ಇಲ್ಲಿನ ರೋಟರಿ ಸಂಸ್ಥೆ, ರೋಟರಿ ಸೇವಾ ಸಂಘ , ಇನ್ನರವ್ಹೀಲ ಸಂಸ್ಥೆ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಗೋಳಿಸುವ ನಿಟ್ಟಿನಲ್ಲಿ ಸೋಂಕು ತೊಡೆದು ಹಾಕುವ ದ್ರಾವಣ ಸಿಂಪಡಣಾ ಸುರಂಗ ಮಾರ್ಗವನ್ನು ಶುಕಾರವಾರದಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಿದರು
ನಂತರ ಮಾತನಾಡಿದ ಸಚಿವರು ಅಗತ್ಯ ವಸ್ತುಗಳಿಗೆ ಹೊರ ಬರುವವರು ಈ ಸುರಂಗ ಮಾರ್ಗದ ಮೂಲಕ ತೆರಳುವಂತೆ ಜಾಗೃತಿ ಮೂಡಿಸಬೇಕು . ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನರು ಈ ಸುರಂಗ ಮಾರ್ಗದಲ್ಲಿ ಪ್ರವೇಶಿಸಬೇಕು. ನಗರದ ಇನ್ನುಳಿದ ಜನನಿಬಿಡ ಪ್ರಮುಖ ಸ್ಥಳಗಳಲ್ಲಿ ದ್ರಾವಣ ಸಿಂಪಡಣಾ ಕೇಂದ್ರಗಳನ್ನು ತೆರೆಯಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಿ.ಎಸ್.ಪಿ ಡಿ.ಟಿ.ಪ್ರಭು , ಪೌರಾಯುಕ್ತ ಶಿವಾನಂದ ಹಿರೇಮಠ, ಎಂ.ಎಚ್.ಗಜಾಕೋಶ , ಮುಖಂಡರುಗಳಾದ ಸೋಮಶೇಖರ್ ಮಗದುಮ್ಮ , ಮಹಾಂತೇಶ ತಾಂವಶಿ ಸೇರಿದಂತೆ ಇತರರು ಇದ್ದರು .