Breaking News

ಮೂಡಲಗಿ : ಶ್ರೀಗಂಧ ಕದ್ದಿಯುತ್ತಿರುವ ಕದಿಮರು ಅಂಧರ

Spread the love

ಮೂಡಲಗಿ : ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಎಮ್.ಎನ್ ಸಿಂಧೂರ, ಸಿಬ್ಬಂದಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಉಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ ನಾಮದೇವ ಕದಮ(50), ಮಚ್ಚೇಂದ್ರ ದತ್ತು ಕದಮ(55), ಪಾಲಭಾಂವಿ ಗ್ರಾಮದ ರಫೀಕ್ ಅಪ್ಪಾಸಾಬ ನಾಯಿಕವಾಡಿ(35) ಎನ್ನಲಾದ ಮೂರು ಆರೋಪಿಗಳನ್ನು ಬಂದಿಸಿದ್ದಾರೆ

ಇವರು 3.38.355 ರೂ ಕಿಮ್ಮತ್ತಿನ 112 ಕೆಜಿ ತೂಕದ ಶ್ರೀಗಂಧ ಮರದ ತುಕ್ಕಡಿಗಳನ್ನು ಹಾಗೂ ಸಾಗಾಟ ಮಾಡಲು ಬಳಸುತ್ತಿದ್ದ ಮೋಟರ್ ಸೈಕಲ್ ಮತ್ತು ಮರವನ್ನು ಕಡಿಯಲು ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಡಲಗಿ ಪೋಲಿಸ್ ಠಾಣೆಯ ಪ್ರಕರಣ ದಾಖಲಿಸಿ ಮೂರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Spread the love

About Laxminews 24x7

Check Also

ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ:ಸತೀಶ್‌ ಜಾರಕಿಹೊಳಿ

Spread the love ಹುಕ್ಕೇರಿ: ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ