Breaking News

ರಾತ್ರಿ ಪಾನಮತ್ತಳಾಗಿ ಓಲಾಡುತ್ತಯುವಕನ ಇರಿದು ಕೊಲೆಗೈದ ಯುವತಿ

Spread the love

ಬೆಳಗಾವಿ: ರಾತ್ರಿ ಪಾನಮತ್ತಳಾಗಿ ಓಲಾಡುತ್ತ ಚಾಕು ಹಿಡಿದು ರಸ್ತೆಯಲ್ಲಿ ಹೊರಟಿದ್ದ ಯುವತಿಯೊಬ್ಬಳು ಯುವಕನೊಬ್ಬನಿಗೆ ಇರಿದು ಕೊಲೆಗೈದಿದ್ದಾಳೆ.

ನಗರದ ಹಳೆ ಪಿಬಿ ರಸ್ತೆಯಲ್ಲಿ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ನಾಗರಾಜ ಭೀಮಸಿ ಪಾಟೀಲ (28) ಕೊಲೆಯಾದ ಯುವಕ.

ಕೈಯ್ಯಲ್ಲಿ ಚಾಕು ಹಿಡಿದುಕೊಂಡು ಮಹಿಳೆ ಕುಡಿದ ಮತ್ತಿನಲ್ಲಿ ಓಲಾಡುತ್ತ ರಸ್ತೆಯಲ್ಲಿ ಸಾಗುತ್ತಿದ್ದಳು. ಈ ವೇಳೆ ಬೈಕ್ ನಲ್ಲಿ ಸಾಗುತ್ತಿದ್ದ ನಾಗರಾಜ ಆಕೆಯನ್ನು ವಿಚಾರಿಸಿದಾಗ ಕೆರಳಿದ ಯುವತಿ ಮಾತಿಗೆ ಮಾತು ಬೆಳೆಸಿ ಯುವಕನಿಗೆ ಚೂರಿಯಿಂದ ಇರಿದಿದ್ದಾಳೆ.

ಕೂಡಲೆ ನಾಗರಾಜ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಈ ಸಂಬಂಧ ಪೊಲೀಸರು ಕಂಗ್ರಾಳಿ ಕೆ.ಎಚ್. ಗ್ರಾಮದ ಜಯಶ್ರೀ ಪವಾರ ಎಂಬ ಯುವತಿಯನ್ನು ಬಂಧಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ