Breaking News
Home / ರಾಜಕೀಯ / ಆಗಸ್ಟ್‌ನಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ್ದ ವಾಟ್ಸಾಪ್

ಆಗಸ್ಟ್‌ನಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ್ದ ವಾಟ್ಸಾಪ್

Spread the love

ನವದೆಹಲಿ, ಅಕ್ಟೋಬರ್ 02: ಒಂದೇ ತಿಂಗಳಲ್ಲಿ 20 ಲಕ್ಷ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿರುವ ಮಾಹಿತಿ ಲಭ್ಯವಾಗಿದೆ.

ಆಗಸ್ಟ್‌ನಲ್ಲಿ ತಿಂಗಳಲ್ಲಿ ವಾಟ್ಸ್​​ಆಯಪ್​ ಕುರಿತಾಗಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳ ವಿಚಾರವಾಗಿ 420 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸಾಪ್ ಅನುಸರಣೆ ಡೇಟಾ ತೋರಿಸಿದೆ. ಆದಾಗ್ಯೂ, 421 ವರದಿಗಳ ಪೈಕಿ, ವಾಟ್ಸಾಪ್ 41 ಖಾತೆಗಳ ವಿರುದ್ಧ ಪರಿಹಾರ ಕ್ರಮಗಳನ್ನು ಕೈಗೊಂಡಿದೆ.

ವಾಟ್ಸಾಪ್​ ಸುಮಾರು 420 ಕುಂದುಕೊರತೆಯ ವರದಿಗಳನ್ನು ಆಗಸ್ಟ್‌ನಲ್ಲಿ ಪಡೆದಿದೆ ಎಂದು ವರದಿಯು ಬಹಿರಂಗಪಡಿಸಿದೆ.

ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ. ಸುಮಾರು 20,70,000 ಖಾತೆಗಳನ್ನು ಸ್ವಯಂಚಾಲಿತ ಅಥವಾ ಧೀರ್ಘ ಸಂದೇಶಗಳ ಅನಧಿಕೃತ ಬಳಕೆಎಂಬ ವಿಚಾರದ ಸಲುವಾಗಿ ನಿಷೇಧ ಮಾಡಿದೆ.

ಸದ್ಯ ಈ ಅಕೌಂಟ್‌ಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲವಾದರೂ ಶೀಘ್ರದಲ್ಲಿಯೇ ಈ ಆಯ್ಕೆ ಕೂಡ ವಾಟ್ಸಾಪ್‌ನಲ್ಲಿ ಇರಲಿದೆ. ಆದರೆ ಅದಕ್ಕೆ ಕಠಿಣ ನಿಯಮಗಳು ಇರಲಿವೆ ಎಂದು ಇತ್ತೀಚಿನ ವರದಿಯಲ್ಲಿ ಹೇಳಲಾಗಿತ್ತು.

ಜೂನ್ 16ರಿಂದ ಜುಲೈ 31ರವರೆಗೆ 30 ಲಕ್ಷ ಭಾರತೀಯರ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದ್ದು, ದುರುಪಯೋಗ ತಡೆಯಲು ಹಾಗೂ ದೂರು ಸ್ವೀಕಾರದ ಅನುಸಾರವಾಗಿ ಜಗತ್ತಿನಲ್ಲಿ ಪ್ರತಿ ತಿಂಗಳು ಸರಾಸರಿ 80 ಲಕ್ಷ ಖಾತೆಯನ್ನು ವಾಟ್ಸಾಪ್ ನಿಷೇಧಿಸುತ್ತಿದೆ.

ಈ ಮೊದಲು ವಾಟ್ಸಾಪ್ 46 ದಿನಗಳಲ್ಲಿ ಮೂರು ದಶಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ಬಹಿರಂಗಪಡಿಸಿದೆ. ಆನ್‌ಲೈನ್ ನಿಂದನೆಯನ್ನು ತಡೆಗಟ್ಟಲು ಮತ್ತು ಬಳಕೆದಾರರನ್ನು ವೇದಿಕೆಯಲ್ಲಿ ಸುರಕ್ಷಿತವಾಗಿರಿಸಲು ಜೂನ್ 16 ಮತ್ತು ಜುಲೈ 31 ರ ನಡುವೆ ಖಾತೆಗಳನ್ನು ಬ್ಯಾನ್​ ಮಾಡಿದೆ.

ಸ್ವೀಕರಿಸಿದ ವರದಿಗಳು ಮತ್ತು ದೂರುಗಳ ಆಧಾರದ ಮೇಲೆ WhatsApp ನಿಯಮ ಉಲ್ಲಂಘಿಸುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತು. WhatsApp ಹೆಚ್ಚಿನ ಅಥವಾ ಅಸಹಜವಾದ ಸಂದೇಶಗಳನ್ನು ಹೊಂದಿರುವ ಖಾತೆಗಳ ದಾಖಲೆಯನ್ನು ನಿರ್ವಹಿಸುತ್ತದೆ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತ ಈ ರೀತಿಯ ದುರುಪಯೋಗವನ್ನು ಪ್ರಯತ್ನಿಸುತ್ತಿರುವ ಲಕ್ಷಾಂತರ ಖಾತೆಗಳನ್ನು ನಿಷೇಧಿಸಿದೆ. ಭಾರತದಲ್ಲಿ ಸ್ವಯಂಚಾಲಿತ ಅಥವಾ ಧೀರ್ಘ ಸಂದೇಶ ಕಳುಹಿಸುವಿಕೆಯಲ್ಲಿ ತೊಡಗಿರುವ ಖಾತೆಗಳಲ್ಲಿ 95 ಪ್ರತಿಶತಕ್ಕೂ ಹೆಚ್ಚು ಕಂಡುಬಂದಿದೆ.

ವಾಟ್ಸಾಪ್ ವಕ್ತಾರ ಹೇಳಿಕೆಯಂತೆ ವಾಟ್ಸಾಪ್ ಬಳಕೆದಾರರಿಂದ-ಸುರಕ್ಷತಾ ವರದಿಯನ್ನು ಸ್ವೀಕರಿಸಿದೆ. ಜೊತೆಗೆ ದೂರುಗಳ ವಿವರಗಳನ್ನು ಪಡೆದಿದ್ದು, ಅದಕ್ಕೆ ಅನುಗುಣವಾದ ಕ್ರಮವನ್ನು ತೆಗೆದುಕೊಂಡಿದೆ, ಜೊತೆಗೆ ಪ್ಲಾಟ್‌ಫಾರ್ಮ್‌ ದುರುಪಯೋಗವನ್ನು ತಡೆಗಟ್ಟಲು ಕ್ರಮ ಕೈಗೊಂಡಿದೆ.

ಖಾತೆಗಳು ಹಾನಿಕಾರಕ ಅಥವಾ ಅನಗತ್ಯ ಸಂದೇಶಗಳನ್ನು ಪ್ರಮಾಣದಲ್ಲಿ ಕಳುಹಿಸುವುದನ್ನು ತಡೆಯುವುದು ಅಥವಾ ಅಸಹಜವಾದ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಗುರುತಿಸಿ ಸುಧಾರಿತ ಕ್ರಮವನ್ನು ವಾಟ್ಸಾಪ್ ಕೈಗೊಂಡಿದೆ.

ವಾಟ್ಸಾಪ್ ಕೆಲವೊಂದು ಸಾಧನಗಳಲ್ಲಿ ಬೆಂಬಲ ಸೂಚಿಸುವುದಿಲ್ಲವೆಂದಿದ್ದು, ಇನ್ನು 1 ತಿಂಗಳಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ವಾಟ್ಸಾಪ್ನವೆಂಬರ್​ 1 ರಿಂದ ಕೆಲವೊಂದು ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ ತಿಳಿಸಿದೆ.

ಆಯಂಡ್ರಾಯ್ಡ್​ 4.0.3 ಅಥವಾ ಅದಕ್ಕಿಂತ ಹಳೆಯ ಮತ್ತು ಐಒಎಸ್​ 9 ಹಾಗೂ ಅದಕ್ಕಿಂತ ಹಳೆಯ ಫೋನ್​ಗಳಿಗೆ ಬೆಂಬಲ ಸೂಚಿಸುವುದಿಲ್ಲ ಎಂದಿದೆ. ಅಷ್ಟು ಮಾತ್ರವಲ್ಲದೆ ಬೆಂಬಲ ಸೂಚಿಸದ ಕೆಲವೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.


Spread the love

About Laxminews 24x7

Check Also

ಕಲ್ಲಿದ್ದಲು ಆಮದು ಶೇ 13.2ರಷ್ಟು ಹೆಚ್ಚಳ

Spread the love ನವದೆಹಲಿ: ಏಪ್ರಿಲ್‌ ತಿಂಗಳಲ್ಲಿ 2.61 ಕೋಟಿ ಟನ್‌ ಕಲ್ಲಿದ್ದಲು ದೇಶಕ್ಕೆ ಆಮದಾಗಿದೆ ಎಂದು ಇ-ವಾಣಿಜ್ಯ ಸಂಸ್ಥೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ