Breaking News
Home / ರಾಜಕೀಯ / ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ

ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ

Spread the love

ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಮೂಲದ ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿಗಳು ಮಂಡಿ ನೋವಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳುತ್ತಿದ್ದಾರೆಂದು ಮತ್ತು ಸಂಕ್ರಾಂತಿ ನಂತರ ರಾಜ್ಯ ಮತ್ತೊಬ್ಬ ಮುಖ್ಯಮಂತ್ರಿಯನ್ನು ಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಬೊಮ್ಮಾಯಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಲಭ್ಯವಾಗಿದೆ.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದ ಲೋಕೇಶ್ ಟೇಕಲ್ ಅವರನ್ನು ಸಂಪರ್ಕಿಸಿ ಮಂಡಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ ಲೋಕೇಶ್ ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸ್‌ಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದು, ಈ ವಿಷಯವನ್ನು ಲಕ್ಷಣ ಸವದಿ ಮೊನ್ನೆ ಮೆಲ್ಮನೆಯಲ್ಲಿ ಪ್ರಸ್ತಾಪಿಸಿದ್ದರು.ಆಯುಷ್‌ಗೆ ಸಂಬಂಧಪಟ್ಟಂತೆ ಮೆಲ್ಮನೆಯಲ್ಲಿ ಆಯುಷ್ ವಿಧೇಯಕವನ್ನು ಮಂಡಿಸಲಾಗಿದೆ. ನಾಟಿ ವೈದ್ಯ ಲೋಕೇಸ್ ಟೆಕಲ್ ಈಗಾಗಲೇ ಕ್ಯಾನ್ಸರ್, ಬ್ಲಾಕ್ ಫಂಗಸ್, ಕೊರೊನಾ ಸೇರಿದಂತೆ ವಿವಿಧ ಖಾಯಿಲೆಗಳಿಗೆ ವನಸ್ಪತಿ ಔಷಧ ನೀಡಿ ಯಶಸ್ವಿಯಾಗಿದ್ದಾರೆ. 


Spread the love

About Laxminews 24x7

Check Also

ರೇಣುಕಾಸ್ವಾಮಿಗೆ ಎ5, ಎ13 ಆರೋಪಿಗಳಿಂದ ಎಲೆಕ್ಟ್ರಿಕ್ ಶಾಕ್: ನಟ ದರ್ಶನ್ ಪರ ವಕೀಲರ ಶಾಕಿಂಗ್ ಮಾಹಿತಿ

Spread the love ಬೆಂಗಳೂರು: ರೇಣುಕಾಸ್ವಾಮಿಗೆ ಆರೋಪಿ ಎ.5, ಎ.13ಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ. ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ