Breaking News

ಶಾಸಕರನ್ನು ಸೆಳೆಯೋದು ಬಿಜೆಪಿ ತಂತ್ರ ಎಂದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Spread the love

ಬೆಂಗಳೂರು : ಬಿಜೆಪಿಯವರಿಗೆ ಅಧಿಕಾರ ಇಲ್ಲ. ವಾಮ ಮಾರ್ಗದಿಂದ ಬರಲು ಪ್ರಯತ್ನ ಮಾಡ್ತಾರೆ. ಬಿಜೆಪಿಯವರ ದಂಧೆಯೇ ಆಪರೇಷನ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

 

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉನ್ನತ ಸ್ಥಾನ, ಹಣದ ಆಮಿಷ ಇಡ್ತಾರೆ. ಶಾಸಕರನ್ನು ಸೆಳೆಯೋದು ಬಿಜೆಪಿ ತಂತ್ರ. ಈಗ ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬಂದಿಲ್ಲ, ಸೋತಿದ್ದಾರೆ. ಅವರನ್ನು ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ. ಅವರ ರಾಜ್ಯದ ನಾಯಕರನ್ನ ನಿರ್ಲಕ್ಷ್ಯ ಮಾಡಿದೆ. ಹೈಕಮಾಂಡ್ ನಯಾ ಪೈಸೆ ಬೆಲೆ ಕೊಡ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ ಹೆಣಗಾಡ್ತಿದ್ದಾರೆ. ನಾವೂ ಜೀವಂತ ಇದ್ದೇವೆಂದು ತೋರಿಸಿಕೊಳ್ತಿದ್ದಾರೆ ಎಂದು ಕಿಡಿಕಾರಿದರು.

ಚರ್ಚೆ ನಡೆದಿದ್ದು ಹುದ್ದೆ ಬಗ್ಗೆ ಅಲ್ಲ ಮುದ್ದೆ ಬಗ್ಗೆ: ಗೃಹ ಸಚಿವ ಜಿ ಪರಮೇಶ್ವರ್​ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅಲ್ಲಿ ನಡೆದಿದ್ದ ಚರ್ಚೆ ಬಗ್ಗೆ ಮಾಧ್ಯಮದವರಿಗೇ ಹೆಚ್ಚಿಗೆ ಗೊತ್ತಿದ್ದಂತಿದೆ. ಆದ್ರೆ ಆವತ್ತು ಚರ್ಚೆ ನಡೆದಿದ್ದು, ಹುದ್ದೆ ಬಗ್ಗೆ ಅಲ್ಲ, ಮುದ್ದೆ ಬಗ್ಗೆ. ನಮ್ಮ ನಾಯಕರನ್ನು ಊಟಕ್ಕೆ ಕರೆದಿದ್ರು ಅಷ್ಟೇ. ಇದರ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಊಟದ ನಂತರ ಏನೇನೋ ವ್ಯಾಖ್ಯಾನ ಆಗ್ತಿದೆ. ಆ ವ್ಯಾಖ್ಯಾನಗಳನ್ನು ನಾವ್ಯಾರು ಕೊಟ್ಟಿಲ್ಲ. ಪರಮೇಶ್ವರ್, ಸಿಎಂ, ಸತೀಶ್ ಜಾರಕಿಹೊಳಿ ಕೊಟ್ಟಿಲ್ಲ. ಆವತ್ತು ಅವರನ್ನ ಊಟಕ್ಕೆ ಕರೆದಿದ್ರು. ಇನ್ನೊಂದು ದಿನ ಡಿಕೆಶಿ ಸಾಹೇಬ್ರಿಗೂ ಕರೀತಾರೆ. ಡಿಸಿಎಂ ಬರದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಖರ್ಗೆ ಹೇಳಿದ್ರು.

ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈಗ ಆ ಪ್ರಶ್ನೆಯೇ ಇಲ್ವಲ್ಲ. ಈಗ ಎಲ್ಲರಿಗೂ ಹುದ್ದೆ ನೀಡಲಾಗಿದೆ. ಕೊಟ್ಟ ಹುದ್ದೆಯನ್ನು ಎಲ್ಲರೂ ನಿರ್ವಹಿಸುತ್ತಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ. ಪರಮೇಶ್ವರ್ ಗೃಹಸಚಿವರಿದ್ದಾರೆ. ಮಹದೇವಪ್ಪ ಅವರಿಗೆ ಸಮಾಜಕಲ್ಯಾಣ ಇಲಾಖೆ ಇದೆ. ನಾನು RDPR ಇದ್ದೇನೆ. ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಎಲ್ಲರಿಗೂ ಜವಾಬ್ದಾರಿ ಕೊಟ್ಟಿದ್ದಾರೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು. ಅಧಿಕಾರ ಹಂಚಿಕೆ ನಾಲ್ವರಿಗಷ್ಟೇ ಗೊತ್ತು. ರಾಜ್ಯದ ಇಬ್ಬರು, ದೆಹಲಿಯ ಇಬ್ಬರಿಗೆ ಗೊತ್ತು. ಇನ್ಯಾರಿಗೂ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ