Breaking News

ಬೆಳಗಾವಿ ತಬ್ಲೀಗಿ ಸದಸ್ಯರ ಕುರಿತುಶೋಭಾ ಕರಂದ್ಲಾಜೆ ಅವರು ಮಾಡಿದ ಆರೋಪ‌ ಸಂಪೂರ್ಣ ಸುಳ್ಳು

Spread the love

ಬೆಂಗಳೂರು: ಬೆಳಗಾವಿ‌ ಜಿಲ್ಲಾ ಆಸ್ಪತ್ರೆಯ ಕ್ವಾಂರಂಟೈನ್ ನಲ್ಲಿರುವ ತಬ್ಲೀಗಿ ಸದಸ್ಯರು ವೈದ್ಯಕೀಯ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿ ಉಳುಗಿಳಿದ್ದಾರೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಡಿದ ಆರೋಪ‌ ಸಂಪೂರ್ಣ ಸುಳ್ಳು ಎಂದು ಇದೀಗ ತಿಳಿದು ಬಂದಿದೆ.

ಕ್ವಾಂರಂಟೈನ್ ನಲ್ಲಿರುವ ಸದಸ್ಯರು ವೈದ್ಯಕೀಯ ಸಿಬ್ಬಂದಿಗೆ ಜತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಚಿಕಿತ್ಸೆ ನೀಡುವ ವೈದ್ಯರ ಮೇಲೆ ಉಗುಳಿದ್ದಾರೆ ಅಂತಾ ಸೋಮವಾರ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು. ಅಲ್ಲದೇ ಮಾಧ್ಯಮಗಳೊಂದಿಗೆ ಮಾತನಾಡಿ, ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು‌ ಎಂದಿದ್ದರು.‌

ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಖಾಗಸಿ ಮಾಧ್ಯಮವೊಂದರ ಜತೆ ಮಾತನಾಡಿ, ಇಂತಹ ಯಾವುದೇ ಘಟನೆ ನಡೆದಿಲ್ಲ. ತಬ್ಲೀಗಿಗಳು ಯಾರೊಂದಿಗೂ ಅನುಚಿತ ವರ್ತನೆ ತೋರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಬ್ಲೀಗಿ ಜಮಾಅತ್ ಸದಸ್ಯರ ವಿರುದ್ಧದ ವ್ಯಾಪಕ ಅಪಪ್ರಚಾರ ಅಭಿಯಾನದಲ್ಲಿ ಹರಡಲಾದ ಹಲವು ವದಂತಿಗಳು, ಸುದ್ದಿಗಳು ಒಂದೊಂದಾಗಿ ಸುಳ್ಳು ಎಂದು ಸಾಬೀತಾಗುತ್ತಾ ಬಂದಿವೆ. ಅದಕ್ಕೆ ಹೊಸ ಸೇರ್ಪಡೆ ತಬ್ಲೀಗಿ ಸದಸ್ಯರ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಡಿದ್ದ ಗಂಭೀರ ಆರೋಪಗಳು. ಶೋಭಾ ಮಾಡಿದ್ದ ಆರೋಪ ಸಂಪೂರ್ಣ ಸುಳ್ಳು ಎಂದು ಇದೀಗ ತಿಳಿದು ಬಂದಿದೆ.

ದಿಲ್ಲಿ ನಿಝಾಮುದ್ದೀನ್ ನಲ್ಲಿ ಭಾಗವಹಿಸಿದ್ದ ಕೆಲವು ತಬ್ಲೀಗಿ ಸದಸ್ಯರು ಬೆಳಗಾವಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವಾಗ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಅವರ ಮೇಲೆ ಉಗುಳಿದ್ದಾರೆ ಎಂದು ಶೋಭಾ ಸೋಮವಾರ ಟ್ವೀಟ್ ಮಾಡಿದ್ದರು. ಜೊತೆಗೆ ಮಾಧ್ಯಮದವರ ಜೊತೆ ಮಾತನಾಡುತ್ತಾ ತಬ್ಲೀಗಿಗಳು ಕೊರೋನ ಜಿಹಾದ್ ಮಾಡುತ್ತಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದರು.

ಮತ್ತೊಂದು ವಿಡಿಯೋವನ್ನು ಟ್ವೀಟ್ ಮಾಡಿದ್ದ ಸಂಸದೆ ಅದರಲ್ಲಿ ಐಸೋಲೇಷನ್ ವಾರ್ಡ್ ನೊಳಗೆ ವ್ಯಕ್ತಿಯೊಬ್ಬ ಸ್ವಲ್ಪ ಹೊತ್ತು ಡಾನ್ಸ್ ಮಾಡಿದ್ದು ಕಾಣುತ್ತಿತ್ತು. ಹಾಗೂ ವಾರ್ಡ್ ನೊಳಗಿರುವ ಜನರು ಕಿಟಕಿ ಮೂಲಕ ಹೊರಗಿರುವವರೊಂದಿಗೆ ಮಾತನಾಡಿ, ಇಲ್ಲಿ ಕೊರೊನಾ ಪಾಸಿಟಿವ್ ಆಗಿರುವವರು ಇನ್ನೂ ಪಾಸಿಟಿವ್ ಆಗದವರ ಜೊತೆ ಬೆರೆಯುತ್ತಿದ್ದಾರೆ ಎಂದು ಹೇಳುವುದು ಕೇಳಿ ಬರುತ್ತಿತ್ತು. ಜೊತೆಗೆ ಟ್ವೀಟ್ ನಲ್ಲಿ “ಬೆಳಗಾವಿಯಿಂದ 70 ತಬ್ಲೀಗಿಗಳು ನಿಝಾಮುದ್ದೀನ್ ಗೆ ಹೋಗಿದ್ದರು. ಆ ಪೈಕಿ 8 ಮಂದಿ ಪಾಸಿಟಿವ್ ಬಂದಿದ್ದಾರೆ. ಉಳಿದವರ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ” ಎಂದೂ ಹೇಳಿದ್ದರು ಶೋಭಾ.

ಆದರೆ ಇದನ್ನು ಸಂಪೂರ್ಣ ನಿರಾಕರಿಸಿರುವ ಬೆಳಗಾವಿ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ. ವಿನಯ್ ಬಸ್ತಿಕೊಪ್ಪ ಅವರು, ನಿಝಾಮುದ್ದೀನ್ ಗೆ ಹೋದ 33 ಜನ ತಬ್ಲೀಗಿ ಸದಸ್ಯರು ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ಪೈಕಿ ಪಾಸಿಟಿವ್ ಬಂದ ಮೂವರನ್ನು ಪ್ರತ್ಯೇಕ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ