ಹೊಸ ದಿಲ್ಲಿ: ಕರೊನಾ ವೈರಸ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಉಂಟಾಗಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಆರ್ಬಿಐ ರೆಪೋ ದರ ಕಡಿತಗೊಳಿಸಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೆಪೋ ದರವನ್ನು ಶೇ.5.1ರಿಂದ ಶೇ.4.4ಕ್ಕೆ ಇಳಿಸಲಾಗಿದೆ ಎಂದರು.
ರಿವರ್ಸ್ ರೆಪೋ ದರವನ್ನು ಶೇ.90 ಇಳಿಕೆ ಮಾಡಲಾಗಿದೆ. ಸಣ್ಣ ಉದ್ದಿಮೆಗಳು ಅನುಭವಿಸುತ್ತಿರುವ ನಷ್ಟವನ್ನು ಗಮನಿಸಲಾಗಿದೆ. ಕರೊನಾ ವೈರಸ್ ದೇಶಕ್ಕೆ ಕಠಿಣ ಸ್ಥಿತಿಯನ್ನು ತಂದಿದ್ದು, ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದರು.
ಮೂರು ತಿಂಗಳು ಗೃಹ ಸಾಲ ಇಎಂ ಇಲ್ಲ: ಮುಂದಿನ ಮೂರು ತಿಂಗಳು ಗೃಹ ಸಾಲದ ಮೇಲಿನ ಇಎಂಐ ಕಟ್ಟುವಂತಿಲ್ಲ. ಈ ನೀತಿ ಮಾರ್ಚ್ 1ಕ್ಕೆ ಪೂರ್ವ ಅನ್ವಯವಾಗಲಿದೆ. ಈ ನೀತಿ ರಾಷ್ಟ್ರದ ಎಲ್ಲ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳಿಗೂ ಅನ್ವಯವಾಗಲಿದೆ. ವಾಹನ ಸಾಲ ಹಾಗೂ ವೈಯಕ್ತಿಕ ಸಾಲಕ್ಕೂ ಇದು ಅನ್ವಯವಾಗಲಿದೆ