Breaking News
Home / ಜಿಲ್ಲೆ / ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ

ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ

Spread the love

ಜಾತಕ ಭವಿಷ್ಯ ಹೇಳುವವರೆಲ್ಲ ಈಗ ಏನಾದರು ? ಕೊರೋನಾಗೆ ಅವರ ಬಳಿ ಪರಿಹಾರ ಕೇಳಿ ನೋಡೋಣ.

ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮಾದ್ಯಮಗಳ ಮುಂದೆ ಮಾತನಾಡುವು ಸಂದರ್ಭದಲ್ಲಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವ ಸಂದರ್ಭದಲ್ಲಿ ರವಿಚಂದ್ರನ್ ಅವರು ಜನರಿಗೆ ತಮ್ಮ ಮಾತಿನ ಮೂಲಕವೇ ಧೈರ್ಯವನ್ನು ಹೇಳಿರುವುದು ಮಾತ್ರವಲ್ಲದೇ, ಕೆಲವು ಡಂಭಾಚಾರಿಗಳ ಮಾತುಗಳನ್ನು ಕೂಡಾ ಅವರು ಪ್ರಶ್ನೆ ಮಾಡುತ್ತಾ, ಹಾಸ್ಯ ಜಾಡಿನಲ್ಲೇ ಸಮಾಜದಲ್ಲಿ ಭೀತಿ ಹುಟ್ಟಿಸುವವರನ್ನು ಅವರು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ರವಿಚಂದ್ರನ್ ಅವರು ಏನು ಮಾತನಾಡಿದ್ದರೆಂಬುದನ್ನು ತಿಳಿಯೋಣ ಬನ್ನಿ.

ರವಿಚಂದ್ರನ್ ಅವರು ತಮ್ಮ ಜೊತೆಯಲ್ಲಿ ಇದ್ದವರಿಗೆ ಹೊರಗೆ ಎಲ್ಲೂ ಕೆಮ್ಮ ಬೇಡಿ, ಎಲ್ಲರೂ ಕೊರೊನಾ ಎಂದು ಭಯಪಡುವಂತಾಗಿದೆ. ಎಲ್ಲಾ ಕಡೆ ಇದರ ಬಗ್ಗೆ ಹೇಳಿ ಹೇಳಿ ನೆಗಡಿ, ಕೆಮ್ಮಿಗೂ ಭಯಪಡುವಂತಾಗಿದೆ. ಮೂಗಿನ ಮುಂದೆ ಕೈ ಇಡಲು ಆಲೋಚಿಸುವಂತೆ‌ ಆಗಿದೆ ಎಂದಿದ್ದಾರೆ. ಈ ಹಿಂದೆ ಕೂಡಾ ವೈರಸ್ ಗಳು ಬಂದಿವೆ, ಅದರಿಂದ ಹೆಚ್ಚು ಸಾವುಗಳು ಉಂಟಾಗಿದೆ. ಆದರೆ ಈಗ ಮಾದ್ಯಮಗಳಲ್ಲಿ ಕೊರೊನಾ ಬಗ್ಗೆ ದಿನ ಹೇಳಿ ಹೇಳಿ ಜನರಲ್ಲಿ ಒಂದು ಭಯ ಹುಟ್ಟುಕೊಂಡಿದೆ ಎಂದು ಹೇಳಿದ ಅವರು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು. ಕೊರೊನಾ ಆಗ ತಾನಾಗೆ ಹೋಗುತ್ತದೆ ಎಂದಿದ್ದಾರೆ.

ಅಲ್ಲದೆ ಜಾತಕಗಳು, ನ್ಯೂಮರಾಲಜಿ ಇನ್ನೊಂದು ಮತ್ತೊಂದು ಎಂದು ಹೇಳುವವರೆಲ್ಲಾ ಈಗ ಏನಾದರು? ಅವರನ್ನು ಪ್ರಶ್ನೆ ಮಾಡಬೇಕಿದೆ. ಇದಕ್ಕೆ ಪರಿಹಾರ ಅವರಲ್ಲಿ ಇಲ್ಲವೇ? ಎನ್ನುವ ಮೂಲಕ ಭವಿಷ್ಯವಾಣಿಗಳನ್ನು, ಜಾತಕ ನೋಡಿ ಸಮಯ ಚೆನ್ನಾಗಿದೆ ಎಂದು ನುಡಿಯುವ ಜನರನ್ನು ಕೂಡಾ ವಿಮರ್ಶೆ ಮಾಡಿದ್ದಾರೆ. ಇನ್ನು ಜೀವನ ಬಹಳ ಚಿಕ್ಕದು, ಇದನ್ನು ಭಯದಿಂದ ಕಳೆಯಬಾರದು, ಲೈಫ್ ಎಂಜಾಯ್ ಮಾಡಬೇಕು ಕೊರೊನಾವನ್ನು ಧೈರ್ಯವಾಗಿ ಎದುರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.


Spread the love

About Laxminews 24x7

Check Also

ಸೋಮಣ್ಣ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರನಿಗೆ ನೋಟಿಸ್

Spread the loveಚಾಮರಾಜನಗರ: ಸಚಿವ ವಿ ಸೋಮಣ್ಣ (V Somanna) ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ಚಾಮರಾಜನಗರ (Chamarajanagar) ಜಿಲ್ಲಾ ಬಿಜೆಪಿ ವಕ್ತಾರನಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ