Breaking News
Home / ರಾಜಕೀಯ / ಗೋಮಾಳ ಜಮೀನು’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ ನಮೂನೆ-50, 53ರ ಅರ್ಜಿ ಪರಿಗಣಿಸಲು ಗ್ರೀನ್ ಸಿಗ್ನಲ್

ಗೋಮಾಳ ಜಮೀನು’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ ನಮೂನೆ-50, 53ರ ಅರ್ಜಿ ಪರಿಗಣಿಸಲು ಗ್ರೀನ್ ಸಿಗ್ನಲ್

Spread the love

ಬೆಂಗಳೂರು: ಒಂದು ಬಾರಿಯ ಕ್ರಮದ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ಅಡಿಯಲ್ಲಿ ಅನಧಿಕೃತ ಕೃಷಿಯನ್ನು ಸಕ್ರಮಗೊಳಿಸೋದಕ್ಕಾಗಿ ನಮೂನೆ 50, 53ರಲ್ಲಿ ಬಾಕಿ ಇರುವಂತ ಅರ್ಜಿಗಳನ್ನು ಪರಿಗಣಿಸಬಹುದಾಗಿ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈ ಮೂಲಕ ಗೋಮಾಳ ಜಮೀನು ( Gomala Land ) ನಿರೀಕ್ಷೆಯಲ್ಲಿದ್ದಂತ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಗೋಮಾಳ ವಿಸ್ತೀರ್ಣವನ್ನು ನಿಗದಿಪಡಿಸುವ ಬಗ್ಗೆ ಸ್ಪಷ್ಠೀಕರಣವನ್ನು ಕೋರಿರುವ ಹಿನ್ನಲೆಯಲ್ಲಿ ಸರ್ಕಾರ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುವಂತ ನಿರ್ದೇಶನಗಳನ್ನು ಹಿಂಪಡೆದು, ಯಾವುದೇ ಗ್ರಾಮದಲ್ಲಿ ಉಚಿತ ಗೋಮಾಳವನ್ನು ಪ್ರತ್ಯೇಕವಾಗಿಡುವುದರಲ್ಲಿ ಅವಶ್ಯಕವಾದ ಭೂಮಿಯ ವಿಸ್ತೀರ್ಣವನ್ನು ಜಿಲ್ಲಾಧಿಕಾರಿಗಳು ನಿರ್ಧರಿಸತಕ್ಕದ್ದು ಎಂದು ನಿರ್ದೇಶನ ನೀಡಲಾಗಿದೆ.

ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರುಗಳಿಗೆ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿ ಕಾಯ್ದಿರಿಸತಕ್ಕದ್ದು ಎಂದು ಸೂಚಿಸಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ಅಡಿಯಲ್ಲಿ ಭೂಮಿಯ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದಂತೆ ನಮೂನೆ 50, 53 ಮತ್ತು 57ರ ಅರ್ಜಿಗಳು ಒಡಪಡುತ್ತದೆ. ಜಿಲ್ಲಾಧಿಕಾರಿಗಳು ನಿಗಧಿತ ವಿಸ್ತೀರ್ಣದ ಗೋಮಾಳವನ್ನು ನಿಗಧಿಪಡಿಸಿದ ನಂತ್ರ ಹೆಚ್ಚುವರಿ ಗೋಮಾಳವನ್ನು ನಮೂನೆ 50, 53 ಮತ್ತು 57ರ ಅರ್ಜಿಗಳನ್ನು ಸಲ್ಲಿಸಿದ ಅನಧಿಕೃತ ಸಾಗುವಳಿದಾರರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರನ್ವಯ ಮಂಜೂರು ಮಾಡಬಹುದಾಗಿ ಎಂದಿದ್ದಾರೆ.


Spread the love

About Laxminews 24x7

Check Also

ಕೊಲೆ ಕೇಸ್ ಬೆನ್ನಲ್ಲೇ ಹೊರಬಿತ್ತು ನಟ ದರ್ಶನ್ ಮತ್ತೊಂದು ಪ್ರಕರಣ

Spread the loveಕೊಲೆ ಕೇಸ್ ಬೆನ್ನಲ್ಲೇ ಹೊರಬಿತ್ತು ನಟ ದರ್ಶನ್ ಮತ್ತೊಂದು ಪ್ರಕರಣ ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ