Breaking News
Home / ರಾಜಕೀಯ / ಹಿಂದೂ ಮಸೀದಿ, ಚರ್ಚ್‍ಗೆ ಹೋಗಬಹುದು, ಮತಾಂತರವಾದ್ರೆ ದೇವಸ್ಥಾನದ ಬಾಗಿಲು ಬಂದ್: ಸಿ.ಟಿ.ರವಿ

ಹಿಂದೂ ಮಸೀದಿ, ಚರ್ಚ್‍ಗೆ ಹೋಗಬಹುದು, ಮತಾಂತರವಾದ್ರೆ ದೇವಸ್ಥಾನದ ಬಾಗಿಲು ಬಂದ್: ಸಿ.ಟಿ.ರವಿ

Spread the love

ಚಿಕ್ಕಮಗಳೂರು: ಓರ್ವ ಹಿಂದೂವಾಗಿ ಜೀಸಸ್-ಅಲ್ಲಾ ದೇವರು ಎಂದು ಒಪ್ಪಿಕೊಳ್ಳಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವದಿದೆ. ಆದರೆ, ಇಸ್ಲಾಂ-ಕ್ರೈಸ್ತ ಆದ ಕೂಡಲೇ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಅವರಿಗೆ ಉಳಿದ ದೇವರುಗಳ ಬಗ್ಗೆ ನಿರಾಕರಣೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸರ್ವಧರ್ಮ ಸಮನ್ವಯದ ಕುರಿತು ಮಾತನಾಡಿದ್ದಾರೆ.

ಚಿಕ್ಕಮಗಳೂರು ನಗರಸಭೆ ಚುನಾವಣೆ ಹಿನ್ನೆಲೆ ಮತದಾನ ಮಾಡಿ ಮಾತನಾಡಿದ ಅವರು, ನಮ್ಮಲ್ಲಿ ಬಹುದೇವತಾರಾಧನೆ ಇದೆ. ಹಿಂದೂವಾಗಿ ಅಲ್ಲಾ-ಕ್ರೈಸ್ತನನ್ನು ಒಪ್ಪಿಕೊಳ್ಳಬಹುದು. ಹಿಂದೂ ಮಸೀದಿ, ಚರ್ಚೆಗೆ ಹೋಗಿ ಅಲ್ಲಾ-ಜೀಸಸ್ ದೇವರು ಎಂದು ಒಪ್ಪಿಕೊಳ್ಳಬಹುದು ಆದರೆ, ಮತಾಂತರವಾದ ಕೂಡಲೇ ಅಲ್ಲಿ ಬೇರೆ ದೇವರು, ದೇವಸ್ಥಾನದ ಬಾಗಿಲು ಮುಚ್ಚಲಿದೆ. ಈ ವಿಷಯದಲ್ಲಿ ಎರಡೂ ಧರ್ಮದವರು ಆಲೋಚನೆ ಮಾಡಬೇಕಿದೆ. ದೇವನೊಬ್ಬ ನಾಮ ಹಲವು. ಎಷ್ಟು ಮತಿ ಇದ್ಯೋ ಅಷ್ಟು ಮತ ಅನ್ನುವಂತಹಾ ಮುಕ್ತತೆಗೆ ಅವಕಾಶ ಸಿಗಲಿದೆ. ಬಹಳ ವಿಷಯದಲ್ಲಿ ಮುಗ್ಧತೆಯ ಪ್ರತಿಪಾದನೆ ಮಾಡುತ್ತಾರೆ. ಆದರೆ, ಈ ವಿಷಯದಲ್ಲಿ ಮೌನವಾಗುತ್ತಾರೆ. ಹಾಗಾಗಿ, ಎರಡೂ ಧರ್ಮದ ಧಾರ್ಮಿಕ ನೇತಾರರು ಚಿಂತಿಸಬೇಕು. ಅಲ್ಲಾ-ಈಶ್ವರ ದೇವರು ಎಂದು ಒಪ್ಪಿಕೊಂಡರೆ ಬಹುಶಃ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ. ಜೀಸಸ್-ಕೃಷ್ಣ ದೇವರು ಎಂದು ಒಪ್ಪಿಕೊಂಡರೆ ಸಂಘರ್ಷ ಇರುವುದಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತೆ ಎಂದಿದ್ದಾರೆ


Spread the love

About Laxminews 24x7

Check Also

ರೇಣುಕಾಸ್ವಾಮಿಗೆ ಎ5, ಎ13 ಆರೋಪಿಗಳಿಂದ ಎಲೆಕ್ಟ್ರಿಕ್ ಶಾಕ್: ನಟ ದರ್ಶನ್ ಪರ ವಕೀಲರ ಶಾಕಿಂಗ್ ಮಾಹಿತಿ

Spread the love ಬೆಂಗಳೂರು: ರೇಣುಕಾಸ್ವಾಮಿಗೆ ಆರೋಪಿ ಎ.5, ಎ.13ಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ. ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ