರಾಜ್ಯ ಸರ್ಕಾರ ಚಿಂತನೆ

Spread the love

ಬೆಳಗಾವಿ:  ಭಾರತ್ ಲಾಕ್ ಡೌನ್ ಏಪ್ರೀಲ್ 14ರ ಬಳಿಕವೂ ಮುಂದುವರೆದರೆ  ಮದ್ಯ ವ್ಯಸನಿಗಳಿಗಾಗಿ ದಿನ ಪ್ರತಿ 3 ಗಂಟೆ ಮದ್ಯದಂಗಡಿಗಳನ್ನು ತೆರೆಯಲು  ರಾಜ್ಯ ಸರ್ಕಾರ ನೀಡಲು ಚಿಂತನೆ ನಡೆಸಿದೆ.

ಕೊರೊನಾದಿಂದಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಅಗತ್ಯ ವಸ್ತುಗಳ ದೊರೆಯುವಂತಹ ಅಂಗಡಿಗಳನ್ನು ಹೊರತು ಪಡೆಸಿ ಉಳಿದೆಲ್ಲವನ್ನು ಬಂದ್ ಮಾಡಲಾಗಿದೆ.  ಇದರಿಂದ ರಾಜ್ಯದಲ್ಲಿ ಮದ್ಯ ಚಟಕ್ಕೆ ಒಳಗಾಗಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ ಕಾರಣ ಪ್ರತಿ ದಿನ ಮೂರು ಗಂಟೆ ಮಾತ್ರ ಮದ್ಯದಂಗಡಿ ತೆರೆಯಲು ಚಿಂತನ ನಡೆಸಲಾಗಿದೆ ಎನ್ನಲಾಗುತ್ತಿದೆ.

ಈ ವಿಷಯ ಕುರಿತ ಪ್ರಸ್ತಾವನೆ ಅಬಕಾರಿ ಇಲಾಖೆಯಿಂದ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಕೆಯಾಗಿದೆ. ಇದಕ್ಕೆ ಅನುಮತಿ ದೊರೆತರೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮದ್ಯದಂಗಡಿಗಳು ತೆರೆದಿರಲಿವೆ.  ಲಾಕ್ ಡೌನ್ ಮುಂದುವರೆದರೆ ಮಾತ್ರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.


Spread the love

About Laxminews 24x7

Check Also

ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು: ಸರ್ಕಾರ

Spread the love ಬೆಂಗಳೂರು: ರಾಜ್ಯದ 7 ಸ್ಮಾರ್ಟ್‌ಸಿಟಿಗಳಿಗೆ ಇದುವರೆಗೂ ₹4,557 ಕೋಟಿ ಖರ್ಚು ಮಾಡಲಾಗಿದೆ. ₹1,726 ಕೋಟಿ ಮೊತ್ತದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ