ಬೆಂಗಳೂರು: ವಿಶ್ವದ್ಯಂತ ಕೊರೊನಾ ವೈರಸ್ ಭೀತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹಂತ ಹಂತವಾಗಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಮೊದಲ ಹಂತವಾಗಿ ಇಂದು ಸುಮಾರು 32 ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ನಾಳೆಯಿಂದ ಕೊರೊನಾ ವೈರಸ್ ಹಬ್ಬುತ್ತಿರುವ ಪ್ರಮಾಣವನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.
ರೈಲುಗಳ ಸೇವೆಯಲ್ಲಿ ವ್ಯತ್ಯಯದ ವಿಚಾರ ತಿಳಿದ ಸಾರ್ವಜನಿಕರು ಕೂಡ ಗುರುವಾರದಿಂದಲೇ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದು, ಇಂದು ನಗರದ ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ಬಹುತೇಕ ಕಡೆಗಳ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ.
ಬಹುತೇಕ ಜನರು ಕೊರೊನಾ ಭೀತಿಯಲ್ಲಿ ಮಾಸ್ಕ್ ಗಳನ್ನು ಹಾಕಿಕೊಂಡೇ ಓಡಾಡುತ್ತಿದ್ದಾರೆ. ಇನ್ನೂ ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಸ್ಥಿತಿ ಹೊರತುಪಡಿಸಿ ಉಳಿದಂತೆ ಯಾರು ಮನೆಯಿಂದ ಹೊರಬರಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ಈ ರೈಲುಗಳು ಸಿಗಲ್ಲ
ರೈಲು ಸಂಖ್ಯೆ ಎಲ್ಲಿಂದ-ಎಲ್ಲಿಗೆ
19667 ಉದಯ್‍ಪುರ್-ಮೈಸೂರು ವೀಕ್ಲಿ ಹಮ್‍ಸಫರ್ ಎಕ್ಸ್‌ಪ್ರೆಸ್
19668 ಮೈಸೂರು – ಉದಯ್‍ಪುರ್ ವೀಕ್ಲಿ ಹಮ್‍ಸಫರ್ ಎಕ್ಸ್‌ಪ್ರೆಸ್
22625 ಚೆನ್ನೈ-ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್
22626 ಬೆಂಗಳೂರು-ಚೆನ್ನೈ ಡೈಲಿ ಎಕ್ಸ್‌ಪ್ರೆಸ್
11047 ಮೀರಜ್-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್
11303 ಮಂಗಳೂರು-ಕೊಲ್ಹಾಪುರ್ ಎಕ್ಸ್‌ಪ್ರೆಸ್
11304 ಕೊಲ್ಹಾಪುರ್-ಮಂಗಳೂರು ಎಕ್ಸ್‌ಪ್ರೆಸ್
16023 ಮೈಸೂರು-ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್
16024 ಯಲಹಂಕ-ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್
16541 ಯಶವಂತಪುರ-ಪಂಡರಪುರ ಎಕ್ಸ್‌ಪ್ರೆಸ್
16542 ಪಂಡರಪುರ-ಯಶವಂತಪುರ ಎಕ್ಸ್‌ಪ್ರೆಸ್06540 ಶಿವಮೊಗ್ಗ-ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್
17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್
17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್
11065 ಮೈಸೂರು-ರೆನಿಗುಂಟ ಎಕ್ಸ್‌ಪ್ರೆಸ್
11066 ರೆನಿಗುಂಟ-ಮೈಸೂರು ಎಕ್ಸ್‌ಪ್ರೆಸ್
16217 ಮೈಸೂರು-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್
16218 ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್
16565 ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್
16566 ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್
12027 ಚೆನ್ನೈ-ಬೆಂಗಳೂರು ಶತಾಬ್ಧಿ ಎಕ್ಸ್‌ಪ್ರೆಸ್
12028 ಬೆಂಗಳೂರು-ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್
16569 ಯಶವಂತಪುರ-ಕಾಚಿಗುಡ ಎಕ್ಸ್‌ಪ್ರೆಸ್
16570 ಕಾಚಿಗುಡ-ಯಶವಂತಪುರ ಎಕ್ಸ್‌ಪ್ರೆಸ್
16585 ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್
16586 ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್
12079 ಹುಬ್ಬಳ್ಳಿ-ಬೆಂಗಳೂರು ಜನಶತಾಬ್ಧಿ ಎಕ್ಸ್‌ಪ್ರೆಸ್
12080 ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್‌ಪ್ರೆಸ್
16557 ಮೈಸೂರು-ಬೆಂಗಳೂರು ರಾಜರಾಣಿ ಎಕ್ಸ್‌ಪ್ರೆಸ್
16558 ಬೆಂಗಳೂರು-ಮೈಸೂರು ರಾಜರಾಣಿ ಎಕ್ಸ್‌ಪ್ರೆಸ್
06539 ಯಶವಂತಪುರ-ಶಿವಮೊಗ್ಗ ತತ್ಕಾಲ್ ಎಕ್ಸ್‌ಪ್ರೆಸ್