Breaking News
Home / ಜಿಲ್ಲೆ / ಮಹಾಮಾರಿ ಕೊರೊನಾ ಜನರನ್ನು ಭಯ ಭೀತಿಗೊಳಿಸಿದ್ದು, ಇದೀಗ ಕಾಸರಗೋಡಿನ ಇಬ್ಬರು ಶಾಸಕರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ.

ಮಹಾಮಾರಿ ಕೊರೊನಾ ಜನರನ್ನು ಭಯ ಭೀತಿಗೊಳಿಸಿದ್ದು, ಇದೀಗ ಕಾಸರಗೋಡಿನ ಇಬ್ಬರು ಶಾಸಕರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ.

Spread the love

ಮಂಗಳೂರು: ಮಹಾಮಾರಿ ಕೊರೊನಾ ಜನರನ್ನು ಭಯ ಭೀತಿಗೊಳಿಸಿದ್ದು, ಇದೀಗ ಕಾಸರಗೋಡಿನ ಇಬ್ಬರು ಶಾಸಕರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ.

ಹೌದು. ಕಾಸರಗೋಡು ಶಾಸಕ ಎನ್‍ಎ ನೆಲ್ಲಿಕುನ್ನು ಹಾಗೂ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಈ ಇಬ್ಬರಿಗೆ ಇದೀಗ ಕೊರೊನಾ ಭೀತಿ ಆರಂಭವಾಗಿದೆ. ಸದ್ಯ ಈ ಇಬ್ಬರು ಶಾಸಕರನ್ನು ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನಲ್ಲಿರಿಸಲಾಗಿದೆ.

ಈ ಇಬ್ಬರು ಶಾಸಕರು ಮದುವೆ ಸಮಾರಂಭವೊಂದರಲ್ಲಿ ಕೊರೊನಾ ಪೀಡಿತ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೂಡ ವ್ಯಕ್ತಿ ಭಾಗವಹಿಸಿದ್ದಾನೆ. ಅಲ್ಲದೆ ರೋಗಿ ಶಾಸಕ ಕಮುರುದ್ದೀನ್ ಕೈಕುಲುಕಿದ್ದಾನೆ ಎಂಬುದಾಗಿ ವರದಿಯಾಗಿದೆ.

ಕೊರೊನಾ ಪೀಡಿತ ವ್ಯಕ್ತಿ ಮಾರ್ಚ್ 11 ರಂದು ಬೆಳಗ್ಗೆ 8 ಗಂಟೆಗೆ ದುಬೈಯಿಂದ ಕೊಯಿಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ನಂತರ ಲಾಡ್ಜ್ ವೊಂದರಲ್ಲಿ ನೆಲೆಸಿದ್ದಾನೆ. ಮರು ದಿನ ಕೊಯಿಕೋಡ್ ನಿಂದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಿದ್ದಾನೆ. ಆ ನಂತರ ಕಾಸರಗೋಡಿನ ಹಲವು ಪ್ರದೇಶಗಳಲಿ ಸುತ್ತಾಡಿದ್ದಾನೆ. 5 ದಿನ ಹಲವು ಮಂದಿಯನ್ನು ಕೂಡ ಭೇಟಿ ಮಾಡಿದ್ದಾನೆ.

ಮಾರ್ಚ್ 16ರಂದು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದಾನೆ. ಈ ವೇಳೆ ಆತನ ಗಂಟಲು ದ್ರವವನ್ನು ಟೆಸ್ಟ್ ಮಾಡಿದಾಗ ಆತನಿಗೆ ಕೊರೊನಾ ಇರುವುದು ಬೆಳಕಿಗೆ ಬಂದಿದೆ. ಸದ್ಯ ಕೊರೊನಾ ಪೀಡಿತ ವ್ಯಕ್ತಿ ಯಾರನ್ನೆಲ್ಲ ಸಂಪರ್ಕಿಸಿದ್ದಾನೆ ಎಂಬುದನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.


Spread the love

About Laxminews 24x7

Check Also

ಮಿ.ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ : ಏಕವಚನದಲ್ಲೇ ಡಿಸಿಎಂ ಡಿಕೆಶಿ ವಾಗ್ಧಾಳಿ

Spread the love ಬೆಂಗಳೂರು : ಮಹಿಳೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಚುನಾವಣೆ ಹೊತ್ತಲ್ಲಿ ವಿರೋಧ ಪಕ್ಷಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ