Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಭಜರಂಗದಳ ಕಾರ್ಯಕರ್ತರಿಂದ ಕೊರೋನಾ ವಿರುದ್ಧ ಅರಿವು ಕಾರ್ಯಕ್ರಮ

ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಭಜರಂಗದಳ ಕಾರ್ಯಕರ್ತರಿಂದ ಕೊರೋನಾ ವಿರುದ್ಧ ಅರಿವು ಕಾರ್ಯಕ್ರಮ

Spread the love

ಘಟಪ್ರಭಾ ಗ್ರಾಮದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಜನ ಜಾಗ್ರತೆ
ಗೋಕಾಕ-ತಾಲೂಕಿನ ದುಪದಾಳ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕ ಬೆಳಗಾವಿ, ಹಾಗೂ ತಾಲೂಕಾ ವೈದ್ಯಾಧಿಕಾರಿಗಳು ಗೋಕಾಕ ಇವರ ನೇತ್ರತ್ವದಲ್ಲಿ ದೇಶದಲ್ಲಿ ಕೊರೋನ (ಕೋವಿಡ್19) ವೈರಸ್ ಹರಡಿದ್ದು,ಹಾಗೂಬೆಳಗಾವಿ ಜಿಲ್ಲೆಯ 10ಜನರಿಗೆ ಕೊರೋನ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಸಲುವಾಗಿ ವೈರಸ್ ಬಗ್ಗೆ ಭಯ ಬೇಡ ಎಚ್ಚರವಾಗಿರಿ.ಎಂದು ಆಶಾ ಕಾರ್ಯಕರ್ತೆಯರು ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿಗಳ ಮೂಲಕ ಘಟಪ್ರಭಾ ಗ್ರಾಮದ ಗಲ್ಲಿಗಲ್ಲಿಯಲ್ಲಿ ಪ್ರತಿಯೊಂದು ಮನೆಗೆ ತೆರಳಿ ಕೊರೋನ ವೈರಸ್ ಜನರಿಗೆ ಜಾಗ್ರತೆ ಮೂಡಿಸಲಾಯಿತು.ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆಯಲ್ಲಿ ಇರುವ ವ್ಯಕ್ತಿಗಳಿಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಿ ತೀವ್ರ,ಜ್ವರ, ನೆಗಡಿ. ಕೆಮ್ಮು. ಉಸಿರಾಟದ ತೊಂದರೆ ಹಾಗೂ ಭೇದಿ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ಕೊಡಿ.ಬಿಸಿಲಿನಲ್ಲಿ ತನ್ನ ಪ್ರಾಣದ ಹಂಗನ್ನು ಬಿಟ್ಟು ಸರ್ವೆ ಹಾಗೂ ಜಾಗ್ರತೆ ಮೂಡಿಸುತ್ತಿರುವ ಆಶಾ ಹಾಗೂ ಅಂಗನವಾಡಿ ಎಲ್ಲ ಕಾರ್ಯಕರ್ತೆಯರು ಪ್ರತಿದಿನ ಗಲ್ಲಿಗಲ್ಲಿಗೆ ಹೋಗಿ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ.ಹಾಗೂ ಭಜರಂಗದಳದ ಕಾರ್ಯಕರ್ತರು ಸಹ ಇದರಲ್ಲಿ ಭಾಗವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ S.Y.ಬೆನವಾಡಿ.ಗ್ರಾಮ ಲೆಕ್ಕಾಧಿಕಾರಿ M.S.ಘಡಕರಿ.ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಧೀರ .ಜೋಡಟ್ಟಿ.ನಾಗರಾಜ ನಾಯಿಕ.ಆರೋಗ್ಯ ಕಿರಿಯ ಸಹಾಯಕಿ S.C.ಕಲಗುಡಿ.ಅಂಗನವಾಡಿ ಕಾರ್ಯಕರ್ತೆ ಮಹಾನಂದ ಪುರಾಣಿಕ.ಶೋಭಾ ಹೀರೆಮಠ ಭಜರಂಗದಳ ಕಾರ್ಯಕರ್ತ ಆಶೀಶ್ ಕಾಳೆ.ಇನ್ನೂ ಅನೇಕ ಅಂಗನವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು ,ಭಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ